ಸನ್ ಸ್ಟ್ರೋಕ್ – ಹೀಟ್ ಸ್ಟ್ರೋಕ್ ಗೆ ಸ್ಪೇಷಲ್ ಬೆಡ್ ವ್ಯವಸ್ಥೆ..!

ವಿಜಯ ಸಿಂಧೂರ ನರಗುಂದ

ಪ್ರಸ್ತುತ ಸಂದರ್ಭದಲ್ಲಿ ರಾಜ್ಯಾದ್ಯಂತ ಭೀಕರ ರಣ ಬಿಸಿಲು ತಾಂಡವಾಡುತ್ತಿದೆ. ಬಿಸಿಲಿನ ವಿಪರೀತ ತಾಪಕ್ಕೆ ಜನತೆ ತತ್ತರಿಸುತ್ತಿದೆ.
ಈ ಬೇಸಿಗೆ ಬಿಸಿಲು ಗದಗ ಜಿಲ್ಲೆಯಲ್ಲಿ ಸುಮಾರು 39-40 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಹೆಚ್ಚಾಗಿದೆ.

ನರಗುಂದ ಪಟ್ಟಣದಲ್ಲಂತೂ ಜನರು ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಜಾನೆ 10 ಗಂಟೆಯ ಹೊತ್ತಿಗೆ ಶೇ. 35 ರಷ್ಟು ತಾಪಮಾನ ಆರಂಭವಾಗುತ್ತಿದೆ. ಮಧ್ಯಾನ್ಹ ಹೊತ್ತಿಗೆ 39-40 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ಹೆಚ್ಚಾಗಿದೆ.

ಇದರಿಂದ ವಯೋವೃದ್ಧ,ಮಕ್ಕಳು, ಆರೋಗ್ಯ ತೊಂದರೆ ಇರುವವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು,ವಾಂತಿ ಭೇದಿ, ಜ್ವರ ಸೇರಿದಂತೆ ವಿವಿಧ ರೋಗಕ್ಕೆ ತುತ್ತಾಗುತ್ತಿದ್ದಾರೆ. ಭಯಂಕರ ಬಿಸಲು ಆರಂಭವಾಗುತ್ತಿದ್ದಂತೆ ಉಷ್ಣಾಂಶ ಹೆಚ್ಚಾಗುತ್ತಿದೆ ಇದರಿಂದ ಸನ್ ಸ್ಟ್ರೋಕ್, ಹೀಟ್ ಸ್ಟ್ರೋಕ್ ನಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಹೀಗಾಗಿ ತಾಲೂಕು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗಳಲ್ಲಿ ಬೆಡ್ ಗಳ ವ್ಯವಸ್ಥೆ ಮಾಡಿದ್ದಾರೆ.

ಐಸಿಯು ಬೆಡ್ ಗಳನ್ನು ಮೀಸಲು ಇಟ್ಟಿದ್ದು,ಐದೂ ಬೆಡ್ ಗಳನ್ನೂ ಏಸಿಯಾಗಿ ಪರಿವರ್ತನೆಗೋಳಿಸಿ, ಐದು ಬೆಡ್ ಗಳನ್ನು ಮೀಸಲು ಇಡಲಾಗಿದೆ. ಬಿಸಿಲಿನಿಂದ ಬಸವಳಿದ ಚಿಕಿತ್ಸೆಗಾಗಿ ಬರುವ ಜನರಿಗೆ ಮೆಡಿಸಿನ್ ವ್ಯವಸ್ಥೆ ಮಾಡಿದ್ದಾರೆ. ಸ್ಪೇಷಲ್ ವಾರ್ಡ್ ಗೆ ಎಸಿ ವ್ಯವಸ್ಥೆ ಮಾಡಲಾಗಿದೆ. ಹೀಟ್ ಹಾಗೂ ಸನ್ ಸ್ಟ್ರೋಕ್ ನಿಂದ ಬಳಲುವ ರೋಗಿಗಳನ್ನು ತಂಪಾಗಿಸಲು ವೈದ್ಯರು ತಯಾರಿ ಮಾಡಿದ್ದಾರೆ..

ಈ ಕುರಿತು ವಿಜಯ ಸಿಂಧೂರ ನ್ಯೂಸ್ ನೊಂದಿಗೆ ತಾಲೂಕು ವೈದ್ಯಾಧಿಕಾರಿ ಭಧ್ರಗೌಡ ಮಾತನಾಡಿ,ರಾಜ್ಯ ಸರ್ಕಾರದ ಆದೇಶದ ಮೇರೆಗೆ ತಾಲೂಕಾಸ್ಪತ್ರೆಯಲ್ಲಿ ಸನ್ ಸ್ಟ್ರೋಕ್ ಹಾಗೂ ಹಿಟ್ ಸ್ಟ್ರೋಕ್ ನಿಂದ ಬಳಲುವ ರೋಗಿಗಳಿಗೆ ಬೆಡ್ ಗಳನ್ನು ಮೀಸಲು ಇಡಲಾಗಿದೆ. ಐದು ಬೆಡ್ ಗಳ ಸ್ಪೇಷಲ್ ವಾರ್ಡ್ ರಡಿಮಾಡಲಾಗಿದೆ.

ಬಿಸಿಲಿನ ತಾಪಮಾನ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಜನರು ಬಿಸಿಲಿನಲ್ಲಿ ದೇಹವನ್ನು ತಂಪಾಗಿ ಇಟ್ಟಿಕೊಳ್ಳಬೇಕಿದೆ. ತಂಪು ಪಾನೀಯಗಳು, ಹಣ್ಣು ಹಂಪಲು, ಮಜ್ಜಿಗೆ ಸೇವನೆ ಮಾಡಬೇಕಿದೆ. ಮುಂಜಾನೆ 11 ಗಂಟೆಯಿಂದ ಸಾಯಂಕಾಲ 4 ಗಂಟೆಯವರಿಗೆ ಜನರು ಯಾರು ಹೊರಗಡೆ ಓಡಾಡ ಮಾಡಬಾರದು. ಬಿಸಿಲಿನ ತಾಪಮಾನ ಹೆಚ್ಚಾಗಿದೆ‌.

ಸನ್ ಸ್ಟ್ರೋಕ್ ಹಾಗೂ ಹಿಟ್ ಸ್ಟ್ರೋಕ್ ಬರುವ ಸಾಧ್ಯತೆ ಇದೆ. ಹೀಗಾಗಿ ಜನತೆ ತಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಬೇಕಿದೆ ಎಂದು ಹೇಳಿದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!