ಅಂಬೇಡ್ಕರ್ ತತ್ವಾದರ್ಶ ಪಾಲಿಸಿ : ಚಂದ್ರಶೇಖರ ಮಾದರ

ವಿಜಯ ಸಿಂಧೂರ ರೋಣ

ಶ್ರೇಷ್ಟ ವ್ಯಕ್ತಿಗಳ ಆದರ್ಶ ಕೇಳಿಸಿಕೊಂಡರೆ ಸಾಲದು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಚಂದ್ರಶೇಖರ ಮಾದರ ಹೇಳಿದರು.

ಅವರು ತಾಲೂಕಿನ ಯಾ.ಸ.ಹಡಗಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ ಅವರ 135ನೇ ಹಾಗೂ ಹಸಿರುಕ್ರಾಂತಿ ಹರಿಕಾರ, ರಾಷ್ಟ್ರ ನಾಯಕ,ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್‌ ಅವರ 119 ನೇ ಜಯಂತಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು

ಅಂಬೇಡ್ಕರ್ ಅವರು ಭಾರತದ ಏಕತೆ, ವೈವಿಧ್ಯತೆ, ಸಮಗ್ರತೆ ಮತ್ತು ಸಮಾನತೆಗೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕರು ಎಂದು ಹೇಳಿದರು. ಶೋಷಿತ ವರ್ಗವನ್ನು ಮುಖ್ಯವಾಹಿನಿಗೆ ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅವರು, “ಶಿಕ್ಷಣ–ಸಂಘಟನೆ–ಹೋರಾಟ” ಎಂಬ ಮೂಲ ಮಂತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಆದರೆ ಇಂದಿನ ಸಮಾಜದಲ್ಲಿ ಶಿಕ್ಷಣವನ್ನು ಕಡೆಗಣಿಸಿ ಉಳಿದ ಅಂಶಗಳಿಗೆ ಮಾತ್ರ ಒತ್ತು ನೀಡುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಕಾಶ್ ಬೋಪಳಾಪೂರ ಮಾತನಾಡಿ, ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಈ ಮಾದರಿಯನ್ನು ಹಲವು ರಾಷ್ಟ್ರಗಳು ತಮ್ಮ ಸಂವಿಧಾನದಲ್ಲಿ ಅಳವಡಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಬಾಕ್ಸ್:

ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜಯಂತಿ ಅಂಗವಾಗಿ 2025-26ನೇ ಸಾಲಿನಲ್ಲಿ ಸಾಧನೆ ಗೈದ ಪ್ರತಿಭಾವಂತ ವಿದ್ಯಾರ್ಥಿಗಳಾದ 1) ಕುಮಾರಿ ಸಹನಾ ಅರ್ಕಸಾಲಿ nmms ಪರೀಕ್ಷೆ ಯಲ್ಲಿ ಜಿಲ್ಲೆಗೆ ಪ್ರಥಮ

2)ಕುಮಾರ ಸಮರ್ಥ ಗಾಣಿಗೇರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ಪ್ರಯುಕ್ತ ಶಾಲೆಯ ಎಸ್ ಡಿ ಎಂ ಸಿ ಸರ್ವ ಪದಾಧಿಕಾರಿಗಳು ಹಾಗೂ ಊರಿನ ಗಣ್ಯಮಾನ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಅಂಬೇಡ್ಕರ್ ಜನ್ಮ ದಿನವನ್ನು ವಿಶೇಷವಾಗಿ ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಶಿವಪ್ರಕಾಶ್ ಭೋಪಳಾಪೂರ, ಮಲ್ಲಿಕಾರ್ಜುನ ಕೆಂದೂರ, ಚಂದ್ರಶೇಖರ ಹಳ್ಳಿಹಾಳ, ಮರಿಯಪ್ಪ ದೊಡ್ಡಮನಿ, ಸಿದ್ದು ಮಲ್ಲಾಡದ, ರಾಮಪ್ಪ ಚಲವಾದಿ,sdmc ಅಧ್ಯಕ್ಷ ಮಲ್ಲಯ್ಯ ಪೂಜಾರ ಹಾಗೂ ಊರಿನ ಗಣ್ಯಮಾನ್ಯರು ಶಾಲಾ ಶಿಕ್ಷಕ ಸಿಬ್ಬಂದಿಯವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!