ಮುಸ್ಲಿಂ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷೆಯಾಗಿ ಸಕೀನಾಬಿ ಲಾಹೋರಿ ಅವಿರೋಧವಾಗಿ ಆಯ್ಕೆ

ವಿಜಯ ಸಿಂಧೂರ ತಾಳಿಕೋಟೆ :

ಪಟ್ಟಣದ ದಿ. ಮುಸ್ಲಿಂ ಕೋ-ಆಪರೇಟಿವ ಬ್ಯಾಂಕ್ ಲಿಮಿಟೆಡ್ ಇದರ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ನಿರ್ದೇಶಕಿ ಸಕೀನಾಬಿ ಚಂದಸಾಬ ಲಾಹೋರಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಸಕೀನಾಬಿ ಚಂದಸಾಬ ಲಾಹೋರಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಚುನಾವಣಾ ಅಧಿಕಾರಿ ವಿಜಯಕುಮಾರ ಉತ್ನಾಳ ಅವರು ಸಕೀನಾಬಿ ಲಾಹೋರಿ ಅವಿರೋಧ ಆಯ್ಕೆ ಆಗಿರುವುದನ್ನು ಘೋಷಿಸಿದರು.

ಒಟ್ಟು 13 ನಿರ್ದೇಶಕರನ್ನು ಹೊಂದಿರುವ ಬ್ಯಾಂಕಿನ ಉಪಾಧ್ಯಕ್ಷರ ಈ ಚುನಾವಣೆಯಲ್ಲಿ 12 ಜನ ನಿರ್ದೇಶಕರು ಹಾಜರಿದ್ದು ಒಬ್ಬ ನಿರ್ದೇಶಕ ಗೈರಾಗಿದ್ದರು. ಬ್ಯಾಂಕಿನ ವ್ಯವಸ್ಥಾಪಕ ಎಲ್.ಆರ್.ನಾಗೂರ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.

ವಿಜಯೋತ್ಸವ:

ಸಕೀನಾಬಿ ಲಾಹೋರಿ ಉಪಾಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆಯೇ ಅವರ ಅಪಾರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಮಹೆಬೂಬ ಕೆಂಭಾವಿ ಮಾತನಾಡಿ ನಮ್ಮ ಪೆನಲ್ ನವರಾದ ಸಕೀನಾಬಿ ಲಾಹೋರಿ ಇವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ ಎಲ್ಲರೂ ಒಂದಾಗಿ ಬ್ಯಾಂಕಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದರು.

ನಿರ್ದೇಶಕ ಇಬ್ರಾಹಿಂ ಮನ್ಸೂರ ಮಾತನಾಡಿ ಎಲ್ಲ ನಿರ್ದೇಶಕರ ಸರ್ವಾನುಮತದಿಂದ ಲಾಹೋರಿ ಅವರ ಅವಿರೋಧ ಆಯ್ಕೆ ಮಾಡಲಾಗಿದೆ ಅವರಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡಲಾಗುವುದು ಎಂದರು.

ನಿರ್ದೇಶಕರಾದ ಚಂದಾಹುಸೇನ ಖಾಂಜಾದೆ,ರಫೀಕ ಬೇಪಾರಿ, ಮಹಮ್ಮದ್ ಇಸ್ಮಾಯಿಲ (ತನ್ವೀರ) ಮನಗೂಳಿ,ದಾದೇಪೀರ ಚೌದ್ರಿ, ಮುರ್ತುಜಾ(ಮುನ್ನಾ) ಅರ್ಜುಣಗಿ, ಮಹಮ್ಮದ್ ಆದಾಮ ಅತ್ತಾರ, ಸಿಕಂದರಬಾಶಾ ಡೋಣಿ, ಮೊಹಮ್ಮದ್ ಶಫೀಕ ಇನಾಮದಾರ, ಮಾಜಾನಬಿ ಚೆನ್ನೂರ, ಮುಖಂಡರಾದ ಅಬ್ದುಲ್ ಗನಿಸಾಬ ಲಾಹೋರಿ, ಮಾಸೂಮಸಾಬ ಕೆಂಭಾವಿ,ಖಾಜಾಹುಸೇನ ಸಗರ, ಹಸನಸಾಬ ಮನಗೂಳಿ,ಜೈಭೀಮ ಮುತ್ತಗಿ,ಬಾಬಾ ಮನಗೂಳಿ(ವಿಜಾಪುರ), ಹೈದರಶಾ ಮಕಾನದಾರ,ಶಬ್ಬೀರ ಲಾಹೋರಿ, ಹುಸೇನ ಲಾಹೋರಿ, ಬುಡ್ಡಾ ಎಕೀನ, ಅಬೂಬಕರ ಲಾಹೋರಿ,ನಬಿ ಲಾಹೋರಿ, ಉಸ್ಮಾನ ಲಾಹೋರಿ,ಜಾಕೀರ ಲಾಹೋರಿ, ಮೆಹೆಬೂಬ ಲಾಹೋರಿ, ರಸೂಲ ಶಾಪೂರಿ, ಯೂಸೂಫ ನಾಡಗೌಡ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!