ನಾಳೆ ಶ್ರೀ ವೀರಭದ್ರೇಶ್ವರ ಮಹಾ ರಥೋತ್ಸವ

ವಿಜಯ ಸಿಂಧೂರ ರೋಣ

ಈ ಭಾಗದ ಆರಾಧ್ಯ ದೈವ ಪಟ್ಟಣದ ಶ್ರೀ ವೀರಭದ್ರೇಶ್ವರ ಮಹಾ ರಥೋತ್ಸವವು ಏ.೨೭ ರ ಸೋಮವಾರ ಸಂಜೆ ೬-೩೧ಕ್ಕೆ ವಿಜೃಂಭನೆಯಿಂದ ಜರಗುವುದು.


ಬೆಳಗ್ಗೆ ಮಹಾ ಅಭಿಷೇಕ,ಗುಗ್ಗಳ,ಮೂರ್ತಿ ಪೂಜೆ,ಪಾಲಕಿ ಉತ್ಸವ,ರಥದ ಹಗ್ಗದ ಮೆವಣಿಗೆ, ಪುರವಂತರಿಂದ ವಿವಿಧ ಪೂಜಾ ವಿಧಾನಗಳು ನಡೆಯಲಿದೆ,ಕಡಬಿನ ಕಾಳಗ, ಓಕಳಿ,ಮಹಾರಥೋತ್ಸವದ ವೇಳೆ ನಂದಿಕೋಲ ಕುಣಿತ,ಕರಡಿ ಮಜಲು,ಡೊಳ್ಳು ಕುಣಿತ ನಡೆಯುವವವು,

ರಥೋತ್ಸವ ಆರಂಭದ ಸಮಯದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರು,ಶಾಸಕ ಜಿ.ಎಸ್.ಪಾಟೀಲ,ಕೆ.ಎಸ್.ಚನ್ನಪ್ಪಗೌಡ್ರ,ಶಿವಣ್ಣ ಪಲ್ಲೇದ,ಅಡಿವೆಪ್ಪ ಸಂಗಳದ,ಎಮ್.ಎ.ಲಿಂಗನಗೌಡ್ರ ಸೇರಿದಂತೆ ದೇವಸ್ಥಾನ ಟ್ರಸ್ಟ ಕಮೀಟಿ ಸದಸ್ಯರು,ಶ್ರಮಠದ ಸಹಸ್ರಾರು ಭಕ್ತ ಸಮೂಹ ಹಾಜರಿರುವರು ಎಂದು ಟ್ರಸ್ಟ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!