ತಾಳಿಕೋಟೆ : ಪಟ್ಟಣದಲ್ಲಿ ಮೇ 10 ರಂದು ತಾಲೂಕ ಆಡಳಿತದ ವತಿಯಿಂದ ಮಹಾಸಾದ್ವಿ ಶ್ರೀ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಆಚರಿಸುವ ಕುರಿತು ಪೂರ್ವಭಾವಿ ಸಭೆ ಸೋಮವಾರ ತಹಶೀಲ್ದಾರ್ ಕಾರ್ಯಾಲಯದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ತಹಶೀಲ್ದಾರ್ ಡಾ.ವಿನಯಾ ಹೂಗಾರ ಅವರು ಮಾತನಾಡಿ ಮಹಾಸಾಧ್ವಿ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ತಾಲೂಕಿನ ಎಲ್ಲ ಕಚೇರಿಗಳಲ್ಲಿ ಬೆಳಿಗ್ಗೆ 8-00 ಗಂಟೆಗೆ ಸಂಬಂಧಿಸಿದ ಅಧಿಕಾರಿಗಳು ಮಲ್ಲಮ್ಮನವರ ಭಾವಚಿತ್ರದ ಪೂಜೆಯನ್ನು ನೆರವೇರಿಸಿ ಜಯಂತಿಯ ಆಚರಣೆ ಮಾಡುವುದು, ಅದೇ ರೀತಿ ಬೆಳಿಗ್ಗೆ 8:30 ಘಂಟೆಗೆ ತಾಲೂಕ ಆಡಳಿತದ ವತಿಯಿಂದ ಸಮಾಜ ಬಾಂಧವರ ಸಹಕಾರದೊಂದಿಗೆ ಕಾರ್ಯಲಯದ ಸಭಾಂಗಣದಲ್ಲಿ ಜಯಂತಿಯನ್ನು ಆಚರಿಸಲಾಗುವುದು ಇದರಲ್ಲಿ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.
ಜಯಂತಿ ಆಚರಣೆಯಲ್ಲಿ ಯಾವುದೇ ರೀತಿಯ ಲೋಪ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಅವರು ತಿಳಿಸಿದರು. ಸಭೆಯಲ್ಲಿ ಸಮಾಜದ ಪರವಾಗಿ ಪ್ರಮುಖರಾದ ಜಿ.ಜಿ.ಮದರಕಲ್ಲ ಹಾಗೂ ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಮಾತನಾಡಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಸಮಾಜದ ಗಣ್ಯರಾದ ಎಚ್ಎಸ್ ಪಾಟೀಲ, ಸಿ.ಎಸ್.ಮಾಳಿ,ರವಿ ಪಾಟೀಲ, ಸಂಗನಗೌಡ ಅಸ್ಕಿ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ದಮ್ಮೂರಮಠ ಪಿಎಸ್ಐ ಎಸ್.ಎಂ.ಪಡಶೆಟ್ಟಿ, ಕೃಷಿ ಅಧಿಕಾರಿ ಮಹೇಶ ಜೋಶಿ,ತಾಪಂ ನ ಮಹಾಂತಗೌಡ ದೊರೆಗೋಳ,ನಿಲಯ ಪಾಲಕ ಹಣಮಂತಪ್ಪ ಬಾದವಾಡಗಿ ಮತ್ತಿತರರು ಇದ್ದರು.
