ಜೂ.11ರಂದು ಅಗ್ನಿ ಶಾಮಕ ಠಾಣೆ ಉದ್ಘಾಟನೆ

ವಿಜಯ ಸಿಂಧೂರ, ತಾಳಿಕೋಟೆ

ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಗ್ನಿಶಾಮಕ ಠಾಣೆಯ ಉದ್ಘಾಟನಾ ಸಮಾರಂಭ ಜೂನ್ 11 ರಂದು ಜರುಗಲಿದೆ.

ಅಂದು ಮಧ್ಯಾಹ್ನ 12-00 ಘಂಟೆಗೆ ಪಟ್ಟಣದ ಗಡಿ ಸೋಮನಾಳ ರಸ್ತೆಯಲ್ಲಿರುವ ಈ ನೂತನ ಕಟ್ಟಡವನ್ನು ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಉದ್ಘಾಟಿಸಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರ ಘನ ಉಪಸ್ಥಿತಿ ಇರುವುದು. ಮುದ್ದೇಬಿಹಾಳ ಶಾಸಕ, ಕೆ ಎಸ್ ಡಿ ಎಲ್ ಅಧ್ಯಕ್ಷರಾದ ಸಿ.ಎಸ್.ನಾಡಗೌಡ(ಅಪ್ಪಾಜಿ) ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ ಎನ್, ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-2 ಪ್ರಕಾಶ ಬಿ.ಹುಕ್ಕೇರಿ, ವಿಜಯಪುರ ಸಂಸದ ರಮೇಶ ಚಂ. ಜಿಗಜಿಣಗಿ, ರಾಜ್ಯಸಭೆ ಸಂಸದೆ ಡಾ.ಸುಧಾ ಮೂರ್ತಿ,ಕ.ಕೌ.ಅ.ನಿ. ಅಧ್ಯಕ್ಷೆ ಕಾಂತಾ ನಾಯ್ಕ,ಕ.ರಾ.ಲಿಂ.ಅ.ಮಂ. ಅಧ್ಯಕ್ಷ ಬಿಎಸ್ ಕವಲಗಿ,ದೇವರ ಹಿಪ್ಪರಗಿ.ಶಾಸಕ ರಾಜುಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ಆರ್.ನಿರಾಣಿ,ಸುನೀಲಗೌಡ ಬಿ.ಪಾಟೀಲ,ಪಿ.ಎಚ್.ಪೂಜಾರ, ಕೇಶವ ಪ್ರಸಾದ್ ಎಸ್ ಆಗಮಿಸುವರು. ಸ.ಅ.ಮು.ಕಾರ್ಯದರ್ಶಿ ತುಷಾರ ಗಿರಿನಾಥ,ಪೋ.ಮ.ನಿ ಹಾಗೂ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನ್ ನಿರ್ದೇಶಕ ಪ್ರಶಾಂತ ಕುಮಾರ ಠಾಕೂರ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಹಾಗೂ ಕಾರ್ಯದರ್ಶಿ ವಿ.ಶರತ್ ಚಂದ್ರ,ಕ.ರಾ.ಅ.ಶಾ.ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕ ಎಂ.ನಂಜುಂಡಸ್ವಾಮಿ,ಕ.ರಾ.ಅ.ಶಾ. ತುರ್ತುಸೇವೆಗಳ ಪೊಲೀಸ್ ಉಪ ಮಹಾ ನಿರೀಕ್ಷಕರಾದ ರೇಣುಕಾ ಕೆ. ಸುಕುಮಾರ, ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಖುಷಬೂ ಚೌಧರಿ,ಕ.ರಾ.ಅ.ಶಾ.ತುರ್ತು ಸೇವೆಗಳ ನಿರ್ದೇಶಕ ಟಿ ಎನ್ ಶಿವಶಂಕರ, ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ಪರಿಷ್ಟಾಧಿಕಾರಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿರುವರು ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹುಬ್ಬಳ್ಳಿ ವಲಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಮಂಜುನಾಥ್ ಸಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!