ಮಾರುತಿ ತಳವಾರ, ನರಗುಂದ
ಬಾಗಲಕೋಟ ಜಿಲ್ಲೆಯ ಇಲಕಲ ತಾಲೂಕಿನ ಸಿದ್ಧನಕೊಳ್ಳ ಮಠದಲ್ಲಿ ಕೀರ್ತನ ಮೂವ್ಹಿ ಮೇಕರ್ಸ್ ಹಾಗೂ ಕೆ ಆರ್ ಎಸ್ ಪ್ರೊಡಕ್ಷನ್ ಬೆಂಗಳೂರ ಇವರ ಸಹಯೋಗದಲ್ಲಿ ಮೂಡಿ ಬರುತ್ತಿರುವ ‘ಹೂಗಾರ’ ಕನ್ನಡ ಚಲನಚಿತ್ರದ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದ್ದು ಆ ಚಿತ್ರದ ಮುಕ್ತಾಯ ಸಮಾರಂಭವನ್ನು ಡಾ.ಶಿವಕುಮಾರ ಶ್ರೀಗಳು ಇಂದು ಕುಂಬಳಕಾಯಿ ಒಡೆಯುವ ಮೂಲಕ ಚಿತ್ರೀಕರಣನ್ನು ಮುಕ್ತಾಯಗೊಳಿಸಿದರು

ಚಿತ್ರದ ಚಿತ್ರೀಕರಣವೂ ಸತತ 28ದಿನಗಳ ಕಾಲ ಸಿದ್ದನಕೊಳ್ಳ ಮಠ ಹಾಗೂ ಸಿದ್ದನಕೊಳ್ಳ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿ ನೆಡೆಯಿತು ಈ ಚಿತ್ರವನ್ನು ಉರಿವ ಬಿಸಿಲನ್ನು ಲೆಕ್ಕಿಸದೆ ಚಿತ್ರತಂಡವು ಚಿತ್ರೀಕರಣ ನಡೆಸಿತು, ಹೂಗಾರ ಚಲನಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆಯಲ್ಲಿ ಚಿತ್ರೀಕರಣ ಮಾಡಿದ್ದೂ ಜೊತೆಗೆ ಉತ್ತರ ಕರ್ನಾಟಕದ ಕಲಾವಿದರಿಗೂ ಚಿತ್ರದಲ್ಲಿ ಅವಕಾಶವನ್ನು ನೀಡಲಾಗಿದೆ.
ಮುಖ್ಯವಾಗಿ ಶ್ರೀ ಮಠದ ಪೀಠಾಧಿಪತಿಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರು ಈ ಚಿತ್ರದ ಹಾಡಿನಲ್ಲಿ ಅಭಿನಯಿಸಿದ್ದು ಚಿತ್ರ ತಂಡಕ್ಕೆ ಆಶೀರ್ವದಿಸಿ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದಾರೆ. ಜೊತೆಗೆ ಗ್ರಾಮಗಳ ಜನತೆ ಕೂಡ ಯಾವುದೊಂದು ಕೊರತೆಯಾಗದಂತೆ ಸಂಪೂರ್ಣ ಸಹಕಾರ ನೀಡಿ ಚಿತ್ರೀಕರಣಕ್ಕೆ ಅನುಕೂಲ ಒದಗಿಸಿ ಕೊಟ್ಟಿದ್ದಾರೆ ಅವರಿಗೆಲ್ಲ ಕೃತಜ್ಞನಾಗಿರುವೆ ಎಂದು ನಿರ್ದೇಶಕ ಲೋಕೇಶ್ ವಿದ್ಯಾಧರ್ ಹೇಳಿದರು.
ಚಿತ್ರದಲ್ಲಿ ನಾಯಕನಾಗಿ ಸಂತೋಷ ಪಾಟೀಲ, ನಾಯಕಿಯಾಗಿ ಅಪೂರ್ವ, ಮುಖ್ಯ ಪಾತ್ರಧಾರಿಗಳಾಗಿ ಸುನಂದಾ ಕಲ್ಬುರ್ಗಿ, ಮಹಾಂತೇಶ ಹಳ್ಳೂರ, ಮಾಸ್ಟರ್ ತೇಜಸ್, ಕಾಮಿಡಿ ಕಿಲಾಡಿ ಖ್ಯಾತಿಯ ದಾನಪ್ಪ, ಮುತ್ತುರಾಜ್ ಬುದ್ನಿ, ಕಿಟ್ಟಿ ತಾಳಿಕೋಟೆ, ಮಂಜುಳಾ ಅರಸ, ಭಾವನಾ ಶಿಂಧೆ, ಕುಮಾರಿ ಧನ್ಯ, ಕಿರಣ , ದಶರಥ ಮೊದಲಾದವರಿದ್ದಾರೆ.
ಇನ್ನು ಛಾಯಾಗ್ರಹಣ ಜನಾರ್ಧನ್ ರಾಜು, ಸುವೀಶ, ನೃತ್ಯ ನಾಗರಾಜ್, ಸಂಭಾಷಣೆ ಶಿವಂ ಬೆಂಗೇರಿ, ಸಾಹಿತ್ಯ ಲೋಕೇಶ್ ವಿದ್ಯಾಧರ್, ಶಿವರಾಜ್, ಕಿನ್ನಾಳ ರಾಜ್, ಸಂಗೀತ ರಿದಂ ಕುಟ್ಟಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದ್ದು, ಈಗಾಗಲೇ ‘ಒಬ್ಬಟ್ಟು’ ಚಿತ್ರ ನಿರ್ದೇಶಿಸಿದ್ದ ಲೋಕೇಶ್ ವಿದ್ಯಾಧರ್ ಕಥೆ-ಚಿತ್ರಕಥೆ-ನಿರ್ದೇಶನ ಮಾಡಿದ್ದಾರೆ.
ಇನ್ನು ಪೋಸ್ಟ ಪ್ರೊಡಕ್ಷನ್ ಕಾರ್ಯಕ್ರಮವನ್ನು ಈ ವಾರದಲ್ಲೇ ಆರಂಭಿಸಿ ಶೀಘ್ರ ಚಿತ್ರವನ್ನು ಬೆಳ್ಳಿತೆರೆಗೆ ತರಲಾಗುವದು, ಚಿತ್ರದ ಹಾಡುಗಳನ್ನು ಹುಬ್ಬಳ್ಳಿ, ಗದಗ, ಬಾಗಲಕೋಟೆ ಮತ್ತು ಬೆಂಗಳೂರಿನಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ. ಕೀರ್ತನ ಮೂವ್ಹಿ ಮೇಕರ್ಸ್ ಹಾಗೂ ಕೆ ಆರ್ ಎಸ್ ಪ್ರೊಡಕ್ಷನ್ ಅವರು ಚಿತ್ರದ ನಿರ್ಮಾಪಕರಾಗಿದ್ದಾರೆ ಎಂದು ನಿರ್ದೇಶಕ ಲೋಕೇಶ ತಿಳಿಸಿದ್ದಾರೆ.
