ವಿಜಯ ಸಿಂಧೂರ ಸಿಂದಗಿ
ಪಟ್ಟಣದ ದಿನದಿಂದ ದಿನಕ್ಕೆ ಅತ್ಯಂತ ವೇಗವಾಗಿ ಬೆಳೆಯುತ್ತಲಿದೆ. ನಗರದ ಸೌಂದರ್ಯಿಕರಣಕ್ಕೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ತುಂಬಾ ಇದೆ ಆ ನಿಟ್ಟಿನಲ್ಲಿ ಅನೇಕ ಕಾಮಗಾರಿಗಳನ್ನು ನಗರದ ಅಭಿವೃದ್ದಿಗೆ ರೂಪಿಸುತ್ತಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಲೋಕೋಪಯೋಗಿ ಇಲಾಖೆಯ ೨೦೨೫-೨೬ ನೇ ಸಾಲಿನ ಮುಖ್ಯಮಂತ್ರಿ ಮೂಲಭೂತ ಸೌಕರ್ಯ ಅಭಿವೃದ್ದಿ ಯೋಜನೆಯಡಿಯಲ್ಲಿ ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಿಂದ ಚಿಕ್ಕಸಿಂದಗಿ ಬೈಪಾಸ್ ವರೆಗೆ ಮೀಡಿಯನ್( ಡಿವೈಡರ್) ನಿರ್ಮಾಣಕ್ಕಾಗಿ ರೂ ೬೨ ಲಕ್ಷಗಳ ಅನುದಾನದ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಸಿಂದಗಿ ಮತಕ್ಷೇತ್ರದ ಅನೇಕ ಹಳ್ಳಿಗಳಲ್ಲಿ ನೂರಾರು ಕಾಮಗಾರಿಗಳು ಪ್ರಾರಂಭಗೊoಡಿವೆ. ಈಗಾಗಲೇ ನಗರದ ಗಾಂಧಿ ವೃತ್ತದಿಂದ ಡಾಲ್ಪಿನ್ ಹೋಟೆಲ ವರೆಗೆ ರಸ್ತೆ, ಡಿವೈಡರ್ ಮತ್ತು ವಿದ್ಯುತ್ತು ಅಳವಡಿಕೆಯ ಕಾಮಗಾರಿ ನಡೆಯುತ್ತಿದೆ. ಪ್ರತಿ ಹಳ್ಳಿಗಳಲ್ಲಿ ಸಮೂದಾಯ ಭವನ, ರಸ್ತೆ, ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳು, ಶಾಲಾ ಕಟ್ಟಡಗಳ ಕಾಮಗಾರಿ ಸೇರಿದಂತೆ ಅನೇಕ ಮೂಲ ಸೌಕರ್ಯಗಳ ಯೋಜನೆಗಳು ಮಂಜೂರಾಗಿದ್ದು ಹಂತ ಹಂತವಾಗಿ ರೂಪಿಸುವ ಯೋಜನೆ ಮಾಡಲಾಗಿದೆ ಎಂದರು
ನಾನು ಶಾಸಕನಾದ ಮೇಲೆ ಶಾಶ್ವತ ಯೋಜನೆಗಳಿಗೆ ಮೊದಲು ಆದ್ಯತೆ ನೀಡುತ್ತಿದ್ದು ಅದರಲ್ಲಿ ಕೇಲವು ಪೂರ್ಣಗೊಂಡಿವೆ ಇನ್ನು ಅನೇಕ ಶಾಶ್ವತ ಯೋಜನೆಗಳ ಕಾಮಗಾರಿಗಳನ್ನು ಬಾಕಿ ಇದ್ದು ಅವುಗಳನ್ನು ಮುಂದಿನ ದಿನಮಾನಗಳಲ್ಲಿ ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ, ತಾಲೂಕಾ ಕೆಡಿಪಿ ಸದಸ್ಯರಾದ ಖಾದಿರ ಬಂಕಲಗಿ, ಆಲಮೇಲ ತಾಲೂಕಿನ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಕೋಳಾರಿ, ಸಾಯಬಣ್ಣ ಪುರದಾಳ, ವೈ.ಸಿ.ಮಯೂರ, ಪರುಶುರಾಮ ಕಾಂಬಳೆ, ಪ್ರಭು ವಾಲಿಕಾರ, ಶಿವು ಡೋಣುರ, ಗುತ್ತಿಗೇದಾರ ಮಲ್ಲಿಕಾರ್ಜುನ ಶಂಬೇವಾಡ, ಮಹೇಶ ಮನಗೂಳಿ, ಭೀಮನಗೌಡ ಬಿರಾದಾರ, ಷಣ್ಮುಖಯ್ಯ ಹಿರೇಮಠ, ರಮೇಶ ನಡುವಿನಕೇರಿ, ಪರುಶುರಾಮ ಬಗಲಿ, ಜಯಶ್ರೀ ಹದನೂರ, ಸುನಂದಾ ಯಂಪೂರೆ, ಶಾರದಾ ಬೇಟಗೇರಿ, ಅಭಿಯಂತರ ಸುನೀಲ ಪಾಟೀಲ ಸೇರಿದಂತೆ ಇತರರು ಇದ್ದರು.
