ವಿಜಯ ಸಿಂಧೂರ ಸಿಂದಗಿ
ಶುಕ್ರವಾರ ತಡರಾತ್ರಿ ಸುರಿದ ಬಾರಿ ಮಳೆ ಹಾಗೂ ಅಬ್ಬರದ ಸಿಡಿಲಿಗೆ ಒಂದೇ ಕುಟುಂಬದ ೪ ಜನ ಅಸುನಿಗಿದ ಘಟನೆ ಆಲಮೇಲ ತಾಲೂಕಿನ ಮೋರಟಗಿ ಗ್ರಾಮದಲ್ಲಿ ನಡೆದಿತ್ತು. ಗುರುನಾಥ ಬಡಿಗೇರ ಸೇರಿದಂತೆ ಅವರ ಹೆಂಡತಿ ಮತ್ತು ೨ ಮಕ್ಕಳು ಮನೆಯ ಮೇಲ್ಚಾವಣಿ ಕುಸಿದ ಸಾವನಪ್ಪಿದ್ದರು.

ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ,ಶಾಸಕ ಅಶೋಕ ಮನಗೂಳಿ ಜಿಲ್ಲಾ ಮಟ್ಟದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿ ಮೃತ ಕುಟುಂಬಕ್ಕೆ ತಲಾ ೫ ಲಕ್ಷದಂತೆ ಒಟ್ಟು ೨೦ ಲಕ್ಷ ಪರಿಹಾರ ಘೋಷಣೆ ಮಾಡಿದ್ದರು.
ಶನಿವಾರ ಶಾಸಕ ಅಶೋಕ ಮನಗೂಳಿ ಮೃತರ ಕುಟುಂಬಕ್ಕೆ ಭೇಟಿ ನೀಡಿ ಕೊಟ್ಟ ಮಾತಿನಂತೆ ಮೃತ ಗುರುನಾಥ ಬಡಿಗೇರ ಅವರ ತಾಯಿ ಶಾಂತಾಬಾಯಿ ಬಡಿಗೇರ ಅವರ ಖಾತೆಗೆ ಸರ್ಕಾರದಿಂದ ಬಂದಿರುವ ೨೦ ಲಕ್ಷಗಳ ಪರಿಹಾರದ ಆದೇಶ ಪ್ರತಿಯನ್ನು ನೀಡಿದರು.
ಈ ವೇಳೆ ಅವರು ಮಾತನಾಡಿ, ಬಡಿಗೇರ ಕುಟುಂಬ ಆತಂಕ ಪಡುವ ಅವಶ್ಯಕತೆ ಇಲ್ಲ ಸದಾ ನಿಮ್ಮೋಂದಿಗೆ ನಾವಿದ್ದೇವೆ. ಮೃತ ಗುರುನಾಥ ಅವರ ಮಗ ವೀರೇಶನ ಶಿಕ್ಷಣದ ಜವಾಬ್ದಾರಿ ನಮ್ಮದು ಸರ್ಕಾರದಿಂದ ಬಂದಿರುವ ೨೦ ಲಕ್ಷ ಮತ್ತು ನಮ್ಮ ತಂದೆಯವರ ಹೆಸರಿನ ಮೇಲೆ ನಿರ್ಮಾಣಗೊಂಡಿರುವ ದಿ.ಎಮ್.ಸಿ.ಮನಗೂಳಿ ಪ್ರತಿಷ್ಠಾನದಿಂದ ೧ ಲಕ್ಷ ನೀಡುವುದಾಗಿ ಹೇಳಿದ್ದಾರೆ
ಆ ಹಣವನ್ನು ವಿರೇಶನ ಮುಂದಿನ ಶಿಕ್ಷಣಕ್ಕೆ ಬಳಕೆ ಮಾಡುವಂತೆ ಅವರ ಕುಟುಂಬಕ್ಕೆ ಸಲಹೆ ನೀಡಿದರು.
ಈ ವೇಳೆ ಜಿಪಂ ಮಾಜಿ ಸದಸ್ಯ ಎನ್.ಆರ್.ತಿವಾರಿ, ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಧಿಕ ಸುಂಬಡ,ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಅಶೋಕ ಕೋಳಾರಿ, ವಾಯ್.ಸಿ.ಮಯೂರ,, ಪ್ರಕಾಶ ಅಡಗಲ್ಲ, ಸಲೀಂ ಕಣ್ಣಿ, ನಿಂಗನಗೌಡ ಪಾಟೀಲ, ತಹಶೀಲ್ದಾರ ಕರೆಪ್ಪ ಬೆಳ್ಳೆ, ಪಿಎಸ್‌ಆಯ್ ಶ್ರೀಕಾಂತ ಕಾಂಬಳೆ, ಅಂಬಣ್ಣ ತಳವಾಋ, ಈರಣ್ಣಗೌಡ ಪಾಟೀಲ, ಮಲ್ಲಿಕಾರ್ಜುನ ಶಂಬೇವಾಡ, ಗುರು ಹುಮನಾಬಾದ ಸೇರಿದಂತೆ ಕಂದಾಯ ಅಧಿಕಾರಿಗಳು ಗ್ರಾಮಸ್ಥರು ಇದ್ದರು.
