ತಾಳಿಕೋಟೆ:
ನಗರದ ಮಿಣಜಗಿ ಕ್ರಾಸ್‌ನಲ್ಲಿ ಇರುವ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆ 2025-26ನೇ ಸಾಲಿನ 10ನೇ ತರಗತಿ (CBSE) ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ಶ್ಲಾಘನೀಯ ಸಾಧನೆಗೈದಿದೆ.
ಈ ಪರೀಕ್ಷೆಗೆ ಒಟ್ಟು 41 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲಾ 41 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ.

ಮೇರು ವಿದ್ಯಾರ್ಥಿಗಳು:
ಕುಮಾರಿ ಶ್ರೇಯಾ ಸಿದ್ದನಗೌಡ ಪಾಟೀಲ – 437/500 (87.04%) – ಪ್ರಥಮ ಸ್ಥಾನ

ಕುಮಾರಿ ಹರ್ಷಿತಾ ಸುರೇಶ ಸಜ್ಜನ – 437/500 (86.40%) – ದ್ವಿತೀಯ ಸ್ಥಾನ

ಕುಮಾರಿ ವೈಷ್ಣವಿ ಯಮನೂರಪ್ಪ ಧಾಯಪುಲೆ – 410/500 (82.00%) – ತೃತೀಯ ಸ್ಥಾನ
ಫಲಿತಾಂಶ ವಿವರ:
ಡಿಸ್ಟಿಂಕ್ಷನ್ – 10 ವಿದ್ಯಾರ್ಥಿಗಳು
ಪ್ರಥಮ ದರ್ಜೆ – 18 ವಿದ್ಯಾರ್ಥಿಗಳು
ದ್ವಿತೀಯ ದರ್ಜೆ – 13 ವಿದ್ಯಾರ್ಥಿಗಳು
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್.ಎಂ. ಸಜ್ಜನ, ಕಾರ್ಯದರ್ಶಿ ವಿವೇಕಾನಂದ ಸಜ್ಜನ, ಪ್ರಾಚಾರ್ಯ ಬಸವರಾಜ ಸಜ್ಜನ, ಜಯಚಂದ್ರನ್, ಉಪ ಪ್ರಾಚಾರ್ಯ ಗಂಗರಾಜ್ ಹಾಗೂ ಎಲ್ಲಾ ಶಿಕ್ಷಕ-ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
