ವಿಜಯ ಸಿಂಧೂರ,ತಾಳಿಕೋಟೆ
ತಾಲೂಕಿನ ತಮದಡ್ಡಿ ಗ್ರಾಮದ ಮೂಲದ ಭೀಮಸೇನೆಯ ಯುವ ಘಟಕದ ರಾಜ್ಯ ಉಪಾಧ್ಯಕ್ಷ ವಿಶ್ವನಾಥ್ ಶಾಂತಪ್ಪ ಚಲವಾದಿ ಅವರು ರಾಜ್ಯದ ಹಿರಿಯ ದಲಿತ ನಾಯಕ ಡಾ. ಹೆಚ್.ಸಿ. ಮಹಾದೇವಪ್ಪ ಅವರಿಗೆ ಸರ್ಕಾರದಲ್ಲಿ ಉನ್ನತ ಸ್ಥಾನಮಾನ ನೀಡಬೇಕೆಂದು ವಿವಿಧ ದಲಿತ ಸಂಘಟನೆಗಳು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.

ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಯಲ್ಲಿ ಮಹತ್ವದ ಕೊಡುಗೆ ನೀಡಿರುವ ಮಹಾದೇವಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಅವರ ಅನುಭವವನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ರಾಜ್ಯದ ದಲಿತ ಸಮುದಾಯದ ಆಶೋತ್ತರಗಳಿಗೆ ಧ್ವನಿಯಾಗಿರುವ ಮಹಾದೇವಪ್ಪ ಅವರು ಹಲವು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ನಾಯಕತ್ವ ಮತ್ತು ಆಡಳಿತ ಅನುಭವವನ್ನು ಪರಿಗಣಿಸಿ ಸರ್ಕಾರದಲ್ಲಿ ಉನ್ನತ ಸ್ಥಾನಮಾನ ನೀಡುವುದು ಸೂಕ್ತ ಎಂದು ಹೇಳಿದ್ದಾರೆ.“ಸಾಮಾಜಿಕ ನ್ಯಾಯದ ಪರವಾಗಿ ನಿರಂತರ ಹೋರಾಟ ನಡೆಸಿರುವ ಡಾ. ಹೆಚ್.ಸಿ. ಮಹಾದೇವಪ್ಪ ಅವರಿಗೆ ಇನ್ನಷ್ಟು ಮಹತ್ವದ ಜವಾಬ್ದಾರಿ ನೀಡಿದರೆ ದಲಿತ ಸಮುದಾಯದ ಆಶಯಗಳಿಗೆ ಹೆಚ್ಚಿನ ಬಲ ದೊರೆಯಲಿದೆ,” ಎಂದು ಭಾರತೀಯ ಭೀಮಸೇನೆಯ ಯುವ ಘಟಕದ ರಾಜ್ಯ ಉಪಾಧ್ಯಕ್ಷ ವಿಶ್ವನಾಥ್ ಶಾಂತಪ್ಪ ಚಲವಾದಿ ತಿಳಿಸಿದ್ದಾರೆ
