ಎ.26 ರಂದು ಬಸವ ಕಾವ್ಯ ಸಮ್ಮೇಳನ, ಪ್ರಶಸ್ತಿ ಪ್ರದಾನ ಸಮಾರಂಭ

ವಿಜಯ ಸಿಂಧೂರ ಬಾದಾಮಿ

ಬಾದಾಮಿ:ಹೊಳೆ ಆಲೂರಿನ ಎಸ್.ಎಸ್.ಆಡಿನ ಜನಸೇವಾ ಸಂಸ್ಥೆಯ ವತಿಯಿಂದ ಬಸವ ಜಯಂತಿ ನಿಮಿತ್ತ ಬಸವ ಕಾವ್ಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಎ.26 ರಂದು ರವಿವಾರ ಬೆಳಿಗ್ಗೆ 10.30 ಗಂಟೆಗೆ ನಗರದ ಎಸ್.ಬಿ.ಎಂ.ಕಾಲೇಜಿನ ಸ್ಪರ್ಧಾ ಶಕ್ತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಎಸ್.ಎಸ್.ಆಡಿನ ತಿಳಿಸಿದರು.

ಅವರು ಶುಕ್ರವಾರ ನಗರದ ಕಾನಿಪ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನವಗೃಹ‌ ಹಿರೇಮಠದ ಶ್ರೀ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶರಣಮ್ಮ ಗದ್ದಿಗಿಮಠ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಶಾರದಾ ಮೇಟಿ, ಬಸವರಾಜ ಕಡೆಮನಿ ಪ್ರಶಸ್ತಿ ಪ್ರದಾನ‌ ಮಾಡುವರು. ಶೋಭಾ ಆಡಿನ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶೇಖರಗೌಡ ಪಾಟೀಲ, ಡಾ.ಎ.ಎ.ತೋಪಲಕಟ್ಟಿ, ವಿಜಯಕುಮಾರ ನಾಯಕ, ನಿಂಗಪ್ಪ ನೀಲಗುಂದ, ಭೀಮರಡ್ಡೆಪ್ಪ ರಡ್ಡೇರ, ಬಸವರಾಜ ತಳವಾರ ಆಗಮಿಸುವರು. ಪ್ರೊ.ಎಸ್.ಎಸ್.ಮೂಲಿಮನಿ ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ಒಂಬತ್ತು ಜನ ದಂಪತಿಗಳಿಗೆ ಕಾಯಕಜೀವಿ ಆದರ್ಶ ದಂಪತಿ ಪ್ರಶಸ್ತಿ, 28 ಜನ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಬಸವರತ್ನ ಪ್ರಶಸ್ತಿ, ಏಳು ಜನ‌ ಮಹಿಳೆಯರಿಗೆ ಬಸವ ಮಹಿಳಾ ರತ್ನ ಪ್ರಶಸ್ತಿ ಪ್ರದಾನ‌ ಮಾಡಲಿದ್ದಾರೆ. ಕವಿಗೋಷ್ಟಿ, ರಕ್ತರಾತ್ರಿ ರೂಪಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಎಸ್.ಎಸ್.ತಿಪ್ಪಶೆಟ್ಟಿ ಉಪಸ್ಥಿತರಿದ್ದರು.

ವರದಿ :ಕನಕಪ್ಪ ಕೊತಬಾಳ ಬದಾಮಿ

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!