ಹಿರೂರ ಗ್ರಾಮದಲ್ಲಿ ಪುರಾಣ ಪ್ರವಚನ ಮಹೋತ್ಸವ ಆರಂಭ


ವಿಜಯ ಸಿಂಧೂರ ತಾಳಿಕೋಟೆ

ತಾಲೂಕಿನ ಸುಕ್ಷೇತ್ರ ಹಿರೂರ ಗ್ರಾಮದಲ್ಲಿ ಶ್ರೀ ಪಟ್ಟದದೇವರ ಹಿರೇಮಠದ ಆಶ್ರಯದಲ್ಲಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಪುರಾಣ ಪ್ರವಚನ ಮಹೋತ್ಸವವನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ.


ಈ ಧಾರ್ಮಿಕ ಕಾರ್ಯಕ್ರಮಕ್ಕೆ ಪೂಜ್ಯ ಶ್ರೀ ವೇ. ಮೂ. ವೀರಯ್ಯ ಶಾಸ್ತ್ರಿಗಳು (ಸಾ|| ಬಳು0ಡಗಿ), ಶ್ರೀ ವೀರೇಶ್ವರ ಪುಣ್ಯಾಶ್ರಮ, ಗದಗ ಇವರು ಮುಖ್ಯ ಪ್ರವಚನಕಾರರಾಗಿ ಆಗಮಿಸಲಿದ್ದು, ಮಹಾಸ್ವಾಮಿಗಳವರು ವಿಶೇಷ ಸಾನ್ನಿಧ್ಯ ವಹಿಸಲಿದ್ದಾರೆ.


ಕಾರ್ಯಕ್ರಮದಲ್ಲಿ ಸಂಗೀತ ಕಲಾ ಬಳಗದಿಂದ ಭಕ್ತಿಗೀತೆಗಳ ಕಾರ್ಯಕ್ರಮವೂ ನಡೆಯಲಿದ್ದು, ಮಹೇಶ ಗವಾಯಿಗಳು (ಭಂಟನೂರು) ಹಾಗೂ ಶ್ರೀ ವೇ. ಅಮರಯ್ಯ ಗವಾಯಿಗಳು (ಎಂ. ಭೋಮ್ಮನಹಳ್ಳಿ) ಗಾಯನ ನಡೆಸಲಿದ್ದಾರೆ. ಜೊತೆಗೆ ಜೋಕಾವಿಯ ಶ್ರೀ ಬಸನಗೌಡ ಬಿರಾದಾರ ಅವರು ತಬಲಾ ವಾದ್ಯ ಸಹಕಾರ ನೀಡಲಿದ್ದಾರೆ.


ಈ ಪುರಾಣ ಪ್ರವಚನವು ಮೇ 28ರಿಂದ ಜೂನ್ 22ರವರೆಗೆ ಪ್ರತಿದಿನ ಸಂಜೆ 7.30ರಿಂದ 9.00 ಗಂಟೆಯವರೆಗೆ ನಡೆಯಲಿದೆ.
ಹಿರೂರ, ತಮದಡ್ಡಿ, ಜೋಕಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸರ್ವಧರ್ಮದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!