ವಿಜಯ ಸಿಂಧೂರ,ಅಣ್ಣಿಗೇರಿ
ಪಟ್ಟಣದ ಉಳವಿ ಚನ್ನಬಸವೇಶ್ವರ ದೇವಸ್ಥಾನ ಬಳಿಯ ಹೊರಕೇರಿ ಓಣಿಯಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಐದು ದಿನಗಳ ಪ್ರವಚನ ಮುಕ್ತಾಯ ಹಾಗೂ ಬಸವ ಜಯಂತಿಯ ಜೊಡೆತ್ತುಗಳ ಮೆರವಣಿಗೆ ಸೋಮವಾರ ಅದ್ದೂರಿಯಾಗಿ ಜರುಗಿತು.

ಮೆರವಣಿಗೆಗೆ ಚಾಲನೆ ನೀಡಿದ ದಾಸೋಹಮಠದ ಶಿವಕುಮಾರ ಸ್ವಾಮಿಜಿಗಳು ಮಾತನಾಡಿ,ರೈತಾಪಿ ವರ್ಗ ಎತ್ತುಗಳನ್ನು ಬಸವಣ್ಣ ದೇವರು ಎಂದು ನಂಬಿಕೊಂಡು ಬಂದಿದ್ದು ಬಸವ ಜಯಂತಿಯಂದು ಅವುಗಳ ಮೆರವಣಿಗೆ ಮಾಡುವ ಮೂಲಕ ಸಂಭ್ರಮಿಸಲಾಗುತ್ತಿದೆ ಎಂದರು.
ಬಸವ ಜಯಂತಿಯು ೧೨ನೇ ಶತಮಾನದ ಸಮಾಜ ಸುಧಾರಕ, ದಾರ್ಶನಿಕ ಮತ್ತು ಲಿಂಗಾಯತ ಧರ್ಮದ ಸ್ಥಾಪಕ ಜಗಜ್ಯೋತಿ ಬಸವಣ್ಣನವರ ಜನ್ಮದಿನದ ಆಚರಣೆಯಾಗಿದೆ. ವೈಶಾಖ ಶುದ್ಧ ತದಿಗೆಯಂದು ಆಚರಿಸಲಾಗುವ ಈ ಹಬ್ಬವು ಜಾತಿರಹಿತ ಸಮಾಜ, ಸಮಾನತೆ, “ಕಾಯಕವೇ ಕೈಲಾಸ” ಎಂಬ ತತ್ವ, ಮಹಿಳಾ ಸಬಲೀಕರಣ ಮತ್ತು ವಚನ ಸಾಹಿತ್ಯದ ಮಹತ್ವವನ್ನು ಎತ್ತಿಹಿಡಿಯುತ್ತದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಇದನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರುಪಾಕ್ಷಯ್ಯ ಶಾಸ್ತಿಂಗಳು ಮಾತನಾಡಿ ಸಾಮಾಜಿಕ ಸಮಾನತೆ ಬಸವಣ್ಣನವರು ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿ, ಎಲ್ಲರೂ ಸಮಾನರು ಎಂಬ ತತ್ವವನ್ನು ಸಾರಿದರು.ಕಾಯಕವೇ ಕೈಲಾಸ ಪ್ರತಿಯೊಬ್ಬರೂ ಕಾಯಕ (ಕೆಲಸ) ಮಾಡಬೇಕು ಮತ್ತು ಅದನ್ನು ಪವಿತ್ರವಾಗಿ ಭಾವಿಸಬೇಕು ಎಂಬ ಸಂದೇಶದ ಮಹತ್ವವನ್ನು ಈ ದಿನ ಸ್ಮರಿಸಲಾಗುತ್ತದೆ.ಅನುಭವ ಮಂಟಪ ಪ್ರಜಾಪ್ರಭುತ್ವದ ಮೊದಲ ಸಂಸತ್ತು ಎನ್ನಲಾದ ಅನುಭವ ಮಂಟಪದ ಮೂಲಕ ವಿಚಾರ ಸ್ವಾತಂತ್ರ‍್ಯ ಮತ್ತು ಲಿಂಗ ಸಮಾನತೆಯನ್ನು ಪ್ರೋತ್ಸಾಹಿಸಿದರು ಎಂದರು.
ಶೃಂಗಾರಗೊಂಡಿದ್ದ ಜೋಡೆತ್ತುಗಳು ಹಾಗೂ ಬಸವಣ್ಣನವರ ಮೂರ್ತಿಯ ಪಲ್ಲಕ್ಕಿ ಉತ್ಸವವು ಅಶ್ವಾರೂಢ ಬಸವೇಶ್ವರರ ಪಾತ್ರಧಾರಿ ಸೇರಿದಂತೆ ಡೊಳ್ಳು ಕುಣಿತ, ಕೋಲಾಟ, ಕರಡಿ ಮಜಲು, ಜಗ್ಗಲಗಿ, ಭಜನಾ ಮೇಳ ಸೇರಿದಂತೆ ವಾದ್ಯಮೇಳದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.ಬಸವೇಶ್ವರರ ಪುತ್ಥಳಿ, ವಚನ ಗ್ರಂಥಗಳು, ಶರಣ ವೇಷಧಾರಿಗಳು, ವಚನ ಕೋಲಾಟ, ಜೊಡೆತ್ತುಗಳ ಮೆರವಣಿಗೆ ನೋಡುಗರ ಗಮನ ಸೆಳೆಯಿತು.
ಈ ಸಮಯದಲ್ಲಿ ವೀರುಪಾಕ್ಷಯ್ಯ ಶಾಸ್ತಿಂಗಳು ಜಿಗಳೂರ,ರಾಮಣ್ಣ ಮೊರಬದ,ಪರಶುರಾಮ ಒಸೇಕರ್,ಉಳವಿ ಚನ್ನ ಬಸವೇಶ್ವರ ದೇವಸ್ಥಾನ ಕಮೀಟಿಯ ಸರ್ವ ಸದಸ್ಯರು,ಪಟ್ಟದ ಎಲ್ಲಾ ಸಂಘ,ಸಂಸ್ಥೆಗಳ ಸದಸ್ಯರು,ಪ್ರಮುಖರು ಇದ್ದರು.
