ವಿಜಯ ಸಿಂಧೂರ,ತಾಳಿಕೋಟೆ
ಸ್ವಾಭಿಮಾನಿ ಕರ್ನಾಟಕ ವೇದಿಕೆ ಬೆಂಗಳೂರು 2025ನೇ ಸಾಲಿನ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗಳನ್ನು ಪ್ರಕಟಿಸಿದೆ. ಡಾ. ಸಿ. ಸೋಮಶೇಖರ್ ಸರ್ವಮಂಗಳ ದತ್ತಿ ಪ್ರಶಸ್ತಿಗೆ ಡಾ. ಸುಜಾತಾ ಚಲವಾದಿ ಅವರ ‘ಮನುಷ್ಯ ಮತ್ತು ಪ್ರೀತಿ’ ಪ್ರಬಂಧ ಸಂಕಲನ ಆಯ್ಕೆಯಾಗಿದೆ.

ವಿವಿಧ ವಿಭಾಗಗಳಲ್ಲಿ ಡಿ.ಎಸ್. ಚೌಗಲೆ ಅವರ ‘ಥರ್ಡ್ ಬೆಲ್’ (ರಂಗಭೂಮಿ), ಡಾ. ಸುಕನ್ಯಾ ಸೂನಗಹಳ್ಳಿ ಅವರ ‘ಕಬ್ಬಿನ ಸಿಹಿ ವರ್ಧಿಸುವ ಅಮ್ಮ ಡಾ. ಜಾನಕಿ ಅಮ್ಮಾಳ್’, ಓರ್ಗಲ್ಲಯ್ಯ ದ್ವಾರಕುಂಟೆ ಅವರ ‘ವಿಶ್ವ ವಿಸ್ಮಯ’ (ಸಂಕೀರ್ಣ), ಗುರುನಾಥ ಅಕ್ಕಣ್ಣ ಅವರ ‘ಕೊಂಡವರುಳಿದರೇ’ (ಕಾದಂಬರಿ), ವಿನಯ ಗುಂಟೆ ಅವರ ‘ಬನದ ಕರಡಿ’ (ಕಥಾ ಸಂಕಲನ) ಹಾಗೂ ಡಾ. ಶೋಭಾ ನಾಯಕ ಅವರ ‘ಅರ್ಧ ಮುಖಗಳ ಶಹರು’ (ಕವನ ಸಂಕಲನ) ಕೃತಿಗಳು ಪ್ರಶಸ್ತಿಗೆ ಭಾಜನವಾಗಿವೆ.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಆರ್. ಸುನಂದಮ್ಮ, ವೇದಿಕೆ ಅಧ್ಯಕ್ಷ ಡಾ. ದ್ವಾರನಕುಂಟೆ ಪಾತಣ್ಣ ಹಾಗೂ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್. ಸುಜಾತ ನೇತೃತ್ವದ ಸಮಿತಿಯು ಪುರಸ್ಕೃತರನ್ನು ಆಯ್ಕೆ ಮಾಡಿದೆ.ಜೂನ್ 13ರಂದು ಸಂಜೆ 5 ಗಂಟೆಗೆ ಶೇಷಾದ್ರಿಪುರಂ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
