ಬಸವಣ್ಣವರ ಚಿಂತನೆ ಎಲ್ಲರೂ ಪಾಲಿಸೋಣ

ವಿಜಯ ಸಿಂಧೂರ ರೋಣ
ಸಮಾಜದ ಎಲ್ಲ ವರ್ಗದವರನ್ನು ಬಸವಣ್ಣ ಎತ್ತಿ ಹಿಡಿದು ಅಪ್ಪಿಕೊಂಡಿದ್ದ, ಬಸವಣ್ಣನ ಸಮಾಜ ಜಾತಿ, ವರ್ಗ, ವರ್ಣ ರಹಿತವಾಗಿತ್ತು. ಬಸವಣ್ಣ ಕಟ್ಟಿದ ವಿಶ್ವದ ಮೊದಲ ಸಂಸತ್ತು ಎಂದು ಹೆಸರಾದ ಅನುಭವ ಮಂಟಪದಲ್ಲಿ ದೇಶ-ವಿದೇಶದ ಶರಣ, ಶರಣೆಯರು ಇದ್ದರು. ಇದು ಬಸವಣ್ಣನ ಅನುಭಾವದ ತಾಕತ್ತು ಎಂದು ವಿ.ಬಿ.ಸೋಮನಕಟ್ಟಿಮಠ ಹೇಳಿದರು.


ಅವರು ಸೋಮವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿರುವ ಶಾಸಕರ ಜನ ಸಂಪರ್ಕ ಕಾರ್ಯಾಲಯದಲ್ಲಿ ನಡೆದ ವಿಶ್ವ ಗುರು ಬಸವಣ್ಣನವರ ೮೯೩ನೇ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು


ಸಮಾಜದದಲ್ಲಿ ಗಂಡು-ಹೆಣ್ಣು ಜಾತಿ, ವರ್ಗ ಭೇದ ಇರಬಾರದು ಎಂದು ಬಸವಣ್ಣ ಬಯಸಿದ್ದರು. ಬಸವಣ್ಣನವರ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳೋಣ.ನಾನು ಭಕ್ತ ಎಂದು ಹೇಳಿದ ಬಸವಣ್ಣ ಎಲ್ಲರಿಗಿಂತ ದೊಡ್ಡವರಾಗಿದ್ದಾರೆ. ಬಸವಣ್ಣ ಎಲ್ಲರನ್ನು ಪ್ರೀತಿಸಿದರು, ಅವರ ಭಾವಕ್ಕೆ ಬೆಲೆ ಕಟ್ಟಲಾಗದು, ಬಸವಣ್ಣ ಸಮಾಜದ ಮೈಲಿಗೆ ತೊಳೆಯಲು ಬಂದ ಕ್ರಾಂತಿ ಪುರುಷರಾಗಿದ್ದಾರೆ ಎಂದರು

ವಿಶ್ವವಗುರು ಬಸವಣ್ಣನವರ ವಚನ ಇಂದು ಸಮಾಜವನ್ನು ಮುನ್ನಡೆಸುತ್ತಿವೆ, ಸಮಾಜದ ಮೈಲಿಗೆ ಕಳೆಯುತ್ತಿವೆ.
ಮೂಢ ನಂಬಿಕೆ, ಮಡಿ ಮೈಲಿಗೆ, ಮೇಲು ಕೀಲು, ಲಿಂಗ ಅಸಮಾನತೆ ಜಾತಿ ವ್ಯವಸ್ಥೆ ಸೇರಿದಂತೆ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ ಹಲವಾರು ಸಾಮಾಜಿಕ ಸುಧಾರಣೆಗಳನ್ನು ತಂದವರು ಎಂದರು

ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎನ್ನುತ್ತಾ ಮನುಕುಲಕ್ಕೆ ಮಾನವೀಯತೆಯ ಸಂದೇಶವನ್ನು ಸಾರಿದರು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅನುಭವ ಮಂಟಪವನ್ನು ಹುಟ್ಟು ಹಾಕಿದರು.ಎಂದರು


ಗುತ್ತಿಗೆದಾರ ವೀರಯ್ಯ ಜಾವೂರಮಠ ಮಾತನಾಡಿ, ಬಸವಣ್ಣನವರ ವಚನ ಸಾಹಿತ್ಯಗಳು ಜೀವನದ ಮೌಲ್ಯ ತಿಳಿಸಿಕೊಟ್ಟವು. ವಚನ ಸಾಹಿತ್ಯವು ಸಮಾಜಮುಖಿ ಕೆಲಸ ಮಾಡಲು ಸಹಕಾರಿಯಾಗಿದ್ದು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಬಸವ ಜಯಂತಿಗೆ ಅರ್ಥ ಬರುತ್ತದೆ. ಜಗತ್ತು ಇಂದು ಬಸವಣ್ಣನವರ ವಚನ ಸಾಹಿತ್ಯದ ಮೇಲೆ ನಿಂತಿದೆ. ಬಸವಣ್ಣನವರು ಮೇಲು-ಕೀಳು ಎಂಬ ಭಾವನೆ ತೊಡೆದು ಹಾಕುವ ಮೂಲಕ ಅನುಭವ ಮಂಟಪ ನಿರ್ಮಿಸಿದರು. ಅನುಭವ ಮಂಟಪದಲ್ಲಿ ಎಲ್ಲಾ ಜಾತಿ-ಧರ್ಮದವರಿಗೂ ಅವಕಾಶ ಕಲ್ಪಿಸಿ ಸಮಾಜದಲ್ಲಿ ಜಾತ್ಯಾತೀತ ಭಾವನೆಯ ಪ್ರತಿಪಾದನೆ ಮಾಡಿದರು. ಇಂತಹ ಮಹಾನ ಚೇತನ ಇಂದು ಜಗತ್ತಿಗೆ ಬೆಳಕಾಗಿ ಕಾಣುತ್ತಿರುವುದು ನಾಡಿನ ಭಾಗ್ಯವಾಗಿದೆ ಎಂದರು.


ವೀರಯ್ಯ ನೆಲ್ಲೂರಮಠ ಮಾತನಾಡಿ, ಬಸವಣ್ಣವರು ಕಾಯಕದಲ್ಲಿ ದೇವರನ್ನು ಕಾಣಿರಿ ಎಂದು ಬೋಧಿಸಿದ ಮಹಾನ್ ದೇವ ಮಾನವ. ಮನುಷ್ಯ ತಾನು ಮಾಡುತ್ತಿರುವ ಕಾಯಕವನ್ನು ಪ್ರಿ?ತಿಯಿಂದ ಕಾಣಬೇಕು. ನಾವು ಮಾಡುವ ಕಾಯಕದಲ್ಲಿ ದೇವರು ಅಡಗಿದ್ದಾನೆ ಎಂಬುದನ್ನು ನಾವು ಅರಿಯಬೇಕು. ಮಾನವಕುಲ ಸಹೋದರರಂತೆ ಕಾಣಬೇಕು. ಮನುಷ್ಯ ತನ್ನನ್ನು ತಾನು ಶುದ್ದೀಕರಣ ಮಾಡಿಕೊಳ್ಳಬೇಕು ಎಂದು ಹೇಳಿದರು.


ಅಂದಪ್ಪ ಗಡಗಿ ಮಾತನಾಡಿ, ಇಂದಿನ ಯುವಕರು ಬಸವಣ್ಣನವರ ವಚನಗಳನ್ನು ನಿತ್ಯ ಪಠಿಸುವುದರಿಂದ ಮತ್ತು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಕ್ಕಳ ಮನಸ್ಸು ಪರಿಶುದ್ಧವಾಗುತ್ತದೆ. ಬಸವಣ್ಣನವರು ನಮಗೆ ದಾರಿ ದೀಪ. ಅವರು ನುಡಿದಂತೆ ನಡೆದವರು ಎಂದರು.

ಈ ಸಮಯದಲ್ಲಿ ವೀರಯ್ಯ ನೆಲ್ಲೂರಮಠ, ಜಗದೀಶ ಹಿರೇಮಠ, ವೀರಯ್ಯ ಜಾವೂರಮಠ,ಪಾಲಾಕ್ಷಯ್ಯ ಹಿರೇಮಠ, ಶರಣಪ್ಪ ಮೇಟಿ ಸೇರಿದಂತೆ ಅನೇಕರು ಇದ್ದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!