ತಾಳಿಕೋಟೆ: ಪಟ್ಟಣದಲ್ಲಿ ಮಾದರ ಚೆನ್ನಯ್ಯ ಸಮಾಜದ ದೇವತೆಯಾದ ದುರ್ಗಾದೇವಿಯ ಜಾತ್ರಾಮಹೋತ್ಸವವು ಮಂಗಳವಾರದಮದು ಭಕ್ತಿ, ಶ್ರದ್ದೆ, ಸಂಭ್ರಮಗಳಿಂದ ನೆರವೇರಿತು.
ತನ್ನಿಮಿತ್ತ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಬೆಳಿಗ್ಗೆ 8:00 ಘಂಟೆಗೆ ದುರ್ಗಾದೇವಿ ಮೂರ್ತಿಯ ಭವ್ಯ ಮೆರವಣಿಗೆಯು ಅಂಬಾಭವಾನಿ ದೇವಸ್ಥಾನದಿಂದ ಡೊಳ್ಳು ಕುಣಿತ, ಕರಡಿ ಮಜಲು,ಭಾಬಾಜಾ ಭಜಂತ್ರಿ ಜೊತೆ ಆರಂಭವಾಗಿ ಕತ್ರಿ ಬಜಾರ ಮಾರ್ಗವಾಗಿ ಬಂದು ಮರಗಮ್ಮ ದೇವಿ ದೇವಸ್ಥಾನವನ್ನು ಸೇರಿತು
ನಂತರ ರಾಜವಾಡೆ ಮಾರ್ಗವಾಗಿ ಭೋವಿ ಸಮಾಜದ ಪಿಲೇಕಮ್ಮ ದೇವಿಯನ್ನು ಪೂಜಿಸಿ ವಾರ್ಡ್ ನಂಬರ್ 19 ಮಾದರ ಓಣಿಯ ಮಾದರ ಚೆನ್ನಯ್ಯ ನಗರದಲ್ಲಿ ಇರುವ ದೇವಿಯ ಗರ್ಭಗುಡಿಯನ್ನು ಪ್ರವೇಶ ಮಾಡಿದಳು
ಮಧ್ಯಾಹ್ನ ಅನ್ನಪ್ರಸಾದ ನಡೆಯಿತು. ಸಂಜೆ ಧರ್ಮಸಭೆ ಹಾಗೂ ರಾತ್ರಿ ಬಸವೇಶ್ವರ ನಾಟ್ಯ ಸಂಘ ಬಾಗೇವಾಡಿ ನಾಗೂರ ಅವರಿಂದ ರೇಣುಕಾ ಎಲ್ಲಮ್ಮ ದೇವಿ ಮಹಾತ್ಮೆ ನಾಟಕ ಜರುಗಿತು.
ಜಾತ್ರಾ ಉತ್ಸವದಲ್ಲಿ ಪುರಸಭೆ ಮಾಜಿ ಸದಸ್ಯರಾದ ಪ್ರಭುಗೌಡ ಮದರಕಲ್ಲ, ಜೈ ಸಿಂಗ್ ಮೂಲಿಮನಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹಿಬೂಬ ಕೆಂಭಾವಿ, ಸಮಾಜದ ಪ್ರಮುಖರಾದ ರಾಮಣ್ಣ ಕಟ್ಟಿಮನಿ, ಬಸ್ಸು ಮಾದರ, ಗೋಪಾಲ ಕಟ್ಟಿಮನಿ, ಬಸಪ್ಪ ಮಾದರ್ ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
