ವಿಜಯ ಸಿಂಧೂರ ನರಗುಂದ
ನರಗುಂದ ಪೋಲಿಸ್ ಠಾಣೆಯಲ್ಲಿ ಜನಪರ,ನ್ಯಾಯಪರ, ಕಳ್ಳಕಾಕರಿಗೆ ದುಃಸ್ವಪ್ನರಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಮಂಜುನಾಥ ನಡುವಿನಮನಿ ಅವರನ್ನು ದ.ಕ ಜಿಲ್ಲೆಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.

ಇಲಾಖೆಯ ನಿಯಮದಂತೆ ತೆರವಾದ ನರಗುಂದ ಪಟ್ಟಣದ ಠಾಣೆಯ ಪೊಲೀಸ್ ನಿರೀಕ್ಷಕ ಹುದ್ದೆಗೆ ಸತ್ಯಪ್ಪ ಮಾಳಗೊಂಡ ಅಧಿಕಾರ ಸ್ವೀಕರಿಸಿದ್ದಾರೆ.
ಈ ಮುಂಚೆ ರಾಜ್ಯದ ವಿವಿಧ ಪೊಲೀಸ ಠಾಣೆಯಲ್ಲಿ ಹಾಗೂ ಲೋಕಾಯುಕ್ತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ, ದಕ್ಷ, ಪ್ರಾಮಾಣಿಕತೆ, ಹಾಗೂ ಜನ ಸ್ನೇಹಿಯಾಗಿ ಗುರುತಿಸಿ ಕೊಂಡಿದ್ದಾರೆ.

ಒಟ್ಟಾರೆ ಇಂತಹ ದಕ್ಷ ಅಧಿಕಾರಿ ನರಗುಂದ ಠಾಣೆಗೆ ಬಂದಿರೋದು ಉತ್ತವಾಗಿದೆ ಎಂದು ಜನರು ಸಂತಸ ವ್ಯಕ್ತ ಪಡಿಸಿದ್ದಾರೆ.
