ಪರಿಶ್ರಮ ಮತ್ತು ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮಿಥುನ್ ಪಾಟೀಲ್

ವಿಜಯ ಸಿಂಧೂರ ಗಜೇಂದ್ರಗಡ ನ್ಯೂಸ್

:ವಿದ್ಯಾರ್ಥಿಯ ಸಾಧನೆ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು, ಗ್ರಾಮೀಣ ಪ್ರದೇಶ ವಿದ್ಯಾರ್ಥಿ ಉತ್ತಮ ಫಲಿತಾಂಶ ತಂದುಕೊಟ್ಟಿರುವುದು ಶಿಕ್ಷಣದ ಗುಣಮಟ್ಟ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ” ಎಂದು ಮಿಥುನ್ ಪಾಟೀಲ್ ಹೇಳಿದರು.

ಅವರು ಶನಿವಾರ ಸೂಡಿ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಪ್ರವೀಣಕುಮಾರ ಸೊಬಗಿನ ಅವರ ನಿವಾಸದಲ್ಲಿ ಸನ್ಮಾನಿಸಿ ಮಾತನಾಡಿದರು ಇತ್ತೀಚೆಗೆ ಪ್ರಕಟವಾದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಗಜೇಂದ್ರಗಡ ತಾಲೂಕಿನ ಇಟಗಿ ಆದರ್ಶ ವಿದ್ಯಾರ್ಥಿ ಪ್ರವೀಣಕುಮಾರ ಸೊಬಗಿನ ಅವರನ್ನು ಸೂಡಿ ಗ್ರಾಮದ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಿದರು ಮಾತನಾಡಿದರು.

ಗದಗ ಜಿಲ್ಲಾ ಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿ ಸಾಧನೆ ಸರ್ವರೂ ಮೆಚ್ಚುವಂಥದ್ದು ಎಂದರು.ವಿದ್ಯಾರ್ಥಿಯ ಈ ಐತಿಹಾಸಿಕ ಸಾಧನೆಗೆ ತಾಲೂಕಿನಾದ್ಯಂತ ಸಾರ್ವಜನಿಕರು ಮತ್ತು ಶಿಕ್ಷಣ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತನ ಸಾಧನೆ ಇಷ್ಟಕ್ಕೆ ಸೀಮಿತವಾಗಿರದೆ ನಿರಂತರ ಓದು ವಿದ್ಯಾರ್ಥಿಗಳಿಗಳ ಜೀವನ ಸುಧಾರಣೆ ಮಾಡುವುದಲ್ಲದೆ, ಸಾರ್ಥಕ ಮಾಡುತ್ತದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರಮುಖ ಹಂತವಾಗಿದ್ದು, ಈ ಹಂತದಲ್ಲಿ ಸಾಧನೆ ಮಾಡಿದವರು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಎಂದಿರುವ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಅಂತಹ ಪ್ರತಿಭೆಯನ್ನು ಹೊಂದಿರುವ ನಮ್ಮ ಗ್ರಾಮ ಪ್ರವೀಣಕುಮಾರ ಸೊಬಗಿನ ಅವರಿಗೆ ಎದುರಾಗುವ ಸಮಸ್ಯೆಗಳಿಗೆ ಸಹಾಯ ಸಹಕಾರ ನೀಡಲು ಸದಾಸಿದ್ದ ಎಂದು ಕ್ಷೇತ್ರ ಶಾಸಕ ಜಿ ಎಸ್ ಪಾಟೀಲರು ತಿಳಿಸಿದ್ದಾರೆ ಎಂದರು.

ಈ ಸಮ್ಮಾನ ಕಾರ್ಯಕ್ರಮದಲ್ಲಿ ಬಸುವರಾಜ ಶಿರೋಳ, ಅನ್ವರ್ ಇಟಗಿ, ಶರೀಫ್ ಡಾಲಾಯತ, ಚೆನ್ನಪ್ಪ ನೂಲ್ವಿ ವೀರೇಶ ಪಟ್ಟಣಶೆಟ್ಟರ, ಪ್ರಕಾಶ ಕುಬಸದ, ಮಲ್ಲಯ್ಯ ಭೀಕ್ಷಾವತಿಮಠ, ಅಂಬರೀಷ್ ಅಪ್ಪಣ್ಣವರ, ಶರಣಪ್ಪ ಗೊರವರ ಊರಿನ ಹಿರಿಯರು ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!