ಎಸ್, ಎಸ್ ಎಲ್ ಸಿ,ಮರು ಮೌಲ್ಯಮಾಪನ: 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೈಲೇಶ್ವರ ಬ್ರಿಲಿಯಂಟ್ ಶಾಲೆಯ ಗಂಗಾ ಕೋಳೂರ

ವಿಜಯ ಸಿಂಧೂರ ತಾಳಿಕೋಟೆ

ಇತ್ತೀಚೆಗೆ ಪ್ರಕಟವಾದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆ-1ರ ಮರು ಮೌಲ್ಯಮಾಪನದಲ್ಲಿ ತಾಳಿಕೋಟಿ ಸಮೀಪದ ಮೈಲೇಶ್ವರದ ‘ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ’ಯ ವಿದ್ಯಾರ್ಥಿನಿ ಕುಮಾರಿ ಗಂಗಾ ಅಶೋಕ ಕೋಳೂರ ಅವರು 625 ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ (1st Rank) ಹಾಗೂ ಇನ್ನೊರ್ವ ವಿದ್ಯಾರ್ಥಿನಿ ಅಶ್ವಿನಿರೆಡ್ಡಿ ವಂದಲಿ 622 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಈ ಅತ್ಯುನ್ನತ ಸಾಧನೆಯ ಮೂಲಕ ವಿದ್ಯಾರ್ಥಿನಿ ಗಂಗಾ ಕೋಳೂರ ಅವರು ಇಡೀ ರಾಜ್ಯದ ಗಮನ ಸೆಳೆದಿದ್ದು, ವಿಜಯಪುರ ಜಿಲ್ಲೆಗೆ, ತಾಳಿಕೋಟಿ ತಾಲೂಕಿಗೆ ಹಾಗೂ ತಮ್ಮ ಶಾಲೆಗೆ ಅಪಾರ ಕೀರ್ತಿಯನ್ನು ತಂದಿದ್ದಾರೆ.

ಪಾಲಕರ ಹರ್ಷ:

ತಮ್ಮ ಮಗಳ ಈ ಅಭೂತಪೂರ್ವ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿರುವ ವಿದ್ಯಾರ್ಥಿನಿಯ ಪಾಲಕರಾದ ಶ್ರೀ ಅಶೋಕ ಕೋಳೂರ , “ನಮ್ಮ ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ನಮಗೆ ಅತೀವ ಹೆಮ್ಮೆ ಮತ್ತು ಸಂತೋಷ ತಂದಿದೆ. ಅವಳ ನಿರಂತರ ಅಧ್ಯಯನ, ಶ್ರದ್ಧೆ ಹಾಗೂ ಬ್ರಿಲಿಯಂಟ್ ಶಾಲೆಯ ಶಿಕ್ಷಕರು ನೀಡಿದ ಅತ್ಯುತ್ತಮ ಮಾರ್ಗದರ್ಶನವೇ ಈ ಸಾಧನೆಗೆ ಮುಖ್ಯ ಕಾರಣ. ಶಾಲೆಯ ಆಡಳಿತ ಮಂಡಳಿಯ ಪ್ರೋತ್ಸಾಹಕ್ಕೂ ನಾವು ಚಿರಋಣಿಯಾಗಿದ್ದೇವೆ. ಅವಳು ಭವಿಷ್ಯದಲ್ಲಿ ಉನ್ನತ ವ್ಯಾಸಂಗ ಮಾಡಿ ಇನ್ನಷ್ಟು ಕೀರ್ತಿ ತರುವಂತಾಗಲಿ” ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿನಿಯ ಈ ಸಾಧನೆಗೆ ಶ್ರೀ ಮಾರುತಿ ಶಿಕ್ಷಣ ಸಂಸ್ಥೆ (ರಿ.) ತಾಳಿಕೋಟಿ ಇದರ ಆಡಳಿತ ಮಂಡಳಿ, ಬ್ರಿಲಿಯಂಟ್ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಮಸ್ತ ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ಅತೀವ ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿನಿಯ ಉಜ್ವಲ ಭವಿಷ್ಯಕ್ಕೆ ಹೃದಯಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!