ದರ್ಗಾದಲ್ಲಿ ಮುಸ್ಲಿಂರಿಂದ ಭಾವೈಕ್ಯತೆಯ ಬಸವ ಜಯಂತಿ ಆಚರಣೆ


ವಿಜಯ ಸಿಂಧೂರ ರೋಣ
ಪಟ್ಟಣದ ಹೊರಪೇಟೆ ದರ್ಗಾದಲ್ಲಿ ಸೋಮವಾರ ಭಾವೈಕ್ಯತೆಯ ಬಸವ ಜಯಂತಿ ಆಚರಣೆ ಮಾಡಲಾಗಿದೆ. ಬಸವ ಜಯಂತಿಯಲ್ಲಿ ಮುಸ್ಲಿಂ ಮುಖಂಡರು ಕೂಡ ಭಾಗಿಯಾಗಿದ್ದು ವಿಶೇಷವಾಗಿತ್ತು.ಹೊರಪೇಟೆ ಓಣಿಯಲ್ಲಿ ಮುಸ್ಲಿಂ ಹಾಗೂ ಹಿಂದೂ ಸಮುದಾಯದವರು ಸೇರಿ ಭಾವಚಿತ್ರ ಮೆರವಣಿಗೆಯನ್ನು ಮಾಡಿದ್ದಲ್ಲದೆ, ಪ್ರಸಿದ್ದ ಹೊರಪೇಟೆ ದರ್ಗಾದಲ್ಲಿಯೇ ಬಸವಣ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ,ಪೂಜೆ ಸಲ್ಲಿಸಿ ಬಸವ ಜಯಂತಿ ಆಚರಣೆ ಮಾಡಿ ಹಿಂದೂ, ಮುಸ್ಲಿಮರು ಭಾವೈಕ್ಯತೆ ಮೆರೆಯಲಾಯಿತು

.
ಪೂಜೆ ಸಲ್ಲಿಸಿದ ಹೊರಪೇಟೆ ದರ್ಗಾದ ಪೀಠಾಧಿಪತಿ ಸೈಯದ್ ಸುಲೇಮಾನ ಶಾವಲಿ ಅಜ್ಜನವರು ಮಾತನಾಡಿ, ೧೨ ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳು ಆಚರಣೆಯಲ್ಲಿದ್ದ ಕಾಲದಲ್ಲಿ ತಮ್ಮ ಸರಳ ವಚನಗಳ ಮೂಲಕ ಸಮಾಜದಲ್ಲಿ ಸುಧಾರಣೆಗಳನ್ನು ತಂದವರು ಬಸವಣ್ಣನವರು. ಕಾಯಕವೇ ಕೈಲಾಸ ಎಂದು ಕಲಿಸಿಕೊಟ್ಟ ವಿಶ್ವ ಗುರು ಬಸವಣ್ಣನವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ನಮಗೆಲ್ಲರಿಗೂ ಪಾಠ, ಬದುಕಿಗೆ ದಾರಿ. ಈ ಮಹಾನ್ ಕವಿ, ಸಮಾಜ ಸುಧಾರಕ, ತತ್ವಜ್ಞಾನಿಯ ಜನ್ಮ ಜಯಂತಿಯನ್ನು ದರ್ಗಾದಲ್ಲಿ ಆಚರಣೆ ಮಾಡಲು ಅತೀವ ಹೆಮ್ಮೆ ಎನಿಸುತ್ತದೆ ಎಂದರು

ದಯೆವೇ ಧರ್ಮದ ಮೂಲವಯ್ಯ ದಯವಿಲ್ಲದ ಧರ್ಮ ಯಾವುದಯ್ಯ ದಯೆವಿರಬೇಕು ಸಕಲ ಪ್ರಾಣಿಗಳೆಲ್ಲರಲಿ ದಯಮೇ ಧರ್ಮದ ಮೂಲವಯ್ಯ… ಹೀಗೆ ತಮ್ಮ ವಚನಗಳ ಮೂಲಕವೇ ೧೨ ಶತಮಾನದಲ್ಲಿ ಸಮಾಜದಲ್ಲಿ ಆಚರಣೆಯಲ್ಲಿದ್ದ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಇತ್ಯಾದಿ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆ ಮಾಡಿ, ಜ್ಞಾನದ ಬೆಳಕು ಚೆಲ್ಲಿ ಕ್ರಾಂತಿಯ ಬೀಜ ಬಿತ್ತಿದವರು ಬಸವಣ್ಣನವರು ಪ್ರಸಿದ್ಧ ಸಂತರಾಗಿದ್ದ ಇವರು ರಾಜನೀತಿ ತಜ್ಞರಾಗಿ, ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆಯ ಮೂಲಕ ಸಮಾಜದಲ್ಲಿ ಹಲವಾರು ಸುಧಾರಣೆಗಳನ್ನು ತಂದರು. ಕಾಯಕವೇ ಕೈಲಾಸ ಎಂದು ಮನುಕುಲಕ್ಕೆ ಪಾಠ ಕಲಿಸಿಕೊಟ್ಟ ಶ್ವಗುರು ಬಸವಣ್ಣನವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ನಮಗೆಲ್ಲರಿಗೂ ಪಾಠ, ಬದುಕಿಗೆ ದಾರಿ. ಈ ಮಹಾನ್ ಚೇತನರ ಜನ್ಮ ಜಯಂತಿಯನ್ನು ಪ್ರತಿವರ್ಷ ಹೊರಪೇಟೆಯ ದರ್ಗಾದಲ್ಲಿ ಆಚರಣೆ ಮಾಡಲಾಗುವುದು ಎಂದರು

ಮೂಢ ನಂಬಿಕೆ, ಮಡಿ ಮೈಲಿಗೆ, ಮೇಲು ಕೀಲು, ಲಿಂಗ ಅಸಮಾನತೆ ಜಾತಿ ವ್ಯವಸ್ಥೆ ಸೇರಿದಂತೆ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ ಹಲವಾರು ಸಾಮಾಜಿಕ ಸುಧಾರಣೆಗಳನ್ನು ತಂದವರು ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎನ್ನುತ್ತಾ ಮನುಕುಲಕ್ಕೆ ಮಾನವೀಯತೆಯ ಸಂದೇಶವನ್ನು ಸಾರಿದರು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅನುಭವ ಮಂಟಪವನ್ನು ಹುಟ್ಟು ಹಾಕಿದರು.ಎಂದರು
ಜಸವ ಜಯಂತಿಯ ಮಹತ್ವ :
೧೨ ನೇ ಶತಮಾನದಲ್ಲಿ ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದ ಬಸವಣ್ಣನವರು ತಮ್ಮ ಬಾಲ್ಯದ ದಿನಗಳನ್ನು ಕಳೆದರು. ಕ್ರಮೇಣ ಬಸವಣ್ಣನವರು ಮಹಾನ್ ಕವಿ, ಸಮಾಜ ಸುಧಾರಕ ಮತ್ತು ದಾರ್ಶನಿಕರಾಗಿ ಹೆಸರನ್ನು ಗಳಿಸಿದ ಇವರು ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ತಲೆ ಎತ್ತಿ ನಿಂತಿದ್ದ ಪಿಡುಗುಗಳನ್ನು ತೊಡೆದು ಹಾಕಲು ಸಾಮಾಜಿಕ ಜಾಗೃತಿಯನ್ನು ಪಸರಿಸಲು ಆರಂಭಿಸಿದರು. ಜಾತಿ, ಬಣ್ಣ, ಅಂತಸ್ತಿನಲ್ಲಿ ವ್ಯತ್ಯಾಸವಿದ್ದರೂ ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಸಾರಿದ ಬಸವಣ್ಣನವರು ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಸಮಾಜಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿದ ವಿಶ್ವ ಗುರು ಬಸವಣ್ಣನವರಿಗೆ ಗೌರವ ಸಲ್ಲಿಸಲು, ಅವರ ತತ್ವ, ಆದರ್ಶಗಳನ್ನು ಸ್ಮರಿಸಲು ಬಸವ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ಸಮಯದಲ್ಲಿ ಇಬ್ರಾಹಿಂಸಾಬ ಕೊತಬಾಳ,ಹಸನಸಾಬ ಇದ್ಲಿ, ಮಹ್ಮದಲಿ ಬಾಡಿನ, ಹುಸೇನಸಾಬ ಬಾಡಿನ, ಯಲ್ಲಪ್ಪ ಪಲ್ಲೇದ, ಅಂದಾನಪ್ಪ ಗಿರಡ್ಡಿ, ಬಸವರಾಜ ಕಿರೇಸೂರ, ದಾನಪ್ಪ ಕಿರೇಸೂರ, ಮಕ್ತುಂಸಾಬ ಮೂಲಿಮನಿ, ಮುತ್ತಪ್ಪ ಸಂದಿಗವಾಡ,ಅAದಪ್ಪ ಬೆನಹಾಳ,ಅಲ್ಲಭಕ್ಷಿ ದರಗಾದ, ಬಸವಣ್ಣೆಪ್ಪ ಮೂಲಿಮನಿ, ಇಮಾಮಹುಸೇನ ದರಗಾದ ಸೇರಿದಂತೆ ಮುಸ್ಲಿಂ ಹಾಗೂ ಹಿಂದೂ ಮುಖಂಡರು ಇದ್ದರು.

.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!