ವಿಜಯ ಸಿಂಧೂರ, ಮುಂಡರಗಿ
ನಮ್ಮ ಬದುಕಿನಲ್ಲಿ ಸಾಕಷ್ಟು ರೀತಿಯ ಸಂಪ್ರದಾಯ, ಪರಂಪರೆ, ಪದ್ಧತಿ, ರೀತಿ – ನೀತಿಗಳನ್ನು ಆಚರಿಸುತ್ತೇವೆ. ನಮ್ಮ ಪೂರ್ವಜರನ್ನು, ಹಿರಿಯರನ್ನು ವರ್ಷಕ್ಕೊಮ್ಮೆಯಾದರೂ ಸ್ಮರಿಸುವಂಥ, ನಮ್ಮನ್ನು ಅಗಲಿದ ಅವರಿಗೆ ಗೌರವ ಸಲ್ಲಿಸುವಂಥ ಆಚರಣೆಗಳು ನಮ್ಮಲ್ಲಿ ಮಾತ್ರವಲ್ಲದೆ ವಿಶ್ವದ ಅನೇಕ ಕಡೆಗಳಲ್ಲಿ ಇರುವುದು ನಮಗೆಲ್ಲ ತಿಳಿದಿರುವಂಥದ್ದು,ಬಾಳಿಗೆ ಪ್ರೇರಣೆಯಾಗುವ ಹಿರಿಯರ ಸ್ಮರಣೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಹೇಳಿದರು
ಅವರು ಶನಿವಾರ ಮುಂಡರಗಿ ತಾಲೂಕು ಅತ್ತಿಕಟ್ಟಿ ಗ್ರಾಮದ ಶ್ರೀ ರಾಮಣ್ಣ ಮೇಗಲಮನಿ ಇವರ ಕುಟುಂಬದವರ ಹಿರಿಯರ ಸವಿನೆನಪಿಗಾಗಿ ಏರ್ಪಡಿಸಿದ್ದ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ನಾವೂ ಕೂಡ ಮಹಾಲಯ ಆಚರಣೆ ಸಮಯದಲ್ಲಿ, ಇನ್ನು ಕೆಲವರು ದೀಪಾವಳಿಯ ಪಾಡ್ಯ ದಿನ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಕುಟುಂಬದ ಹಿರಿಯರನ್ನು ಸ್ಮರಿಸಿಕೊಳ್ಳುವ ಪದ್ಧತಿಯಿದೆ. ಈ ಸಂದರ್ಭದಲ್ಲಿ ನಮ್ಮನ್ನಗಲಿದ ಹಿರಿಯರಿಂದ ನಾವು ಪಡೆದ ಬಳುವಳಿ ಅವರ ಯೋಚನೆಗಳು, ಚಿಂತನೆಗಳು ಮಾರ್ಗದರ್ಶನಗಳನ್ನೆಲ್ಲ ಸ್ಮರಿಸಿಕೊಳ್ಳಬೇಕಾದ ಅಗತ್ಯವೂ ಇದೆ ಎಂದರು

ಹಿರಿಯರ ಸ್ಮರಣೆಯು ನಮ್ಮ ಪೂರ್ವಜರ ತ್ಯಾಗ, ಸರಳತೆ ಮತ್ತು ಆದರ್ಶಗಳನ್ನು ಗೌರವಿಸುವ ಮೂಲಕ ಜೀವನಕ್ಕೆ ಸ್ಪೂರ್ತಿ ಪಡೆಯುವ ಅರ್ಥಪೂರ್ಣ ಆಚರಣೆಯಾಗಿದೆ. ಇದು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಮಹಾತ್ಮರು ಮತ್ತು ಹಿರಿಯರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಮಾರ್ಗದರ್ಶನವನ್ನು ನೆನಪಿಸಿಕೊಳ್ಳಲಾಗುತ್ತದೆ ಎಂದರು
ಹಿರಿಯರ ಸ್ಮರಣೆಯಂತಹ ಮಹತ್ವದ ಕಾರ್ಯವು ಮಕ್ಕಳಿಗೆ ಸ್ಫೂರ್ತಿಯಾಗುವುದಲ್ಲದೆ, ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ ಎಂದರು

ಹಿರಿಯರ ಸ್ಮರಣೆಯ ಮಹತ್ವ,
ಆದರ್ಶಗಳ ಪಾಲನೆ ನಮ್ಮ ಜೀವನದಲ್ಲಿ ಸರಳತೆ, ಪ್ರಾಮಾಣಿಕತೆ ಮತ್ತು ಸಜ್ಜನಿಕೆಯನ್ನು ಅಳವಡಿಸಿಕೊಳ್ಳಲು ಹಿರಿಯರ ಜೀವನ ಚರಿತ್ರೆ ಪ್ರೇರಣೆಯಾಗುತ್ತದೆ ಎಂದರು
ಪೂರ್ವರರ ಗೌರವಕ್ಕಾಗಿ ಮಹಾಲಯದಂತಹ ವಿಶೇಷ ದಿನಗಳಲ್ಲಿ ಮತ್ತು ವಾರ್ಷಿಕೋತ್ಸವಗಳಲ್ಲಿ ಪೂರ್ವಜರನ್ನು ಸ್ಮರಿಸುವುದು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದರು
ನಮ್ಮ ಪೂರ್ವಜರನ್ನು ಸ್ಮರಣೆ ಮಾಡುವುದು ಸಂಸ್ಕೃತಿಯ ಹಸ್ತಾಂತರ ಹಿರಿಯರ ಅನುಭವ ಮತ್ತು ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಇದು ಒಂದು ಸೇತುವೆಯಾಗಿದೆ ಎಂದರು

ಪ್ರೀತಿ ಮತ್ತು ಐಕ್ಯತೆ ಜಾತಿ, ಮತ ಭೇದವಿಲ್ಲದೆ ಎಲ್ಲರನ್ನು ಪ್ರೀತಿಸಿದ ಹಿರಿಯರನ್ನು ನೆನಪಿಸಿಕೊಳ್ಳುವುದು ಸಮಾಜದಲ್ಲಿ ಐಕ್ಯತೆಯನ್ನು ಮೂಡಿಸುತ್ತದೆ ಎಂದರು
ಕೃತಜ್ಞತಾ ಭಾವ ನಮ್ಮ ಇಂದಿನ ಜೀವನಕ್ಕೆ ಕಾರಣರಾದ ಹಿರಿಯರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ, ಅವರ ತ್ಯಾಗವನ್ನು ಸ್ಮರಿಸಲಾಗುತ್ತದೆ ಎಂದು ಹೇಳಿದರು
ವೇದಿಕೆಯಲ್ಲಿ ಮುಂಡರಗಿ ತಾಲೂಕು ಹಾಗೂ ಅತ್ತಿಕಟ್ಟಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ರಾಮಣ್ಣ ಮೇಗಲಮನಿ ಕುಟುಂಬದವರು ಇದ್ದರು ಈ ಸಮಯದಲ್ಲಿ ಹಿರಿಯರ ಸವಿನೆನಪಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ಸನ್ಮಾನ ಜರುಗಿತು.
