ಏ.21ರಂದು ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ


ತಾಳಿಕೋಟೆ : ಪಟ್ಟಣದಲ್ಲಿ ದಲಿತ ಸಮಾಜದ ಆರಾಧ್ಯ ದೇವತೆ ಶ್ರೀ ದುರ್ಗಾದೇವಿಯ ಜಾತ್ರಾಮಹೋತ್ಸವ ಏಪ್ರಿಲ್ 21 ಮಂಗಳವಾರ ದಂದು ಜರುಗಲಿದೆ.

ಜಾತ್ರೆ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಂದು ಬೆಳಿಗ್ಗೆ 8:00 ಘಂಟೆಗೆ ಶ್ರೀ ದುರ್ಗಾದೇವಿ ಮೂರ್ತಿಯ ಭವ್ಯ ಮೆರವಣಿಗೆ ಅಂಬಾಭವಾನಿ ದೇವಸ್ಥಾನದಿಂದ ಡೊಳ್ಳು ಕುಣಿತ, ಕರಡಿ ಮಜಲು, ಬಾಜಾ ಭಜಂತ್ರಿ ಜೊತೆ ಆರಂಭವಾಗಿ ಕತ್ರಿ ಬಜಾರ ಮಾರ್ಗವಾಗಿ ಶ್ರೀ ಮರಗಮ್ಮ ದೇವಿ ದೇವಸ್ಥಾನದಲ್ಲಿ ವಿಶ್ರಾಂತಿಸಿಲೀದೆ.

ನಂತರ ರಾಜವಾಡೇ ಮಾರ್ಗವಾಗಿ ಭೋವಿ ಸಮಾಜದ ಪಿಲೇಕಮ್ಮ ದೇವಿ ಪೂಜಿಸಿ ವಾರ್ಡ್ ನಂಬರ್ 19 ದಲಿತ ಕಾಲನಿ ಶ್ರೀ ಮಾದರ ಚೆನ್ನಯ್ಯ ನಗರದಲ್ಲಿ ಇರುವ ದೇವಿಯ ಗರ್ಭಗುಡಿ ಪ್ರವೇಶಿಸುವಳು.

ಮಧ್ಯಾಹ್ನ 1:00 ಘಂಟೆಗೆ
ಅನ್ನಪ್ರಸಾದ ಜರಗುವುದು. ಸಾಯಂಕಾಲ 4: 30 ಕ್ಕೆ ಧರ್ಮಸಭೆ ಜರುಗುವುದು. ದಿವ್ಯ ಸಾನಿಧ್ಯ ಖಾಸ್ಗತೇಶ್ವರ ಮಠದ ಪೂಜ್ಯ ಶ್ರೀ ಸಿದ್ದಲಿಂಗ ದೇವರು, ಜಂಬಗಿ ಮಠ ಹಾಗೂ ಮಾದಲಿಂಗನಾಳ ಮಠದ ಪೂಜ್ಯ ಶ್ರೀ ಶಂಕರಲಿಂಗ ಮಹಾರಾಜರು ವಹಿಸುವರು.

ಉದ್ಘಾಟಕರಾಗಿ ಕರ್ನಾಟಕ ಸರಕಾರದ ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ಬಿ. ತಿಮ್ಮಾಪುರ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಸಿ.ಎಸ್. ನಾಡಗೌಡ {ಅಪ್ಪಾಜಿ }, ವಿಜಯಪುರ ಸಂಸದ ರಮೇಶ ಚಂದಪ್ಪ ಜಿಗಿಜಣಿಗಿ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ದೇವರ ಹಿಪ್ಪರಗಿ ಮತಕ್ಷೇತ್ರ ಶಾಸಕ ರಾಜುಗೌಡ ಪಾಟೀಲ, ಅಸ್ಕಿ ಫೌಂಡೇಶನ್ ಅದ್ಯಕ್ಷ ಸಿ. ಬಿ.ಅಸ್ಕಿ, ಬಿಜೆಪಿ ಮುಖಂಡ ಉಮೇಶ ಗೋವಿಂದ್ ಕಾರಜೋಳ ಆಗಮಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಸದಸ್ಯ,ಉದ್ಯಮಿ ಪ್ರಭುಗೌಡ ಮದರಕಲ್ಲ, ದಿ. ಮುಸ್ಲಿಂ ಬಾಂಕ್ಯ ಅಧ್ಯಕ್ಷ ಮೖಹಿಬೂಬ ಎಚ್.ಕೆಂಭಾವಿ, ಪುರಸಭೆ ಮಾಜಿ ಅಧ್ಯಕ್ಷರಾದ ದಸರಥಸಿಂಗ್ ಮನಗೂಳಿ, ಸಹಕಾರಿ ಬ್ಯಾಂಕ ಅಧ್ಯಕ್ಷ ಕಾಶಿನಾಥ್ ಸಜ್ಜನ, ಬಿಜೆಪಿ ಮುಖಂಡ ವಾಸುದೇವ ಹೆಬಸೂರ, ಮಹಾಂತೇಶ ದೊಡ್ಡಮನಿ ಮೈಲೇಶ್ವರ,ಕಾಂಗ್ರೆಸ್ ಮುಖಂಡ ವೀರೇಶಗೌಡ ಪಾಟೀಲ, {ಮಿಣಜಿಗಿ} ಪುರಸಭೆ ಮಾಜಿ ಸದಸ್ಯ ಜೈ ಸಿಂಗ್ ಮೂಲಿಮನಿ, ಹಾಗೂ ಇನ್ನೂ ಅನೇಕ ಮಹನೀಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ತಾಳಿಕೋಟಿ ಮಾದರ ಸಮಾಜದ ಅಧ್ಯಕ್ಷ ಯಮನಪ್ಪ ಸೈದಪ್ಪ ಕಟ್ಟಿಮನಿ ವಹಿಸುವರು. ಮಾದರ ಸಮಾಜದ ಯುವ ಮುಖಂಡ ಬಸ್ಸು.ಈ. ಕಟ್ಟಿಮನಿ {ಮಾದರ} ಪ್ರಾಸ್ತಾವಿಕ ನುಡಿಗಳನ್ನಾಡುವರು. ಅಂದೇ ರಾತ್ರಿ 10.30ಕ್ಕೆ ಶ್ರೀ ಬಸವೇಶ್ವರ ನಾಟ್ಯ ಸಂಘ ಬಾಗೇವಾಡಿ ನಾಗೂರ ಅವರಿಂದ ಶ್ರೀ ರೇಣುಕಾ ಎಲ್ಲಮ್ಮ ದೇವಿ ಮಹಾತ್ಮೆ ನಾಟಕ ಇರುವುದು.ಕಾರಣ ಸರ್ವ ಸಮುದಾಯದ ಸಮಾಜ ಬಾಂಧವರು ಹಾಗೂ ಸುತ್ತಮುತ್ತಲಿನ ಎಲ್ಲಾ ದುರ್ಗಾದೇವಿಯ ಭಕ್ತಾದಿಗಳು ಈ ಜಾತ್ರಾ ಮಹೋತ್ಸವ ಮತ್ತು ಧರ್ಮ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಸಮಾಜದ ಹಿರಿಯರಾದ ಹುಲುಗಪ್ಪ ಕೆಂಚಪ್ಪ ಕಟ್ಟಿಮನಿ,ಅರ್ಬನ್ ಬ್ಯಾಂಕ್ ನೀರ್ದರ್ಶಕ ರಾಮಣ್ಣ ಕಟ್ಟಿಮನಿ, ಮಲ್ಲಪ್ಪ ಶಿರೋಳ ಹಾಗೂ ನಾಗಪ್ಪ ದುರ್ಗಪ್ಪ ಕಟ್ಟಿಮನಿ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!