ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ನಮಗೆ ದಾರಿ ದೀಪ:ಸಂಗಮೇಶ ದೇಸಾಯಿ

ತಾಳಿಕೋಟೆ : ಜೀವನದಲ್ಲಿ ಹೇಳಿಕೊಳ್ಳಲು ಆಗದಷ್ಟು ಕಷ್ಟಗಳನ್ನು ಅನುಭವಿಸಿದರೂ ಅವುಗಳನ್ನು ಸಂತೋಷದಿಂದ ಸ್ವೀಕರಿಸಿ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಿದವರು ಮಹಾನ್ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ. ಅವರ ಆದರ್ಶ ಬದುಕು ನಮಗೆಲ್ಲರಿಗೂ ಮಾದರಿ ಆಗಬೇಕಾಗಿದೆ ಎಂದು ವಿನಾಯಕ ಇಂಟರ್ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಸಂಗಮೇಶ ದೇಸಾಯಿ ಹೇಳಿದರು.

ತಾಲೂಕ ಆಡಳಿತದ ವತಿಯಿಂದ ಭಾನುವಾರ ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಂಡು ಆ ಪರಂಪರೆಯಲ್ಲಿ ನಡೆದ ಬಂದ ಮಲ್ಲಮ್ಮ ಅವರು ಮೊದಲು ಸಂಸಾರವನ್ನು ತಿದ್ದಿ ಇಡೀ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಸಂಪತ್ತು ಬಂದಾಗ ಅಹಂಕಾರ ಪಡದೆ ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಅವರ ಪಾವನ ಜೀವನ ನಮಗೆ ದಾರಿದೀಪವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಿಎಸ್ಐ ಜ್ಯೋತಿ ಖೋತ, ಕ್ಷೇತ್ರ ಸಮನ್ವಯಾಧಿಕಾರಿ ಆರ್ ಬಿ ದಮ್ಮೂರಮಠ,ಸಿ.ಆರ್.ಸಿ.ರಾಜು ವಿಜಾಪುರ,ಸಮಾಜದ ಗಣ್ಯರಾದ ಜಿ.ಜಿ. ಮದರಕಲ್ಲ,ಬಿ.ಎನ್. ಹಿಪ್ಪರಗಿ, ಸಿದ್ದನಗೌಡ ಪಾಟೀಲ (ನಾವದಗಿ),ಪ್ರಭುಗೌಡ ಮದರಕಲ್ಲ, ಸಿದ್ದನಗೌಡ ಮಂಗಳೂರ,ರವಿ ಪಾಟೀಲ,ಶರಣಗೌಡ ಇಬ್ರಾಹಿಂಪೂರ,ಎಚ್.ಬಿ.ಗೂಗಲ್, ಸಂಗನಗೌಡ ಅಸ್ಕಿ, ಬಿ.ಆರ್.ಪೋಲಿಸ್ ಪಾಟೀಲ, ಶಾಂತಗೌಡ ಕೊಣ್ಣೂರ, ಪ್ರವೀಣ ರೆಡ್ಡಿ, ಸುಭಾಸ ಗುರಡ್ಡಿ, ಚಿದಾನಂದ ಕವಡಿಮಟ್ಟಿ, ಹಣಮಂತ್ರಾಯಗೌಡ ದೇಟಿಮನಿ, ವಿವಿಧ ಇಲಾಖೆಗಳ ಸಿಬ್ಬಂದಿಗಳಾದ ಬಸನಗೌಡ ಚೌಧರಿ, ಮಹಾಂತಗೌಡ ದೊರೆಗೋಳ, ಮುನ್ನಾ ಅತ್ತಾರ, ಶ್ರೀಪಾದ ಜೋಶಿ,ಹಣಮಂತಪ್ಪ ಬಾದವಾಡಗಿ, ರಾಜು ಮೂಕಿಹಾಳ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!