ವಿಜಯ ಸಿಂಧೂರ, ಸಿಂದಗಿ
ಪ್ರತಿ ಗ್ರಮಗಳ ಅಭಿವೃದ್ಧಿಯೇ ಮತಕ್ಷೇತ್ರದ ಸಮಗ್ರ ಪರಗತಿ ಸಂಖ್ಯೆತ ಆ ನಿಟ್ಟಿನಲ್ಲಿ ನನ್ನ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ನನ್ನ ಮೂಲ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.

ಅವರು ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 2025-26 ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಾದ ನಡೂರ ಲಕ್ಷ್ಮೀ ದೇವಸ್ಥಾನ ಹತ್ತಿರ ಸಮುದಾಯ ನಿರ್ಮಾಣಕ್ಕಾಗಿ ಮಂಜೂರಾದ 25 ಲಕ್ಷ ರೂ ಹಾಗೂ ಆರೋಗ್ಯ ಇಲಾಖೆಯ ಆಯುಷ್ಮಾನ್ ಆರೋಗ್ಯ್ ಮಂದಿರ ಕಟ್ಟಡ ನಿರ್ಮಾಣಕ್ಕಾಗಿ 65 ಲಕ್ಷ ಮೊತ್ತದ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಈ ಗ್ರಾಮದ ಬಹುದಿನಗಳ ಬೇಡಿಕೆಯಾಗಿರುವ ಆರೋಗ್ಯ ಕಟ್ಟಡ ಹಾಗೂ ಸಮುದಾಯ ಭವನದ ನಿರ್ಮಾಣ ಕಾಮಗಾರಿ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳುತ್ತದೆ ಹಂತ ಹಂತವಾಗಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದ ಅವರು ಭಾರತ ಗ್ರಾಮಗಳ ದೇಶ, ಗ್ರಾಮಗಳ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂಬುದು ಮಹಾತ್ಮ ಗಾಂಧೀಜಿಯವರ ನಂಬಿಕೆಯಾಗಿತ್ತು. ಹೀಗಾಗಿ ಗ್ರಾಮ ಸ್ವರಾಜ್ಯದ ಚಿಂತನೆಯನ್ನು ಅವರು ಸಾರಿದರು.
ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುವತ್ತ ರಾಜ್ಯ ಸರ್ಕಾರವು ಪರಿಣಾಮಕಾರಿ ಹೆಜ್ಜೆ ಇರಿಸಿದೆ. ಗ್ರಾಮಗಳ ಸಬಲೀಕರಣದಲ್ಲಿ ಕರ್ನಾಟಕವು ದೇಶಕ್ಕೆ ಮಾದರಿಯಾಗಿರುವುದು ಸಿದ್ದರಾಮಯ್ಯನವರ ಸರ್ಕಾರದ ಉತ್ತಮ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವಿಜುಗೌಡ ಪಾಟೀಲ, ವಿಶ್ವನಾಥ ಪಾಟೀಲ, ದೊಡ್ಡಪ್ಪ ಮಂಗೊಂಡಿ, ಕಂಟೆಪ್ಪಾ ಸಾಹುಕಾರ್ ಕಲ್ಲೂರ್, ಶಿವಶಂಕರ ನಾಗಠಾಣ, ಯಮನಪ್ಪ ಚೌಧರಿ, ದಯಾನಂದ ಕಲ್ಲೂರ್, ರಾಚಪ್ಪ ತಂಬಾಕೆ, ಸಿದ್ದಪ್ಪ ಯಾಳಗಿ, ಮುತ್ತು ಮೂಡಗಿ, ಮಾಜಿ ಜಿ. ಪಂ ಸದಸ್ಯರಾದ ಶಂಕರ ಬಗಲಿ, ಭಾಗಣ್ಣ ನಾಗಠಾಣ, ಮಂಜುನಾಥ ನಾಗಠಾಣ, ಸಿದ್ದಣ್ಣ ಚೌಧರಿ, ಭಾಗಪ್ಪ ಶಿವಣಗಿ, ನಿಂಗಣ್ಣ ನಂದ್ಯಾಳ, ವಿಠಲ ಹಡಪದ, ಸೇರಿದಂತೆ ಕಾರ್ಯಕರ್ತರು, ಹಿರಿಯರು, ಸಮಾಜದ ಮುಖಂಡರು ಗ್ರಾಮಸ್ಥರು, ಯುವಕ ಮಿತ್ರರು, ಸ್ಥಳೀಯರು ಉಪಸ್ಥಿತರಿದ್ದರು.
