ವಿಜಯ ಸಿಂಧೂರ, ಲಕ್ಷ್ಮೇಶ್ವರ
ಪಟ್ಟಣದಲ್ಲಿ ಗುರುವಾರ ಮಧ್ಯರಾತ್ರಿ ಗಾಳಿ ಗುಡುಗು ಮಿಂಚಿನೊಂದಿಗೆ ಸುರಿದ ಭಾರಿ ಮಳೆಗೆ ಪಟ್ಟಣದ ಇಟ್ಟಿಕೆರೆಯ ಪಕ್ಕದ ಸಾಯಿಬಾಬಾ ದೇವಸ್ಥಾನದ ಹತ್ತಿರ ನೀರು ಜಮಾಗೊಂಡು ಮನೆಗಳಿಗೆ ನುಗ್ಗುವ ಬಿತಿ ಉದ್ಭವಿಸಿತ್ತು ಇದನ್ನು ಮನಗಂಡ ಸ್ಥಳೀಯರು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಫೋನ್ ಮಾಡಿ ತಿಳಿಸಿದ್ದಾರೆ ಇದಕ್ಕೆ ತಕ್ಷಣ ಸ್ಪಂದಿಸಿದ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್ ಮುದುಗಲ್ ಅವರು ಜೆಸಿಬಿ ಹಾಗೂ ಸಿಬ್ಬಂದಿಗಳೊಂದಿಗೆ ಜನತೆಗೆ ಎದುರಾಗಬಹುದಿದ್ಬಂದ ಸಮಸ್ಯೆ ಪರಿಹಾರ ಮಾಡಿದರು.

ರಭಸದಿಂದ ಹರಿಯುವ ಮಳೆ ನೀರು ಸರಾಗವಾಗಿ ಹೋಗಲು ದಾರಿ ಮಾಡಿದ್ದಾರೆ ಹಾಗೂ ಈಶ್ವರ ನಗರ ಹಾಗೂ ಪಿಎಸ್ ಬಿ ಡಿ ಬಾಲಕಿಯರ ಶಾಲೆಯ ಹತ್ತಿರದ ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದು ಮರದ ಭಾಗಗಳನ್ನು ತೆರವುಗೊಳಿಸಿ ರಸ್ತೆ ಸಂಚಾರ ಅಡಚಣೆಯಾಗಿದ್ದನ್ನು ಸುಗಮ ಸಂಚಾರಕ್ಕೆ ಅನುಕೂಲ ಮಾಡಿದರು.
ಮಳೆಯಿಂದ ಆದ ಸಮಸ್ಯೆಯನ್ನು ತಕ್ಷಣ ಬಗೆಹರಿಸಿದ್ದಾರೆ ಹಾಗೂ ಮಳೆ ಸೇರಿದಂತೆ ಇನ್ನಿತರ ಯಾವುದೇ ತುರ್ತು ಪರಿಸ್ಥಿತಿ ಸಮಯ ಕಂಡುಬಂದಲ್ಲಿ ಪುರಸಭೆಗೆ ಫೋನ್ ಮುಖಾಂತರ ತಿಳಿಸಿರಿ ಅದಕ್ಕಾಗಿ ಪುರಸಭೆಯಿಂದ ಪ್ರತ್ಯೇಕವಾಗಿ ತಂಡವನ್ನು ರಚಿಸಲಾಗಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್ ಮುದುಗಲ್ ಅವರು ತಿಳಿಸಿದ್ದಾರೆ
