ಪುರಾಣ-ಪ್ರವಚನಗಳಿಂದ ಮಾನಸಿಕ ನೆಮ್ಮದಿ: ಬಿ. ಎಸ್.ಪಾಟೀಲ

ತಾಳಿಕೋಟೆ: ಹಿಂದೆ ಗುರುವಿನ ಆಶೀರ್ವಾದವಿತ್ತು, ಪ್ರಾಮಾಣಿಕ ಬದುಕಿತ್ತು, ಕಷ್ಟಗಳ ಮಧ್ಯೆಯೂ ಸುಖ ನೆಮ್ಮದಿಯಿತ್ತು. ಆದರೆ ಇಂದು ಬಡತನ ತೊಲಗಿ ಸುಖವಿದೆ ಎಂದುಕೊಂಡರೂ ಶಾಂತಿ-ನೆಮ್ಮದಿ ಉಳಿದಿಲ್ಲಈ ಶಾಂತಿ ನೆಮ್ಮದಿಗೆ ಪುರಾಣ ಪ್ರವಚನಗಳು ನಮಗೆ ದಾರಿದೀಪವಾಗಿವೆ ಎಂದು ವಿಡಿಸಿಸಿ ನಿರ್ದೇಶಕ ಬಿ.ಎಸ್.ಪಾಟೀಲ ಯಾಳಗಿ ಹೇಳಿದರು.

ಅವರು ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ತಾಯಿಯ ದೇವಸ್ಥಾನದಲ್ಲಿ ಇದೇ ಮೇ 10ರಂದು ಜರುಗುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿಯ 604ನೆಯ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿರುವ ವರದಾನಿ ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಪ್ರವಚನ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುರಾಣ ಪ್ರವಚನಕಾರ ಯಾಳಗಿಯ ಸೋಮಶೇಖರಮಠದ ವೇ.ಮೂ .ಬಸಯ್ಯ ಶಾಸ್ತ್ರೀಯವರು ವರದಾನಿ ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಪ್ರವಚನಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಸಾನ್ನಿಧ್ಯವಹಿಸಿದ್ದ ಶಾಂತಮ್ಮತಾಯಿ ಕೋಳೂರ, ನೇತೃತ್ವ ವನ್ನು ವಹಿಸಿರುವ ಸಿ.ಎಂ ಹಿರೇಮಠ ಹಾಗೂ ಎಸ್.ಎಂ.ಬೇನಾಳಮಠ, ಅತಿಥಿಗಳಾಗಿ ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಭಾಜಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜೆ.ಎಸ್.ಜಿ ಫೌಂಡೇಶನ್ ಕಾರ್ಯದರ್ಶಿ ಶ್ರೀಕಾಂತ ಪತ್ತಾರ, ಹುಣಶ್ಯಾಳ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಸ್.ಗಡೇದ, ಸಂಗೀತಸೇವೆ ನೀಡುತ್ತಿರುವ ಸ್ಥಳೀಯ ಖಾಸ್ಗತೇಶ್ವರ ಸಂಗೀತಪಾಠ ಶಾಲೆಯ ಗವಾಯಿ ಮಡಿವಾಳಯ್ಯ ಯಲಗೋಡ, ಹಾಗೂ ತಬಲಾ ಸಾಥಿಯಾಗಿ ಪ್ರವೀಣ ಪತ್ತಾರ ಉಪಸ್ಥಿತರಿದ್ದರು.

ಬಾಲೆ ಸೌಮ್ಯಾ ಪಾಟೀಲ ಭರತ ನಾಟ್ಯ ಪ್ರದರ್ಶನ ನೀಡಿದಳು. ಶಿಕ್ಷಕಿ ಪ್ರತಿಭಾ ಬಿರಾದಾರ ಪ್ರಾರ್ಥಿಸಿದರು. ಶಿಕ್ಷಕ ಅಪ್ಪಾಸಾಹೇಬಗೌಡ ಮೂಲಿಮನಿ ನಿರ್ವಹಿಸಿದರು. ಹೇಮರಡ್ಡಿ ಮಲ್ಲಮ್ಮ ಅಸೋಶಿಯೇಶನ್ ಉಪಾಧ್ಯಕ್ಷ ಎಚ್.ಎಸ್.ಪಾಟೀಲ, ಸ್ವಾಗತಿಸಿದರು.ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಸುಮಂಗಲಾ ಕೋಳೂರ ಹಾಗೂ ರುದ್ರಮ್ಮ ದೇಸಾಯಿ, ಬಿ.ಎಸ್.ದ್ಯಾಪುರ, ಸಂಗನಗೌಡ ಅಸ್ಕಿ, ಎಸ್.ಐ.ಕಡಕೋಳ, ರವೀಂದ್ರ ಪಾಟೀಲ, ಶಶಿಧರ ಓತಗೇರಿ, ಶಶಿಧರ ಕೇಸರಭಾವಿ, ದ್ರಾಕ್ಷಾಯಿಣಿ ಮದರಕಲ್ಲ, ಸವಿತಾ ಅಸ್ಕಿ, ಮಲ್ಲಣ್ಣ ಮೇಟಿ, ಬಸರಕೋಡ, ಪ್ರವೀಣ ರೆಡ್ಡಿ ಇತರರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!