ವಿಜಯ ಸಿಂಧೂರ ತಾಳಿಕೋಟೆ
ತಾಲೂಕಿನ ಬಾವೂರ ಗ್ರಾಮದ ಅಂಜುಮನ್ ಇಸ್ಲಾಂ ಟ್ರಸ್ಟ್ ನ ಉದ್ಘಾಟನೆ ಹಾಗೂ ಸಮುದಾಯ ಭವನ ಅಡಿಗಲ್ಲು ಸಮಾರಂಭ ಭಾನುವಾರ ನಡೆಯಲಿದೆ.
ಸಂಜೆ 4-30 ಘಂಟೆಗೆ ಬಾವೂರ ಗ್ರಾಮದ ಶ್ರೀ ಮಾರುತಿ ದೇವಸ್ಥಾನದ ಹತ್ತಿರ ನಡೆಯಲಿರುವ ಸಮಾರಂಭದ ದಿವ್ಯ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ಪೂಜ್ಯ ಶ್ರೀ ಸಿದ್ಧಲಿಂಗ ದೇವರು ಹಾಗೂ ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹ್ಮದ್ ಖಾಜಿ ವಹಿಸುವರು.
ಗ್ರಾಮದ ಮುಖಂಡರಾದ ಆನಂದರಾಜ್ ದೇಶಮುಖ ಅಧ್ಯಕ್ಷತೆ ವಹಿಸುವರು. ಕೆ ಎಸ್ ಡಿ ಎಲ್ ಅಧ್ಯಕ್ಷ, ಶಾಸಕ ಸಿ.ಎಸ್. ನಾಡಗೌಡ(ಅಪ್ಪಾಜಿ) ಅವರ ಘನ ಉಪಸ್ಥಿತಿ,ಅಸ್ಕಿ ಫೌಂಡೇಶನ್ ಕೊಣ್ಣೂರ ಅಧ್ಯಕ್ಷ ಸಿ.ಬಿ.ಅಸ್ಕಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಸಮಾರಂಭವನ್ನು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಎಸ್ ಎಸ್ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಚ್ಎಸ್ ಪಾಟೀಲ,ಹರನಾಳ ಪಿಕೆಪಿಎಸ್ ಅಧ್ಯಕ್ಷ ಖಾಸೀಮಪಟೇಲ ಎಚ್.ಪಾಟೀಲ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್ ಎಸ್ ಪಾಟೀಲ(ಕೂಚಬಾಳ) ಹಾಗೂ ಅತಿಥಿಗಳಾಗಿ ಐ.ಎನ್.ಬಿ.ಸಿ. ಡಬ್ಲ್ಯೂ ಎಫ್ ಮಹಿಳಾ ಘಟಕದ ಮುಖ್ಯಸ್ಥೆ ಸಂಗೀತಾ ನಾಡಗೌಡ,ಸಮಾಜ ಸೇವಕ ಅಯ್ಯೂಬ ಮನಿಯಾರ, ಗಣ್ಯ ವರ್ತಕ ಎಂ ಆರ್ ಮುಲ್ಲಾ,ಯುವ ಮುಖಂಡ ಬಾಪ್ ಢವಳಗಿ ಆಗಮಿಸುವರು. ಸದರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಾವೂರ ಅಂಜಮನ್ ಇಸ್ಲಾಂ ಟ್ರಸ್ಟ್ ನ ಸದಸ್ಯರು ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.
