ಖಾಸಗಿ ಶಾಲೆಯ ಪ್ರಚಾರಕರಾಗುತ್ತಿರುವ ಸರಕಾರಿ ಶಾಲಾ ಶಿಕ್ಷಕರು

ಮೊಯ್ದಿನ್ ಕುಟ್ಟಿ, ಮಂಗಳೂರು

ಸರಕಾರದ ಹಂತದಲ್ಲಿ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಒಳ್ಳೆಯ ಶಿಕ್ಷಕರು,ಮೂಲಭೂತ ಸೌಕರ್ಯಗಳು ಚೆನ್ನಾಗಿ ಇರುವ ಕಾರಣ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಎನ್ನುವ ಪ್ರಚಾರಗಳು ನಡೆಯುತ್ತಿರುವ ಸಮಯದಲ್ಲಿಯೇ ,ಹೆಚ್ಚಿನ ಸರಕಾರಿ ಶಿಕ್ಷಕರು ತಮ್ಮ ಸಾಮಾಜಿಕ ಜಾಲತಾಣಗಳ ಸ್ಟೇಟಸ್ ಗಳಲ್ಲಿ ಖಾಸಗಿ ಶಾಲೆಗಳ ಪ್ರಚಾರವನ್ನು ಮಾಡುತ್ತಾ ಇರುವುದು ಕಂಡು ಬರುತ್ತಿದೆ

.

ಮಾನ್ಯ ಶಿಕ್ಷಣ ಸಚಿವರು ಕೂಡ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಎಂದು ಕರೆ ಕೊಡುತ್ತಾ ಇರುವಾಗ ಶಿಕ್ಷಕರ ಒಂದು ಗುಂಪು ಈ ರೀತಿಯ ಪ್ರಚಾರವನ್ನು ಮಾಡುತ್ತಾ ಇರುವುದು ಪೋಷಕರಿಗೆ ಖಾಸಗಿ ಶಾಲೆಗೆ ಸೇರಿಸಲು ಪ್ರಚೋದನೆ ಆಗಲಿದೆ.

ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷ ಸರಕಾರಿ ಶಾಲೆಗಳಲ್ಲಿ ಪರೀಕ್ಷೆ ಬರೆದಂತಹ 306341 ಮಕ್ಕಳಲ್ಲಿ 287878 ಮಕ್ಕಳು ಪಾಸ್ ಆಗಿದ್ದು 93.87% ಮಕ್ಕಳು ಉತ್ತೀರ್ಣರಾಗಿದ್ದಾರೆ ಅದಲ್ಲದೆ ಯಾವುದೇ ಸರಕಾರಿ ಶಾಲೆಗಳು ಕೂಡ 0% ಆಗಿರುವುದಿಲ್ಲ
ಆದರೆ ರಾಜ್ಯದ 22 ಖಾಸಗಿ ಶಾಲೆಯಲ್ಲಿ ಒಂದು ಮಗು ಕೂಡ ಪಾಸ್ ಆಗದೆ 0% ಆಗಿದೆ

ಯಥಾರ್ಥ ಅಂಕಿ ಅಂಶಗಳು ಸರಕಾರಿ ಶಾಲೆಗಳಲ್ಲಿರುವ ಕಲಿಕೆಯು ಮಕ್ಕಳಿಗೆ ಪೂರಕವಾಗಿರುವಾಗ ಇದೇ ಸರಕಾರಿ ಶಾಲೆಗಳ ಶಿಕ್ಷಕರು ಖಾಸಗಿ ಶಾಲೆಗಳ ಪ್ರಚಾರವನ್ನು ಮಾಡುತ್ತಾ ಇರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಸರಕಾರಿ ಶಾಲೆಗಳನ್ನು ಉಳಿಸುವ ಹಾಗೂ ಗುಣಮಟ್ಟದ ಶಿಕ್ಷಣವನ್ನು ದೊರಕಿಸುವ ನಿಟ್ಟಿನಲ್ಲಿ ಹೋರಾಟವನ್ನು ಮಾಡುವವರ ಮನಸ್ಸಲ್ಲಿ ಪ್ರಶ್ನೆಯಾಗಿಯೇ ಕಾಡುತ್ತಿದೆ.

ಸಂಗ್ರಹ ಚಿತ್ರಗಳು

ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸದೆ, ಖಾಸಗಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಿ, ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡುವ ಪೋಷಕರಿಗೆ ಖಾಸಗಿ ಶಾಲೆಗೆ ಸೆಳೆಯಲು ಈ ಸರಕಾರಿ ಶಾಲಾ ಶಿಕ್ಷಕರ ಪ್ರಚಾರವೇ ಕಾರಣವಾಗುತ್ತಿದೆ ಎಂದು ಕೆಲವು ಪೋಷಕರು ಅಭಿಪ್ರಾಯ ಪಡುತ್ತಾ ಇರೋದು ಮಾತ್ರ ಸತ್ಯವಾಗುತ್ತಿದೆ

ಅದರಿಂದ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯು ಮುಂದಿನ ದಿನಗಳಲ್ಲಿ ಸರಕಾರಿ ಶಾಲಾ ಶಿಕ್ಷಕರು, ಸರಕಾರಿ ನೌಕರರು,ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿಯೇ ದಾಖಲಾತಿ ಮಾಡುವ ರೀತಿಯಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ತಿದ್ದುಪಡಿಯನ್ನು ತರಲು ಹೋರಾಟವನ್ನು ಮಾಡಲಿದೆ, ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ಶಾಲೆಗಳ ಪ್ರಚಾರವನ್ನು ಮಾಡುವ ಶಿಕ್ಷಕರ ವಿರುದ್ಧ ರಾಜ್ಯ ಮಟ್ಟದಲ್ಲಿ ದೂರನ್ನು ಕೊಡಲಿದ್ದೇವೆ

ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪೋಷಕರ ಹಾಗೂ ಸರಕಾರದ ಮಾತ್ರ ಜವಾಬ್ದಾರಿಯಲ್ಲ, ಆ ಶಾಲೆಯ ಶಿಕ್ಷಕರು ಕೂಡ ಶಾಲೆಯ ಪ್ರತಿಯೊಂದು ಪ್ರಗತಿಯನ್ನು ಕೂಡ ಸಮುದಾಯಕ್ಕೆ ತಲುಪಿಸುವಲ್ಲಿ ಮುಂದೆ ಬರಬೇಕಿದೆ

ಮೊಯ್ದಿನ್ ಕುಟ್ಟಿ, ರಾಜ್ಯ ಸಂಚಾಲಕರು
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ.)

9743734020

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!