ಪರಶಿಷ್ಟ ಜಾತಿ ಪರಶಿಷ್ಟ ಪಂಗಡ ಸಮುದಾಯಗಳ ಅಭಿವೃದ್ಧಿಗೆ ಕಾಂಗ್ರೇಸ್ ಪಕ್ಷ ಕಂಕಣ ಬದ್ಧ

ರೋಣ ರಾಜ್ಯದಲ್ಲಿರುವ ಕಾಂಗ್ರೇಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಮತದಾರರಿಗೆ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಬಡವರ ಪರ,ಜನಪರ ಎಂಬ ಕಿರ್ತಿಗೆ ಪಾತ್ರವಾಗಿದ್ದು,ಇದನ್ನು ಸಹಿಸದ ವಿರೋಧ ಪಕ್ಷದವರು ಸರಕಾರದ ಖಜಾನೆ ಖಾಲಿಯಾಗಿದೆ ಎಂಬ ಸುಳ್ಳು ಆರೋಪ ಮಾಡುತ್ತಿವೆ.

ಹಲವಾರು ಅಭಿವೃದ್ದಿ ಕಾರ್ಯಗಳು ಕ್ಷೇತ್ರದಲ್ಲಿ ನಿರಂತವಾಗಿ ನಡೆಯುತ್ತಿದೆ,ಸರಕಾರದಿಂದ ಅನುದಾನವೂ ಬಿಡುಗಡೆಯಾಗುತ್ತಿದೆ ಅದರಂತೆ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ರೂ.೧ ಕೋಟಿ,ಡಾ.ಬಾಬು ಜಗಜೀವನರಾಮ್ ಸಮುದಾಯ ಭವನ ನಿರ್ಮಾಣಕ್ಕೆ ರೂ.೨ ಕೋಟಿ, ಕಳೇದ ೧೪ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಮುಂದುವರೆದ ಕಾಮಗಾರಿಗೆ ೧ ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ರಾಜ್ಯ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷ,ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಅವರು ಭಾನುವಾರ ಪಟ್ಟಣಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ೨ ಕೋಟಿ ವೆಚ್ಚದಲ್ಲಿ ಬಾಬು ಜಗಜೀವನ್‌ರಾಮ ಸಮುದಾಯ ಭವನ, ೧ ಕೋಟಿ ವೆಚ್ಚದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿ ಹಾಗೂ ೧ ಕೋಟಿ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಮುಂದುವರೆದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ವಿರೋಧ ಪಕ್ಷದವರು ಗ್ಯಾರಂಟಿಗಳಿಗಾಗಿ ಎಸ್.ಸಿ ಎಸ್.ಟಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಸರ್ಕಾರದಲ್ಲಿ ಅನುದಾನ ಇಲ್ಲ ಎಂಬ ಆರೋಪ ಮಾಡುತ್ತಾರೆ. ಸರ್ಕಾರದಲ್ಲಿ ಹಣ ಇಲ್ಲದಿದ್ದರೆ ಇಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿತ್ತೇ ಸುಳ್ಳು ಆರೋಪ ಮಾಡುವುದರಲ್ಲಿ ಅರ್ತವಿಲ್ಲ,ಜನರ ನಾಡಿಮಿಡಿತ ಅರಿಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಳ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು .

೨೦೧೩ ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸರ್ಕಾರದ ಆಯವ್ಯದಲ್ಲಿ ಶೇ. ೨೪.೧ ಪ್ರತಿಶತ ಹಣವನ್ನು ಪರಶಿಷ್ಟ ಜಾತಿ ಪರಶಿಷ್ಟ ಪಂಗಡ ಸಮುದಾಯಗಳ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಾಯಿತು. ಕಾಂಗ್ರೆಸ್ ಸರ್ಕಾರ ಈ ಮಹತ್ತರವಾದ ಯೋಜನೆಯಿಂದಾಗಿ ಪ.ಜಾ ಪ.ಪಂಗಡಗಳ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಹಣವನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರದಿಂದ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು ಅದು ಸದುಪಯೋಗವಾಗಬೇಕು. ಸಮಾಜದ ಜನರ ಆಶೋತ್ತರವನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರವು ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಹಣ ಬಿಡುಗಡೆ ಸರ್ಕಾರಕ್ಕೆ ಧನ್ಯವಾದಗಳು ಸುಸಜ್ಜಿತ ಭವನ ನಿರ್ಮಾಣಕ್ಕೆ ಉತ್ತಮ ಯೋಜನೆಯನ್ನು ಹಾಕಿಕೊಂಡು ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕು ಅನುದಾನದ ಕೊರತೆ ಬಿದ್ದಲ್ಲಿ ಹೆಚ್ಚುವರಿ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವ ಕಾರ್ಯವನ್ನು ನಾನು ಮಾಡುತ್ತೆನೆ. ಜನರಿಗೆ ಉತ್ತಮ ಸಮುದಾಯ ಭವನಗಳು ದೊರೆಯಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಡಾ. ನಂದಾ ಹನಬರಟ್ಟಿ ಮಾತನಾಡಿ,ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆಯಿಂದ ಸರ್ವ ರೀತಿಯಲ್ಲಿ ಸಹಕಾರವನ್ನು ನೀಡುತ್ತೆವೆ. ಮೂರು ಸಮುದಾಯ ಭವನಗಳ ಕಾಮಗಾರಿಯು ಶೀಘ್ರದಲ್ಲಿ ಪೂರ್ಣಗೊಂಡು ಸಮಾಜದ ಕಾರ್ಯಕ್ರಮಗಳನ್ನು ಸಮುದಾಯ ಭವನದಲ್ಲಿ ಮಾಡುಂತಹತಾಗಬೇಕು ಆ ನಿಟ್ಟಿನಲ್ಲಿ ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಕರ ಬಳಕೆಗೆ ಕಲ್ಪಿಸುವಲ್ಲಿ ಮುಂದಾಗಬೇಕು ಎಂದರು.

ದಲಿತ ಮುಖಂಡ ಬಸವರಾಜ ಕಡೆಮನಿ ಮಾತನಾಡಿ, ತಲೆಯ ಮೇಲೆ ಸ್ವಂತ ಸೂರಿಲ್ಲದಿದ್ದರೂ ನಂಬಿದ ದೇವರು ನೆರಳಲ್ಲಿರಬೇಕು ಎಂದು ಬಯಸುವ ಮುಗ್ಧ ಜನರೇ ನಮ್ಮಲ್ಲಿ ಹೆಚ್ಚಿದ್ದು, ದೇವರ ಬಗೆಗಿನ ಅವರ ಭಕ್ತಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು,ಆದರೆ ಬಡವರು,ದಲಿತರು ನೆಮ್ಮದಿಯಿಂದ ಇರಬೇಕು ಎಂದು ಬಯಸುವವರು ಶಾಸಕ ಜಿ.ಎಸ್. ಪಾಟೀಲರು ಎಂದರು.

ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ನಮ್ಮ ಶಾಸಕರ ಪ್ರಮುಖ ಗುರಿಯಾಗಿದ್ದು, ಜನರ ಅಗತ್ಯಗಳಿಗೆ ತಕ್ಕಂತೆ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದಾರೆ. ಜನರ ಬಹುಕಾಲದ ಬೇಡಿಕೆಯಾದ ಸಮುದಾಯ ಭವನಗಳ ನಿರ್ಮಾಣಕ್ಕೆ ಚಾಲನೆ ದೊರೆತಿದ್ದು, ಸ್ಥಳೀಯರಲ್ಲಿ ಸಂತೋಷ ಮೂಡಿಸಿದೆ ಹಾಗೂ ಸಮಾಜದ ಎಲ್ಲ ವರ್ಗಗಳ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದ್ದು, ಇಂತಹ ಮೂಲಸೌಕರ್ಯಗಳ ನಿರ್ಮಾಣದಿಂದ ಜನರಿಗೆ ಹೆಚ್ಚಿನ ಸೌಲಭ್ಯಗಳು ದೊರೆಯಲಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರಣ್ಣ ಶೆಟ್ಟರ್, ಬಸವರಾಜ ಕಡೆಮನಿ, ಬಸವರಾಜ ತಳವಾರ, ವಿ.ಬಿ.ಸೋಮಕಟ್ಟಿಮಠ, ಯೂಸೂಫ್ ಇಟಗಿ, ಚಂದ್ರಶೇಖರ ಕಂದಕೂರ, ನಾಜಬೇಗಂ ಯಲಿಗಾರ, ಯಚ್ಚರಗೌಡ ಗೋವಿಂದಗೌಡ್ರ ಹನಮಂತಪ್ಪ ದ್ವಾಸಲ, ಸುರೇಶ ಮಾಗಡಿ, ಆನಂದ ಸಿಂಗಾಡಿ, ಹನಮಂತಪ್ಪ ನಾಗರಾಜ, ಭೀಮಣ್ಣ ತಳವಾರ, ದೇವೆಂದ್ರಪ್ಪ ಕೊಳಪ್ಪನವರ, ಸಂಜಯ ದೊಡ್ಡಮನಿ, ಪ್ರಕಾಶ ಹೊಸಳ್ಳಿ ಯಮನೂರಪ್ಪ ತಳವಾರ, ಮೋಹನ ಹುಲ್ಲಣ್ಣವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!