ವಿಜಯ ಸಿಂಧೂರ, ನರಗುಂದ
ಪತಿಯೇ ಪರದೈವ” ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ, ವಿಶೇಷವಾಗಿ ಹಿಂದೂ ಧರ್ಮದಲ್ಲಿ ಪತಿ-ಪತ್ನಿಯರ ಬಾಂಧವ್ಯದ ಪಾವಿತ್ರ್ಯತೆಯನ್ನು ಬಿಂಬಿಸುವ ಒಂದು ಸುಂದರ ನಂಬಿಕೆ. ಇದರ ಆಳವಾದ ಅರ್ಥ ಮತ್ತು ಮಹತ್ವ ಇತ್ತೀಚೆಗೆ ಕಳೆದುಕೊಳ್ಳುತ್ತಿದೆ ಎನ್ನುವುದಕ್ಕೆ ನರಗುಂದ ತಾಲೂಕಿನ ರಡ್ಡೇರ ನಾಗನೂರ ಗ್ರಾಮದಲ್ಲಿ ಕಬ್ಬಿಣದ ರಾಡ್ ನಿಂದ ಗಂಡನ ತಲೆಗೆ ಬಲವಾಗಿ ಹೊಡೆದು ಹೆಂಡತಿಯೇ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸಲು ಸಾಕ್ಷಿಯಾಗಿದೆ.

ಘಟನೆ ವಿವರ:
ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯೇ ಪತಿಯನ್ನು ಕಬ್ಬಿಣದ (ಹಾರಿ) ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ರಡ್ಡೇರ ನಾಗನೂರ ಗ್ರಾಮದ ನಿವಾಸಿ ವಿಶ್ವನಾಥ ಶ್ರೀಶೈಲಪ್ಪ ಹಾದಿಮನಿ (28) ಕೊಲೆಯಾದ ದುರ್ದೈವಿ. ಈ ಪ್ರಕರಣದಲ್ಲಿ ಮೃತನ ಪತ್ನಿ ಕವಿತಾ ಹಾದಿಮನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಮಾಹಿತಿಯಂತೆ, ವಿಶ್ವನಾಥ ಮತ್ತು ಕವಿತಾ ಅವರು 2022ರ ಫೆಬ್ರವರಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ದಿನದಿಂದಲೇ ದಾಂಪತ್ಯ ಜೀವನದಲ್ಲಿ ವೈಮನಸ್ಸು, ಜಗಳಗಳು ನಡೆಯುತ್ತಿತ್ತೆಂದು ತಿಳಿದುಬಂದಿದೆ. ಮೃತ ವಿಶ್ವನಾಥ ಡಿಪ್ಲೋಮಾ ಇಂಜಿನಿಯರ್ ವಿದ್ಯಾಭ್ಯಾಸ ಮಾಡಿದ್ದು, ಗ್ರಾಮದಲ್ಲೇ ಕೃಷಿ ಕಾಯಕ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ತಂದೆ ಮಾಜಿ ಸೈನಿಕರಾಗಿದ್ದಾರೆ ಎನ್ನಲಾಗಿದೆ.ಗಂಡ, ಹೆಂಡತಿ ಇಬ್ಬರ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಕವಿತಾ ತವರು ಮನೆಗೆ ತೆರಳಿದ್ದು, ಬಳಿಕ ಗಂಡನ ಮನೆಗೆ ಮರಳಿ ಬಂದಿರಲಿಲ್ಲ. ಆದರೆ ಸುಮಾರು 15 ದಿನಗಳ ಹಿಂದಷ್ಟೇ ಮತ್ತೆ ಗಂಡನ ಮನೆಗೆ ವಾಪಸ್ ಬಂದಿದ್ದಳು ಎಂದು ತಿಳಿದುಬಂದಿದೆ.

ಮಂಗಳವಾರ ರಾತ್ರಿ ವೇಳೆ ದಂಪತಿಯ ನಡುವೆ ಮತ್ತೆ ಜಗಳ ಉಂಟಾಗಿದ್ದು, ಆಕ್ರೋಶಗೊಂಡ ಕವಿತಾ ಕಬ್ಬಿಣದ ಸಲಾಕೆಯಿಂದ ವಿಶ್ವನಾಥ ಅವರ ತಲೆಗೆ ಬಲವಾಗಿ ಹೊಡೆದಿದ್ದಾಳೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ವಿಶ್ವನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.ಘಟನೆ ನಡೆದ ವೇಳೆ ಮನೆಯ ಮಹಡಿಯಲ್ಲಿಕೊಲೆಯಾದ ವಿಶ್ವನಾಥ ತಾಯಿ ಮಲಗಿಕೊಂಡಿದ್ದರೆ, ತಂದೆ ಮನೆಯ ಹೊರಭಾಗದಲ್ಲಿ ಮಲಗಿದ್ದರೆಂದು ತಿಳಿಸಿದ್ದಾರೆ.
ಕೊಲೆಯಾದ ವಿಶ್ವನಾಥ ಹಾಗೂ ಕೊಲೆ ಆರೋಪಿ ಕವಿತಾ ದಂಪತಿಗೆ ಮೂರು ವರ್ಷದ ಗಂಡು ಮಗು ಇದ್ದು, ತಂದೆಯನ್ನು ಕಳೆದುಕೊಂಡು ಮಗು ಅನಾಥವಾಗಿರುವುದು ಮನಕಲಕುವಂತಾಗಿದೆ.
.ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿ. ಎಸ್. ಐ ಎಫ್. ಮಣ್ಣೂರ ತಿಳಿಸಿದ್ದಾರೆ
ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣ ದಾಖಲು ಮಾಡಿರುವ ಮ್ರತನ ತಾಯಿ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಜೀವನ ಇರಲಿಲ್ಲ,ಮದುವೆಯಾದ ನಂತರ ಕೊಲೆ ಆರೋಪಿ ಪದೆಪದೆ ತವರು ಮನೆಗೆ ಹೋಗುತ್ತಿದ್ದಳು,ಅವಳ ತಂದೆ-ತಾಯಿಯ ಒತ್ತಾಯದಿಂದ ನಮ್ಮ ಮಗಳ ಮದುವೆಗೆ ಬಂದಿದ್ದಳು ಮದುವೆ ಮುಗಿದ ತಕ್ಷಣ ತವರು ಸೇರಿದ್ದಳು.ಮತ್ತೆ ವಾಪಸು ಬಂದು ನನ್ನ ಮಗನನ್ನು ತಾವು ಮಲಗುವ ಕೊಠಡಿಯಲ್ಲಿ ಮಧ್ಯ ರಾತ್ರಿ ಕಬ್ಬಿಣದ ರಾಡನಿಂದ ಬಲವಾಗಿ ತಲೆಗೆ ಹೊಡೆದು ಕೊಲೆಗೆ ಕಾರಣಳಾಗಿದ್ದಾಳೆ ಎಂದಿದ್ದಾರೆ.
