ವಿಜಯ ಸಿಂಧೂರ
ಗದಗ ಜಿಲ್ಲೆ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಗೆಳೆಯರ ಬಳಗದ ವತಿಯಿಂದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 03-05-2026 ರಂದು ಮುಕ್ತ ಚದುರಂಗ ನಾಕ್-ಔಟ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ವಿಜೇತರಿಗೆ
ಪ್ರಥಮ ಬಹುಮಾನವಾಗಿ 5000/- ರೂಪಾಯಿ,
ದ್ವಿತೀಯ ಬಹುಮಾನವಾಗಿ 3000/- ರೂಪಾಯಿ,
ತೃತೀಯ ಬಹುಮಾನವಾಗಿ 2000/- ರೂಪಾಯಿ,
ಚತುರ್ಥ ಬಹುಮಾನವಾಗಿ 1000/- ರೂಪಾಯಿ ಹಣ ಮತ್ತು ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಚಿಕ್ಕನರಗುಂದ ಗೆಳೆಯರ ಬಳಗದ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗ ಮತ್ತು ಬಸವೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಚಿಕ್ಕನರಗುಂದ ಗ್ರಾಮಸ್ಥರು ಉಪಸ್ಥಿತರಿದ್ದರು
