ರಸ್ತೆ, ಚರಂಡಿ ಕಾಮಗಾರಿಗೆ ರೂ.೮ ಕೋಟಿ ಅನುದಾನ : ಶಾಸಕ ಜಿ.ಎಸ್.ಪಾಟೀಲ


ವಿಜಯ ಸಿಂಧೂರ ರೋಣ


ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ವಿವೇಚಾನಾ ನಿಧಿಯಿಂದ ಮತಕ್ಷೇತ್ರದ ಅವಶ್ಯಕ ಕಾಮಗಾರಿಗಳಿಗೆ ಅನುದಾನ ಒದಗಿಸಿದ್ದು, ಅದರಲ್ಲಿ ೮ ಕೋಟಿ ರೂಪಾಯಿಗಳನ್ನು ಪಟ್ಟಣ ವಿವಿಧ ಮುಖ್ಯ ರಸ್ತೆಗಳ ಅಭಿವೃದ್ದಿಗೆ ಮಿಸಲಿರಿಸಿದ್ದ, ಬಹುದಿನಗಳ ಇಲ್ಲಿನ ಜನರ ಬಹುದಿನಗಳ ಬೇಡಕೆಯಾದ ಶ್ರೀ ಸಾಯಿ ನಗರದ ಸಮಗ್ರ ಅಭಿವೃದ್ಧಿಗೆ ೪.೮೯ ಕೋಟಿ ರೂ. ಮಂಜೂರು ಮಾಡಲಾಗಿದೆ.ಇಲ್ಲಿ ಸುಸಜ್ಜಿತವಾದ ಚರಂಡಿ,ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ರಾಜ್ಯ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷ,ಶಾಸಕ ಜಿ.ಎಸ್.ಪಾಟೀಲ ಹೇಳಿದರು


ಅವರು ಭಾನುವಾರ ಪಟ್ಟಣದ ಶ್ರೀ ಸಾಯಿ ನಗರದಲ್ಲಿ ಪುರಸಭೆಯಿಂದ ಆಯೋಜಿಸಿದ್ದ ಸಿ.ಎಮ್.ಐ.ಡಿ.ಸಿ ಯೋಜನೆಯಡಿ ಮಂಜೂರಾದ ರೂ.೪.೮೯ ಅನುದಾನದಲ್ಲಿ ಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.


ಪಟ್ಟಣ,ನಗರ ಪ್ರದೇಶಗಳಲ್ಲಿ ನೂತವಾಗಿ ನಿರ್ಮಾಣವಾಗುವ ಬಡಾವಣೆಗಳು ಅಲ್ಲಿನ ಸಾರ್ವಜನಿಕರು,ನಿವಾಸಿಗಳಿಗೆ ಅವಶ್ಯಕ ಮೂಲ ಸೌಲಭ್ಯಗಳನ್ನು ಒದಗಿಸುವಂತಿದ್ದರೆ ಮಾತ್ರ ಪುರಸಭೆ,ಪಟ್ಟಣ ಪಂಚಾಯತ ಅಧಿಕಾರಿಗಳು ಎನ್.ಓ.ಸಿ ನೀಡಬೇಕು.ಯಾರೋ ಜನಪ್ರತಿನಿಧಿಗಳ ಒತ್ತಾಯದಿಂದ ನಿಯಮ ಬಾಹಿರ ಕೆಲಸ ಮಾಡಿದರೆ ಅಲ್ಲಿನ ನಿವಾಸಿಗಳು,ಜಾಗಾ ಖರೀದಿಸಿದವರು ತಿವೃ ತೊಂದರೆ ಅನುಭವಿಸಬೇಕಾಗುತ್ತದೆ.ನೂತನ ಬಡವಣೇಗಳಲ್ಲಿ ಸುಸಜ್ಜಿತ ರಸ್ತೆ,ಚರಂಡಿ,ವಿದ್ಯುತ್ ಸಂಪರ್ಕ ಕುಡಿಯುವ ನೀರಿನ ಸೌಲಭ್ಯಗಳಿದ್ದರೆ ಮಾತ್ರ ಅವುಗಳಿಗೆ ಎನ್.ಓ.ಸಿ ನೀಡಬೇಕು ಎಂದರು


ರೋಣ ಪಟ್ಟಣವನ್ನು ಸಾಕಷ್ಟು ಅಭಿವೃದ್ದಿ ಮಾಡಬೇಕು.ಇತರೆ ನಗರಗಳಂತೆ ರೋಣವೂ ಒಂದು ಸುಂದರ ತಾಣವಾಗಿಸಬೇಕು ಎಂಬ ಮಹತ್ವದ ಕನಸು ಹೊಂದಿರುವೆ ಅದಕ್ಕೆ ಸಹಕಾರ ನೀಗುತ್ತಿಲ್ಲ,ಅಂಗಡಿ,ಮುಗ್ಗಟ್ಟುಗಳು ರಸ್ತೆಗೆ ಅಡ್ಡಲಾಗಿರುವದರಿಂದ ಸುಗಮ ವಾಹನ ಸಂಚಾರಕ್ಕೂ ಸಂಚಕಾರ ಬಂದಿದೆ.ಬೆಂಗಳೂರ ಮಟ್ಟದಲ್ಲಿ ನಮಗೆ ರೋಣ ಇನ್ನೂ ಅದೇ ಸ್ಥಿತಿಯಲ್ಲಿದೆ ಎಂದುಅಪಹಾಸ್ಯ ಮಾಡುವಂತಾಗಿದೆ.ನಗರದ ಹೃದಯ ಭಾಗದಲ್ಲಿರುವ ಕೆರೆಯನ್ನು ಅಭಿವೃದ್ದಿ ಪಡಿಸಿ ನಿಸರ್ಗ ತಾಣ ಮಾಡುವ ನಿಟ್ಟಿನಲ್ಲಿ ನೀಲನಕ್ಷೆ ತಯಾರಿಸಲಾಗಿತ್ತು ಅದಕ್ಕೂ ಕೆಲವರು ಅಡ್ಡಗಾಲು ಹಾಕುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.


ಮತಕ್ಷೇತ್ರದ ವ್ಯಾಪ್ತಿಯಲ್ಲಿ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ.ನಗರಕ್ಕೆ ಜಿಟಿಟಿಸಿ ಕಾಲೇಜು ಮಂಜೂರಾಗಿದ್ದು ರೂ.೫೦ ಕೋಟಿ ಅನುದಾನದಲ್ಲಿ ಕಟ್ಟಡ ಕಾಮಗಾರಿ ಆರಂಭವಾಗಿದೆ.ಇಲ್ಲಿ ವಿದ್ಯಾರ್ಥಿಗಳು ವಿವಿಧ ತಾಂತ್ರಿಕ ಕೊರ್ಸಗಳಿಗೆ ಪ್ರವೇಶ ಪಡೆದರೆ ನೌಕರಿ ಖಚಿತ. ಕಟ್ಟಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೂರದೃಷ್ಠಿಯಿಂದ ಸುಮಾರು ೬ ಎಕರೆ ಜಮೀನಿನಲ್ಲಿ ರೂ.೩೮ ಕೋಟಿ ಅನುದಾನದಲ್ಲಿ ಕಟ್ಟಡ ಕಾಮಗಾರಿ ನಡೆದಿದ್ದು,ಇದೊಂದು ಬೃಹತ್ ಕಟ್ಟಡ ನಿರ್ಮಾಣವಾಗಿ ೩೦೦ ೬ ರಿಂದ ೧೦ನೇ ತರಗತಿ ಮಕ್ಕಳು ವಸತಿಯುತ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ ಎಂದರು
ಅಲ್ಪಸಂಖ್ಯಾತ ಇಲಾಖೆಯಿಂದ ವಸತಿ ಶಾಲೆ ತೆರೆಯಲಾಗಿದೆ,ಹಲವಾರು ವಸತಿ ಶಾಲೆಗಳು,ವಸತಿ ನಿಲಯಗಳನ್ನು ಮಂಜೂರು ಮಾಡಿಸಿದ್ದು, ಹಿಂದಿನ ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಪಾಲಿಟೆಕ್ನಿಕಲ್ ಕಾಲೇಜು ಅನಾಥ ಕಟ್ಟಡವಾಗಿತ್ತು.ಅದಕ್ಕೆ ರೂ.೮ ಕೋಟಿ ಅನುದಾನ ಬಿಡುಗಡೆ ಮಾಡಿಸಿ ಸುಸಜ್ಜಿತವಾದ ಕಟ್ಟಡ ಮಾಡಲಾಗಿದ್ದು ಪ್ರಸಕ್ತ ವರ್ಷದಿಂದಲೇ ತರಗತಿಗಳು ಆರಂಭವಾಗಲಿದೆ. ಹಿಂದಿನ ಅವಧಿಯ ಜನಪ್ರತಿನಿಧಿಗಳಿಂದ ರೋಣ ನಗರದಲ್ಲಿದ್ದ ಪದವಿ ಕಾಲೇಜು ಸ್ಥಳಾಂತರವಾಯಿತು,ಸರಕಾರಿ ಪದವಿ ಕಾಲೇಜು ಅವಶ್ಯವಿದೆ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುವೆ, ಸರಕಾರಿ ಪದವಿ ಪೂರ್ವ ಕಾಲೇಜಿಗೆ ನೂತನವಾಗಿ ೧೦ ಕೊಠಿಗಳನ್ನು ನಿರ್ಮಿಸಲಾಗಿದೆ.ಅವಶ್ಯವಿರುವ ಉಪನ್ಯಾಸಕರೂ ಬರುವಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವೆ ಎಂದರು

oppo_2


ಪುರಸಭೆ ಕಸ ವಿಲೇವಾರಿ ವಾಹನಗಳಿಗೆ ಕಸ ಹಾಕುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು.ಚರಂಡಿಯಲ್ಲಿ ಕಸ ಹಾಕಬಾರದು,ಶ್ರೀಸಾಯಿ ನಗರದ ನಿವಾಸಿಗಳು ಪ್ರಜ್ಞಾವಂತರು,ಇಲ್ಲಿನ ಮುಖಂಡರು ಮನೆ ಮನೆಗೆ ತೆರಳಿ ಕಸ ವಿಲೇವಾರಿ ಕುರಿತು ಸರ್ವರಲ್ಲೂ ಜಾಗೃತಿ ಮೂಡಿಸಬೇಕು.ಈ ನಗರಕ್ಕೆ ದೊಡ್ಡ ಚರಂಡಿಯ ಅವಶ್ಯಕತೆ ಇದೆ.ಮುಂಬರುವ ದಿನಗಳಲಲ್ಲಿ ಇಡೀ ಬಡಾವಣೆಯ ತ್ಯಾಜ್ಯ ನೀರು ಮುಖ್ಯ ಚರಂಡಿಯ ಮೂಲಕ ರಾಜಕಾಲುವೆ ಸಂಪರ್ಕ ಕಲ್ಪಿಸಲಾಗುವುದು,ಇದಕ್ಕೆ ನಿಮ್ಮೇಲ್ಲರ ಸಹಕಾರ ಇರಲಿ,ಕಾಮಗಾರಿ ನಡೆಯುವಾಗ ಗುತ್ತಿಗೆದಾರರಿಗೆ ವಿನಾಕಾರಣ ತೊಂದರೆ ಕೊಡಬೇಡಿ, ಎಲ್ಲರೂ ಸೇರಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ತಿಳಿಸಿ,ಹಾಗೇನಾದರೂ ಕಳಪೆ ಕಾಮಗಾರಿ ನಡೆದರೆ ನನ್ನ ಗಮನಕ್ಕೆ ತರಬೇಕು.ನಾನು ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಹೇಳಿ ಗುಣಮಟ್ಟದ ಕೆಲಸ ನಡೆಯುವಂತೆ ಮಾಡುವೆ ಎಂದು ಹೇಳಿದರು


ಪ್ರಾಸ್ತಾಪಿಕವಾಗಿ ಶಿಕ್ಷಕ ಎಸ್.ಬಿ.ಹಿರೇಮಠ ಹಾಗೂ ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ಮಾತನಾಡಿದರು.


ವೇದಿಕೆಯಲ್ಲಿ ಗೀತಾ ಮಾಡಲಗೇರಿ,ನಾಜಬೆಗಂ ಯಲಿಗಾರ,ವಿರೇಶ ಬೊಳ್ಳೊಳ್ಳಿ,ಬಾಬುಗೌಡ ಪಾಟೀಲ,ಈಶ್ವರ ಕಡಬಿನಕಟ್ಟಿ, ಆನಂದ ಚಂಗಳಿ,ಬಾವಾಸಾಬ ಬೆಟಗೇರಿ, ಯುಸೂಫ್ ಇಟಗಿ,ಸಂಗು ನವಲಗುಂದ, ಯಲ್ಲಪ್ಪ ಕಿರೇಸೂರ,ನಾಗಪ್ಪ ಮಂಗಳೂರು.ಕೆ ಎಸ್.ಹಾಲಬಾವಿ, ವೀರಯ್ಯ ಹಿರೇಮಠ,ಅಜೀಜ ಯಲಿಗಾರ, ಎಸ್.ಬಿ.ಹಿರೇಮಠ,ಸಂಗಪ್ಪ ಕುಷ್ಠಗಿ,ರಾಜು ಮಾಡಲಗೇರಿ,ಮಲಿಕ್ ಯಲಿಗಾರ, ಮಲ್ಲಪ್ಪ ಮಾಡಲಗೇರಿ, ಸಂತೋಷ ಚಿತ್ರಗಾರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!