ವಿಜಯ ಸಿಂಧೂರ ರೋಣ
ಪ್ರತಿದಿನದ ಯೋಗಾಭ್ಯಾಸವು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ರಾಮಬಾಣವಾಗಿದೆ. ಇದು ಸ್ನಾಯುಗಳನ್ನು ಬಲಪಡಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಉದ್ಯಮಿ ವಿಶ್ವನಾಥ ಜಿಡ್ಡಿಬಾಗಿಲ ಹೇಳಿದರು

ಅವರು ಪಟ್ಟಣದ ಶ್ರೀಪವನಸುತ ಕೋಚಿಂಗ್ ಕ್ಲಾಸಸ್ ಆಯೋಜಿಸಿದ್ದ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು
ಶರೀರ ಮತ್ತು ಮನಸ್ಸಿಗೆ ಯೋಗ ಬೇಕು. ಯೋಗದಿಂದ ಮನಸ್ಸು ಶುದ್ಧವಾಗುತ್ತದೆ. ಶುದ್ಧವಾದ ಮನಸ್ಸಿನಿಂದ ವಿಶೇಷ ಚೈತನ್ಯ ಹರಿದು ಮಾನವನನ್ನು ದೈವತ್ವದೆಡೆಗೆ ಒಯ್ದು ನಿಲ್ಲಿಸುತ್ತದೆ ಎಂದರು

ಆನಂದದ ಬದುಕಿಗೆ ಹಂಬಲಿಸಿದಾಗ ಯೋಗದ ಕಡೆಗೆ ಹೆಜ್ಜೆ ಇರಿಸಿದ್ದೇವೆ ಎಂದರ್ಥ. ಯೋಗದ ಮೂಲಕ ತನ್ನನ್ನು ತಾನು ನೋಡಿಕೊಂಡು ತನ್ನ ಮೂಲ ಅಸ್ತಿತ್ವ ಗೊತ್ತಾದಾಗ ತನ್ನನ್ನು ತಾನು ದರ್ಶನ ಮಾಡಿಕೊಳ್ಳುತ್ತಾನೆ. ಆಗ ಮನಸ್ಸು ಅಂತರ್ಮುಖಗೊಂಡು ಆತ್ಮಕ್ಕೆ ಸಂತೃಪ್ತಿ ಭಾವ ಮೂಡುತ್ತದೆ ಎಂದು ಹೇಳಿದರು

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಎಸ್.ಐ.ದಿಂಡೂರ ಮಾತನಾಡಿ, ಯೋಗ ಎಂದರೆ ಕೂಡುವುದು. ಜೀವ ಮತ್ತು ಪರಮಾತ್ಮ, ಪರವಸ್ತು ಮತ್ತು ಆತ್ಮವಸ್ತು ಒಂದಾಗುವುದೇ ಯೋಗ. ಜೀವನ ಯೋಗದ ಕಡೆಗೆ ಹರಿದಾಗ ಯಾವ ರೋಗಗಳು, ಆತಂಕಗಳು, ದುಗುಡಗಳು ಭಾದಿಸುವುದಿಲ್ಲ ಎಂದರು.

ವೇದಿಕೆಯಲ್ಲಿ ಶಿವಾನಂದ ಬೂದಿಹಾಳ ತರಬೇತುದಾರರಾಗಿ ಜೆ. ಎಸ್ ಪಾಟೀಲ, ವಾಸುದೇವ ಗುಡಿಸಾಗರ, ನಿವೃತ್ತ ಯೋಧ ಬಸವರಾಜ ಜಿಡ್ಡಿಬಾಗಿಲ ಹಾಗೂ ಮಲ್ಲಿಕಾರ್ಜುನ ಸಂತೋಜಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಮುಖ್ಯಸ್ಥರು ಬಸವರಾಜ ಹೊಸಳ್ಳಿ, ಎಚ್ ಆರ್ ಓಲೇಕಾರ್, ನಿಂಗರಾಜ ಹೊಸಳ್ಳಿ, ಯಲ್ಲಪ್ಪ ಕಿರೇಸೂರ, ಮತ್ತು ಸತೀಶ ಮುಧೋಳ, ಮಂಜುನಾಥ ಸೂಡಿ, ರಾಜು ದೊಡ್ಡಮನಿ, ಕಲ್ಲನಗೌಡರ, ದಿವ್ಯಾ ಹೊಸಳ್ಳಿ, ಜಾಸ್ಮಿನ್ ಹೊಸಮನಿ, ಶ್ವೇತಾ, ಬಿಬಿಜಾನ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
