ಲಂಡಿಹಳ್ಳದಲ್ಲಿ ಬೆಳೆದ ಗಿಡ ಗಂಟೆಗಳನ್ನು ತೆಗೆಯುವಂತೆ ಸೂಚಿಸಿದ : ಎ ಸಿ ಗಂಗಪ್ಪ

ವಿಜಯ ಸಿಂಧೂರ, ಲಕ್ಷ್ಮೇಶ್ವರ

ಪುರಸಭೆ ವ್ಯಾಪ್ತಿಯಲ್ಲಿ ಬರುವ ಹಳ್ಳದಕೇರಿ ಮತ್ತು ಕೆಂಚಲಾಪುರ ಓಣಿಯಲ್ಲಿ ಹರಿಯುವ ಲಂಡಿಹಳ್ಳ ಮತ್ತು ಜೋನಹಳ್ಳದಲ್ಲಿ ಗಿಡ ಗಂಟಿಗಳು ಬೆಳೆದು ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಗಿಡ ಗಂಟಿಗಳ ಅಡೆತಡೆಯಿಂದ ಬಹಳಷ್ಟು ಸಂಗ್ರಹವಾಗಿ ಮನೆಗಳಿಗೆ ನೀರು ನುಗ್ಗಿ ತೊಂದರೆ ಆಗುತ್ತಿರುವದನ್ನು ಸರಿಪಡಿಸುವಂತೆ ಉಪ ವಿಭಾಗಾಧಿಕಾರಿ ಗಂಗಪ್ಪ ಸೂಚನೆ ನೀಡಿದ್ದಾರೆ

ಅವರು ಇತ್ತೀಚೆಗೆ ಪಟ್ಟಣದ ಓಣಿಯ ಸಾರ್ವಜನಿಕರು ಹಾಗೂ ರೈತರು ಅಧಿಕಾರಿಗಳಿಗೆ ಆಗ್ರಹಿಸಿದ್ದರು ಇದಕ್ಕೆ ಸ್ಪಂದಿಸಿರುವ ಗದಗ ಜಿಲ್ಲಾ ಉಪವಿಭಾಗಧಿಕಾರಿ ಎಮ್.ಗಂಗಪ್ಪ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳಿಗೆ 2ದಿನಗಳ ಒಳಗೆ ಹಳ್ಳದಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಂತೆ ಸೂಚಿಸಿದರು ಒಂದು ವೇಳೆ 2 ದಿನದ ಒಳಗಾಗಿ ಸರಿಪಡಿಸದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಮತ್ತೆ 2 ದಿನದ ನಂತರ ಗಿಡ ಗಂಟಿ ತೆರವು ಕಾರ್ಯವನ್ನು ವೀಕ್ಷಣೆ ಮಾಡುತ್ತೇನೆ ಎಂದು ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಿದರು. ಈ ಸಮಯದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್ ಮುದಗಲ್ಲ ಸೇರಿದಂತೆ ಇನ್ನೂ ಅನೇಕ ರೈತ ಮುಖಂಡರು ಇದ್ದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!