ಪರಿಸರ ಮತ್ತು ಮನುಷ್ಯರು ಒಂದೇ ನಾಣ್ಯದ ಎರಡು ಮುಖಗಳು: ಪಾಪಣ್ಣವರ

ವಿಜಯ ಸಿಂಧೂರ, ರೋಣ

ಪರಿಸರ ಮತ್ತು ಮನುಷ್ಯರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮನುಷ್ಯನ ಬದುಕು, ಉಸಿರು, ಆಹಾರ ಮತ್ತು ಆರೋಗ್ಯ ಎಲ್ಲವೂ ಪರಿಸರದ ಮೇಲೆಯೇ ಅವಲಂಬಿತವಾಗಿದೆ. ಆದರೆ, ಪರಿಸರ ಬೆಳೆಯಲು ಮನುಷ್ಯನ ಸಹಕಾರ ಮುಖ್ಯ. ಆಧುನಿಕ ಜೀವನಶೈಲಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ಪ್ರಕೃತಿಗೆ ಮಾಡುತ್ತಿರುವ ಹಾನಿ ಅಪಾರ ಖೇದದ ಸಂಗತಿ ಎಂದು ಪ್ರಾಚಾರ್ಯ ವೈ.ಎನ್.ಪಾಪಣ್ಣವರ ಹೇಳಿದರು

ಅವರು ಶುಕ್ರವಾರ ಪಟ್ಟಣದ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ರೋಣ ಹಾಗೂ NSS ಕೋಶದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಕೃತಿಯು ನಮಗೆ ಜೀವಿಸಲು ಬೇಕಾದ ಗಾಳಿ, ನೀರು ಮತ್ತು ಆಹಾರವನ್ನು ನೀಡಿ ಪೋಷಿಸುತ್ತಿರುವ ನಮ್ಮ ಜೀವನಾಡಿಯಾಗಿದೆ.ಆದರೆ ಇಂದು ಮಾನವನ ಅತಿಯಾದ ಆಸೆ ಮತ್ತು ಮಿತಿಮೀರಿದ ಮಾಲಿನ್ಯದಿಂದಾಗಿ ನಮ್ಮ ಪರಿಸರವು ತೀವ್ರ ಕಂಟಕವನ್ನು ಎದುರಿಸುತ್ತಿದೆ.ಈ ಪರಿಸರ ದಿನಾಚರಣೆಯು ಕೇವಲ ಒಂದು ದಿನದ ಆಚರಣೆಯಾಗದೆ, ನಮ್ಮ ದೈನಂದಿನ ಬದುಕಿನ ಜವಾಬ್ದಾರಿಯಾಗಬೇಕಿದೆ ಎಂದರು

ದೇಶದ ಯುವಶಕ್ತಿಯಾದ ನಮ್ಮ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕಾದ ಅಗತ್ಯವಿದೆ.ನಮ್ಮ ಮಹಾವಿದ್ಯಾಲಯದ ಆವರಣವನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಹಸಿರು ಕ್ಯಾಂಪಸ್ ಮಾಡಲು ನಾವೆಲ್ಲರೂ ಕೈಜೋಡಿಸೋಣ.ಇಂದಿನಿಂದಲೇ ನೀರು, ವಿದ್ಯುತ್ ಉಳಿಸುವ ಮತ್ತು ಸಸಿಗಳನ್ನು ನೆಟ್ಟು ಪೋಷಿಸುವ ದೃಢ ಸಂಕಲ್ಪವನ್ನು ನಾವೆಲ್ಲರೂ ಮಾಡೋಣ.ಪರಿಸರವನ್ನು ರಕ್ಷಿಸೋಣ, ನಮ್ಮ ಹಾಗೂ ಮುಂದಿನ ಪೀಳಿಗೆಯ ಭವಿಷ್ಯವನ್ನು ಸುರಕ್ಷಿತವಾಗಿಸೋಣ ಎನ್ನುವ ಮಾತುಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು

ಈ ಸಮಯದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವೈ. ಎನ್. ಪಾಪಣ್ಣವರ, ಎಸ್. ಆರ್. ಐಹೊಳ್ಳಿ, ಏಚ್. ಆರ್. ದೊಡ್ಡಮನಿ, ಎಸ್. ಎಸ್. ಗೋಡಿ, ಜಿ. ಎನ್. ನಾಯಕ, ಎಸ್. ಎಸ್. ಗೌಡರ,ಎಂ. ಎಂ. ಗುಂಡಗೋಪುರ, ಜಿ. ಏ. ವೀರಾಪುರ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!