ವಿಜಯ ಸಿಂಧೂರ, ನರಗುಂದ
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಧಾರ್ಮಿಕ ಕ್ಷೇತ್ರ
ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ, ನಿರಂತರ ದಾಸೋಹ ಮಠ ಎಂದೇ ಹೆಸರುವಾಸಿಯಾಗಿರುವ ಸಿದ್ದನಕೊಳ್ಳ ಮಠಕ್ಕೆ ಗೋವಾದ ಕೊರ್ಲಾಲಿಂ ಕ್ಷೇತ್ರದ ಶಾಸಕ ಅಂತೊನಿಯೋ ವಾಜ್
ಭೇಟಿ ನೀಡಿದರು.

ಬಳಿಕ ಸಿದ್ದನಕೊಳ್ಳ ಮಠದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದರಲ್ಲದೇ, ಧರ್ಮಾಧಿಕಾರಿ ಡಾ.ಶಿವಕುಮಾರ್ ಸ್ವಾಮೀಜಿ ಆಶೀರ್ವಾದ ಪಡೆದರು. ಸಿದ್ದನಕೊಳ್ಳ ಮಠವು ರಾಷ್ಟ್ರಕೂಟರು, ಚಾಲುಕ್ಯರ ಕಾಲದಿಂದಲೂ ಈ ಮಠ ಖ್ಯಾತಿ ಪಡೆದಿದ್ದು, ಸಿದ್ದಿ ಪುರುಷರ ನೆಚ್ಚಿನ ತಾಣವಾಗಿದೆ.
ಕರದಂಟು ಸವಿದ ಶಾಸಕ
ಗೋವಾದ ಕೊರ್ಲಾಲಿಂ ಕ್ಷೇತ್ರದ ಶಾಸಕ ಅಂತೊನಿಯೋ ವಾಜ್
ಸಿದ್ದನಕೊಳ್ಳಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಅಮೀನಗಡ ಪಟ್ಟಣದ ವಿಜಯಾ ಕರದಂಟು ಮಳಿಗೆ ಭೇಟಿ ನೀಡಿ ಕರದಂಟು ಸವಿದರು. ಈ ವೇಳೆ ಕರದಂಟು ಉದ್ಯಮಿ ಸಂತೋಷ ಅವರು ಗೋವಾದ ಕೊರ್ಲಾಲಿಂ ಕ್ಷೇತ್ರದ ಶಾಸಕ ಅಂತೊನಿಯೋ ವಾಜ್ ಗೆ ಸನ್ಮಾನ ಮಾಡಿ, ಕರದಂಟು ನೀಡಿ, ಕರದಂಟು ಬಗ್ಗೆ ಮಾಹಿತಿ ನೀಡಿದರು. ಕರದಂಟು ಉದ್ಯಮದ ಬಗ್ಗೆ ಮಾಹಿತಿ ಪಡೆದ ಗೋವಾದ ಕೊರ್ಲಾಲಿಂ ಕ್ಷೇತ್ರದ ಶಾಸಕ ಶ್ರೀ ಅಂತೊನಿಯೋ ವಾಜ್
ಅವರು ಕರದಂಟು ಉದ್ಯಮಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಗೋವಾದ ಜುವಾರಿನಗರದ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ಮತ್ತು ಜುವಾರಿನಗರದ ಕನ್ನಡ ಸಂಘದ ಉಪಾದ್ಯಕ್ಷ ಪರಶುರಾಮ ಚವ್ಹಾಣ, ಮಾರುತಿ ಹಾದಿಮಿನಿ, ಚಂದ್ರಶೇಖರ ಬಿಂಗಿ, ಶಾಸಕರ ಆಪ್ತರು ಮತ್ತು ಬಾಪುಗೌಡ ಮ್ಯಾಗೇರಿ ಇದ್ದರು.
