ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ವಿಜಯ ಸಿಂಧೂರ,ಸಿಂದಗಿ

2025-26 ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ 1 ಕೋಟಿ ರೂ, ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ 20 ಲಕ್ಷ ರೂ, ಹನುಮಾನ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕಾಗಿ 15 ಲಕ್ಷ ರೂ ಮೊತ್ತದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಅವರು ಮಂಗಳವಾರ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ನಾಯ್ಕೋಡಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಗದೀಶ್ ಹೂವಿನಹಳ್ಳಿ, ಪಕ್ಷದ ಮುಖಂಡರಾದ ಚೇತನಗೌಡ ಪಾಟೀಲ, ರುದ್ರುಗೌಡ ಪಾಟೀಲ, ಷಣ್ಮುಖಯ್ಯ ಹಿರೇಮಠ, ರಮೇಶ ತಳಗೇರಿ, ಶಂಕರಗೌಡ ಬಿರಾದಾರ, ನಾಗಪ್ಪ ಮುಜಾವರ, ಪ್ರಕಾಶ ಮುಜಾವರ, ಮಲ್ಲಿಕಾರ್ಜುನ ಕಟ್ಟಿ, ಬುಡ್ಡಾ ಮಕಾಶಿ, ಮಲ್ಲು ನಾಯ್ಕೋಡಿ, ಸೇವಾದಳದ ಅಧ್ಯಕ್ಷರಾದ ಮಲಕಪ್ಪ ಗಬಸಾವಳಗಿ , ಎಸ್ ಎಮ್ ಸಿ ಅಧ್ಯಕ್ಷರಾದ ಮಲ್ಕಣ್ಣ ನಾಯ್ಕೋಡಿ, ರಾಜುಸಾಬ ಡೊಣುರ, ಅಲಿ ಬೈಚಬಾಳ, ಭೂತಾಳಿ ಕೊಂಡಗುಳಿ, ಸೇರಿದಂತೆ ಯುವಕ ಮಿತ್ರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!