ಸಿಂದಗಿ – ಹಳ್ಳಿಗಳು ಅಭಿವೃದ್ಧಿಯಾದಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.

ಅವರು ತಾಲೂಕಿನ ಬಂದಾಳ ಗ್ರಾಮದಲ್ಲಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಬಂದ ಗ್ರಾಮದಿಂದ ಸಿಂದಗಿ ಪಟ್ಟಣಕ್ಕೆ ಹೋಗುವ ರಸ್ತೆಗೆ ಅಡ್ಡಲಾದ ಹಳ್ಳಕ್ಕೆ ಬ್ರಿಡ್ಜ್ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ 1.81 ಕೋಟಿ ಮೊತ್ತದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಹಳ್ಳಿಗಳಲ್ಲಿ ಉತ್ತಮ ಪರಿಸರ, ಮೂಲಭೂತ ಸೌಕರ್ಯ ಹಾಗೂ ಆರೋಗ್ಯ, ಶಿಕ್ಷಣ ಮುಖ್ಯವಾಗಿ ಬೇಕು.ನಮ್ಮ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಯ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತರಲಾಗಿದ್ದು, ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕು.

ಸಾರ್ವಜನಿಕರು ಕಳಪೆ ಕಾಮಗಾರಿಯ ಬಗ್ಗೆ ನಿಗಾವಹಿಸಬೇಕು. ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಮೂಲಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಐದು ಗ್ಯಾರಂಟಿಗಳ ಮಧ್ಯ ರಾಜ್ಯ ಸರ್ಕಾರ ಸಿಂದಗಿ ಮತಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನವನ್ನ ನೀಡುತ್ತಲ್ಲಿದೆ. ನನಗೆ ನೀಡಿದ ಪ್ರತಿಯೊಂದು ಮತವು ಅದು ಅಭಿವೃದ್ಧಿಗಾಗಿ ಮೀಸಲಿಡುತ್ತೇನೆ ಎಂದರು.
ಇದೆ ಸಂದರ್ಭದಲ್ಲಿ ಮುಖಂಡರಾದ ಬಸಯ್ಯ ಹಿರೇಮಠ,ವಿ. ಬಿ ಕುರಡೆ, ಮುತ್ತು ಮುಂಡೇವಾಡಗಿ, ನಾರಾಯಣ ಕುಲಕರ್ಣಿ, ಕುಮಾರ ದೇಸಾಯಿ, ಷಣ್ಮುಖಯ್ಯ ಹಿರೇಮಠ, ದಯಾನಂದ ಹಿರೇಮಠ, ದುಂಡಪ್ಪ ಬಿರಾದಾರ, ಸುರೇಶ ಬೆನಕನಳ್ಳಿ, ಶಿರಪ್ಪ ಉಕ್ಕಲಿ, ಪದಮಣ್ಣ ದೇವೂರ, ಬಸಣ್ಣ ಯಲಮೇಲಿ, ರಜಾಕ ಸೋಂಪುರ, ಸಿದ್ದು ಬಿಸನಾಳ, ಶರಣಪ್ಪ ಜಮಾದಾರ, ಗೊಲ್ಲಾಳಪ್ಪ ನಾಯ್ಕೋಡಿ, ರಾಮು ಯಳಮೇಲಿ, ಧರ್ಮರಾಜ ಬಡಾನೂರ, ಜಾನಪ್ಪ ನಾಯ್ಕೋಡಿ, ಸಿದ್ದಪ್ಪ ಜಮಾದಾರ, ಕಾರ್ಯಕರ್ತರು, ಅಭಿಮಾನಿಗಳು, ಗ್ರಾಮಸ್ಥರು ಸೇರಿದಂತೆ ಇಲಾಖಾ ಅಧಿಕಾರಿಗಳಾದ ಉಪಸ್ಥಿತರಿದ್ದರು.
