ಅಂಬೇಡ್ಕರ್, ಬಾಜೂಜಿ ದೇಶದ ಎರಡು ಕಣ್ಣು

ವಿಜಯ ಸಿಂಧೂರ ರೋಣ

ಬಾಬೂಜಿ ದೇಶದ ಹಸಿರು ಕ್ರಾಂತಿಯ ಆಹರಿಕಾರನಾಗಿ, ಕಾರ್ಮಿಕರ ಕಲ್ಯಾಣಕಾರಕರಾಗಿ, ಯುದ್ಧ ಸಂದರ್ಭದಲ್ಲಿ ಗೃಹಸಚಿವರಾಗಿ ದೇಶದ ಘನತೆ, ಗೌರವ ಹೆಚ್ಚಿಸಿದ್ದಾರೆ. ಅಂಬೇಡ್ಕರ್ ಅವರು ಸಂವಿದಾನ ರಚಿಸುವ ಮೂಲಕ ಜಗತ್ತಿಗೆ ಮಾದರಿಯಾಗಿದ್ದು, ಬಾಜೂಜಿ,ಅಂಬೇಡ್ಕರರು ದೇಶಕ್ಕೆ ಎರಡು ಕಣ್ಣುಗಳಿದ್ದಂತೆ ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ೧೩೫ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ೧೧೯ನೇ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಮಹನೀಯರ ಜಯಂತಿ ಸಂದರ್ಭದಲ್ಲಿ ಅವರ ಆದರ್ಶಗಳೆಲ್ಲವನ್ನು ಬದಿಗಿಟ್ಟು ಅವರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಿ ನೋಡುತ್ತಿರುವುದು ತಪ್ಪು. ವೈಯುಕ್ತಿಕ ವೈಮನಸ್ಸು ಇದ್ದರೂ ಅವೆಲ್ಲವನ್ನು ಬದಿಗಿಟ್ಟು ಮಹನೀಯರ ಜಯಂತಿ ಆಚರಿಸಲು ಮುಂದಾಗಬೇಕಿದೆ. ಅಂಬೇಡ್ಕರ್ ಈ ದೇಶಕ್ಕೆ ಸಂವಿಧಾನಕೊಟ್ಟರೆ ಬಾಬೂಜಿ ಆ ಸಂವಿಧಾನ ಜಾರಿಗೆ ಧ್ವನಿ ಕೊಟ್ಟವರಗಿದ್ದಾರೆ ಎಂದರು.

ಡಾ. ಅಂಬೇಡ್ಕರ್ ಹಾಗೂ ಡಾ. ಬಾಬುಜಿ ಅವರ ಜೀವನದ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಬಡತನವು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಇವರ ಜೀವನವೇ ಸ್ಪಷ್ಟಪಡಿಸುತ್ತದೆ, ಡಾ. ಅಂಬೇಡ್ಕರ್ ಅವರು ಬಡವರ ಹಾಗೂ ಹಿಂದುಳಿದ ವರ್ಗಗಳ ಉನ್ನತಿಗಾಗಿ ತಮ್ಮ ಸಂಪೂರ್ಣ ಜೀವನವನ್ನು ಅರ್ಪಿಸಿದ್ದು, ಸಮಾನತೆ ಆಧಾರಿತ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಭಾರತೀಯ ಸಂವಿಧಾನವನ್ನು ರೂಪಿಸಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದ ಮಹತ್ವದ ವ್ಯಕ್ತಿತ್ವ ಎಂದರು

ಪುರಸಭೆ ಮ್ಯಾನೇಜರ್ ಕಂದಗಲ್ ಮಾತನಾಡಿ, ಡಾ.ಬಾಬಾಸಾಹೇಬರು ಅರ್ಥಶಾಸ್ತ್ರ, ಇತಿಹಾಸ ಹಾಗೂ ಮನಶಾಸ್ತ್ರ ಸೇರಿದಂತೆ ಹಲವು ವಿಷಯಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಡಾ. ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಯ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ಜಾತಿ ಪದ್ಧತಿಯನ್ನು ನಿರ್ಮೂಲಗೊಳಿಸಿ ಸಮಾನತೆ ಸ್ಥಾಪನೆಗೆ ಅವರು ಕೈಗೊಂಡ ಪ್ರಯತ್ನಗಳು ಶ್ಲಾಘನೀಯ ಎಂದರು
ಅಂಬೇಡ್ಕರ್ ಅವರ ಸೇವೆಯನ್ನು ಮನಗಂಡು ಅಂದಿನ ಪ್ರಧಾನಮಂತ್ರಿ ವಿ.ಪಿ. ಸಿಂಗ್ ಅವರು ಅವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವೂ ಅವರ ಸ್ಮರಣಾರ್ಥ ಪಂಚತೀರ್ಥ ಕ್ಷೇತ್ರಗಳನ್ನು ಘೋಷಿಸಿ ಅಭಿವೃದ್ಧಿಪಡಿಸಿರುವುದನ್ನು ಅವರು ಉಲ್ಲೇಖಿಸಿದರು.

ಕಂದಾಯ ನಿರೀಕ್ಷಕ ಸಂತೋಷ್ ಚವ್ಹಾಣ ಮಾತನಾಡಿ,ಸಂವಿಧಾನದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಅಳವಡಿಸಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಿದ ಮಹಾನ್ ನಾಯಕ ಡಾ. ಅಂಬೇಡ್ಕರ್.ಅಂಬೇಡ್ಕರ್ ಅವರ ತಂದೆಯ ಪ್ರೇರಣೆ ಅವರ ಜೀವನದಲ್ಲಿ ಮಹತ್ವದ ತಿರುವಾಗಿದ್ದು, ಬಾಲ್ಯದಲ್ಲೇ ದೃಢನಿಶ್ಚಯ ಬೆಳೆಸಲು ಕಾರಣವಾಯಿತು. ಕಷ್ಟಕರ ಪರಿಸ್ಥಿತಿಗಳ ನಡುವೆಯೂ ಶಿಕ್ಷಣದ ಮೂಲಕ ಅವರು ಎತ್ತರಕ್ಕೇರಿದ ರೀತಿಯನ್ನು ವಿವರಿಸಿ, ಅಸ್ಪೃಶ್ಯತೆ ವಿರುದ್ಧ ಅವರ ನಿರಂತರ ಹೋರಾಟವನ್ನು ಅವರು ಮನದಟ್ಟು ಮಾಡಿದರು” ಎಂದು ಹೇಳಿದರು.

ಫರೀದ ಸರ್ವರ್ ಮಾತನಾಡಿ,ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ ಮಹಾನ್ ವ್ಯಕ್ತಿ.ತಮ್ಮ ಬಾಲ್ಯದ ನೋವು ಮತ್ತು ಅನುಭವಗಳನ್ನು ಸಮಾಜದ ಇತರರು ಅನುಭವಿಸಬಾರದು ಎಂಬ ದೃಢ ಸಂಕಲ್ಪದಿಂದ ಅವರು ಸಮಾನತೆಗಾಗಿ ಜೀವನಪರ್ಯಂತ ಹಗಲಿರುಳು ಹೋರಾಡಿದರು ಎಂದರು

ಎಸ್.ಡಿ.ಎ ಜಯಶ್ರೀ ಬೂಳಣ್ಣವರ ಮಾತನಾಡಿ, ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಅವರ ಮೂರು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಬಲ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು

ಈ ಸಮಯದಲ್ಲಿ ಎಚ ಎನ್ ಬಳ್ಳಾರಿ,ಎಮ್. ಬಿ. ಕಾಳೆ, ಲಕ್ಷ್ಮಣ ಹೊಸಮನಿ, ರಾಜು ಮಾಡಲಗೇರಿ, ಶಿವು ಕಿರೇಸೂರ, ಬಸವರಾಜ ಕಿರೇಸೂರ, ಎಮ್. ಎ. ಮುಲ್ಲಾ, ರವಿ ಜೋಗಣ್ಣವರ, ಪರಸಪ್ಪ ಚಲವಾದಿ, ಸಾಯಿಕುಮಾರಿ, ಪ್ರಮೀಳಾ ಕುರಿ, ಲಕ್ಷ್ಮಣ ಹಾದಿಮನಿ, ಬಸವರಾಜ ಹೊಂಬಳ ಸೇರಿದಂತೆ ಅನೇಕರು ಇದ್ದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!