ಅಭಿವೃದ್ಧಿ ಹರಿಕಾರ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಿ

ವಿಜಯ ಸಿಂಧೂರ ರೋಣ

ರೈತ ಮನೆತನದಲ್ಲಿ ಹುಟ್ಟಿದ ವ್ಯಕ್ತಿ ಜನಪ್ರತಿನಿಧಿಯಾದರೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಮೂಲಸೌಕರ್ಯ ಪ್ರಗತಿಗೆ ಹೇಗೆ ಕಾರಣವಾಗುತ್ತದೆ ಎಂಬುದಕ್ಕೆ ಈಗಿನ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ಸಾಕ್ಷಿಯಾಗಿದ್ದಾರೆ.ನಾಲ್ಕು ಬಾರಿ ಶಾಸಕರಾಗಿ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಜನಾನುರಾಗಿ, ಹಿರಿಯ ರಾಜಕಾರಣಿ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ದಲಿತ ಮುಖಂಡ ಮೌನೇಶ ಹಾದಿಮನಿ ಆಗ್ರಹಿಸಿದರು

ಅವರು ಗುರುವಾರ ವಿಜಯ ಸಿಂಧೂರ ಪತ್ರಿಕೆಯೊಂದಿಗೆ ಮಾತನಾಡಿದರು.

ರಾಜಕೀಯದಲ್ಲಿ ತಮ್ಮ ಸ್ವಹಿತಾಸಕ್ತಿ ಬಳಸಿಕೊಂಡು ಸಾರ್ವಜನಿಕ ಸೇವೆಗಿಂತ ತಮ್ಮ ಅಭಿವೃದ್ಧಿಗಾಗಿಯೇ ಸೆಣಸಾಡುವವರನ್ನು ನೋಡುತ್ತೇವೆ. ಆದರೆ, ರಾಜಕೀಯವನ್ನು ಸಾರ್ವತ್ರೀಕರಣಗೊಳಿಸಿ ಸದಾ ಬಡವರಿಗಾಗಿ, ರೈತರಿಗಾಗಿ, ಕಾರ್ಮಿಕರಿಗಾಗಿ, ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಜಿ.ಎಸ್.ಪಾಟೀಲರು ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು, ನನಸು ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಮುಂಡರಗಿ ತಾಲೂಕಿನ ಡಂಬಳ ಹೋಬಳಿ ಹಾಗೂ ಗದಗ ತಾಲೂಕಿನ ಕೆಲವು ಗ್ರಾಮಗಳು ರೋಣ ಮತಕ್ಷೇತ್ರಕ್ಕೆ ಸೇರ್ಪಡೆಗೊಂಡ ನಂತರ ಕೆಲವರು ಈ ಗ್ರಾಮಗಳ ಸ್ಥಿತಿ ಮುಗಿದೇ ಹೋಯಿತು ಎನ್ನುತ್ತಿದ್ದರು. ಆದರೆ ಜಿ.ಎಸ್‌.ಪಾಟೀಲರು ಅದನ್ನು ಹುಸಿಗೊಳಿಸಿ, ಅಲ್ಲಿ ಹೊಸ ಕನಸುಗಳನ್ನು ಬಿತ್ತಿದರು.ಅವರ ಅವಧಿಯಲ್ಲಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ರೈತರ ಹಿತಕಾಯಲು ಬದ್ಧರಾಗಿರುವ ಶಾಸಕ ಜಿ. ಎಸ್.ಪಾಟೀಲರು ರಾಜಕೀಯ ಇಚ್ಛಾಶಕ್ತಿಯಿಂದ ಹಿಂದೆ ಬಿದ್ದಿರುವುದನ್ನು ಗಮನಿಸಿ ಡಂಬಳ, ಹಿರೇವಡ್ಡಟ್ಟಿ ಭಾಗದಲ್ಲಿ ಈ ವರ್ಷದ ಬಜೆಟ್‍ನಲ್ಲಿ ₹165 ಕೋಟಿ ಹಣಕಾಸು ನೆರವು ಒದಗಿಸಿ ತೋಟಗಾರಿಕೆ ವಿಶ್ವವಿದ್ಯಾಲಯ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದ ಈ ಭಾಗದ ಪ್ರಗತಿಪರ ರೈತರಲ್ಲಿ ಸಂತಸ ಇಮ್ಮಡಿಗೊಂಡಿದೆ ಎಂದರು

ಅವರ ಅವಧಿಯಲ್ಲಿ ಇವರ ಕಾರ್ಯ ಮೆಚ್ಚಿ ಹೈಕಮಾಂಡ್ ನೀಡುತ್ತಿರುವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕಿಂಚಿತ್ತೂ ಚ್ಯುತಿ ಬಾರದಂತೆ ಅಪಾರ ಅನುಭವ ಹಾಗೂ ಅಲ್ಲಿನ ಹಿರಿಯ ಅಧಿಕಾರಿಗಳ ಸಹಕಾರದಿಂದ ನಿಗಮಗಳಿಗೆ ಹೊಸ ರೂಪ ನೀಡಿ ಉತ್ತುಂಗಕ್ಕೆ ಏರಿಸಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಆದಾಯ ತರುವುದಲ್ಲದೆ, ಒಳ್ಳೆಯ ಗುರಿಯನ್ನು ಸಾಧಿಸಿದ್ದಾರೆ ಎಂದರು

ಪ್ರಸ್ತುತ ಸಂಪುಟ ಪುನಾರಚನೆ ಸಂದರ್ಭದಲ್ಲಿ ನಾಲ್ಕು ಬಾರಿ ಶಾಸಕರಾಗಿ ಅಪಾರ ಅನುಭವ ಹೊಂದಿರುವ ಶಾಸಕ ಜಿ. ಎಸ್. ಪಾಟೀಲರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!