ರಾಜೀವಗಾಂಧಿ ಶಿಕ್ಷಣ ಸಂಸ್ಥೆಗೆ ಮತ್ತೊಂದು ಕಿರೀಟ, ಸಿ.ಬಿ.ಎಸ್.ಸಿ ಶಾಲೆ ಮಂಜೂರ

ವಿಜಯ ಸಿಂಧೂರ ರೋಣ

ರೋಣ ವಿಧಾಸಭಾ ಮತಕ್ಷೇತ್ರದ ಬಡ,ಆರ್ಥಿಕ ಹಿಂದುಳಿದ,ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಹದಾಸೆಯಿಂದ ಕ್ಷೇತ್ರದ ಶಾಸಕರು,ರಾಜ್ಯ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಸಹೋದರ ಜಿ.ಎಸ್.ಪಾಟೀಲರು ತಮ್ಮ ಸಮಾನ ಮನಸ್ಕರೊಂದಿಗೆ ಚರ್ಚಿಸಿ ಕಳೇದ 30 ವರ್ಷಗಳ ಹಿಂದೆ ಸ್ಥಾಪಿಸಿರುವ ಶಿಕ್ಷಣ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದ್ದು,ನರ್ಸರಿಯಿಂದ ಹಿಡಿದು ವೈದ್ಯಕೀಯದವರೆಗೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಕಲ್ಪಸಿದ್ದು,ಈ ಸಂಸ್ಥೆಯ ಮೂಲಕ ನೂರಾರು ಜನಪರ ಕಾರ್ಯಗಳನ್ನು ಈ ಭಾಗದ ಜನತೆಗೆ ಒದಗಿಸಿದ್ದು ಪ್ರಸಕ್ತ ೨೦೨೬-೨೭ನೇ ಶೈಕ್ಷಣಿಕ ಸಾಲಿಗೆ ಸಿಬಿಎಸ್‌ಸಿ ಶಾಲೆ ಕೇಂದ್ರ ಸರಕಾರದಿಂದ ಮಂಜೂರಾಗಿದ್ದು ರಾಜೀವಗಾಂಧಿ ಶಿಕ್ಷಣ ಸಂಸ್ಥೆಗೆ ಮತ್ತೊಂದು ಕಿರೀಟ ಎಂದು ಧಾರವಾಡ ಕೆ.ಸಿ.ಸಿ ಬ್ಯಾಂಕ್ ಮಾಜಿ ಅಧ್ಯಕ್ಷ,ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಐ.ಎಸ್.ಪಾಟೀಲ ಹೇಳಿದರು

oppo_2

ಅವರು ಮಂಗಳವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಸಿ.ಬಿ.ಎಸ್.ಸಿ ನೂತನ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ನರ್ಸರಿ ಎಲ್.ಕೆ.ಜಿ,ಯುಕೆಜಿಯಿಂದ ಹಿಡಿದು ನಗರದ ಪ್ರತಿಷ್ಠಿತ ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಕಳೆದ ೨೦ ವರ್ಷಗಳಿಂದ ಗ್ರಾಮೀಣ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಜಿ.ಎಸ್.ಪಾಟೀಲರ ಪರಿಶ್ರಮದಿಂದ ಹೆಸರುವಾಸಿಯಾಗಿದೆ. ಮಾತೋಶ್ರೀ ಬಸಮ್ಮನವರು ಪಾಟೀಲ ಇವರ ಹೆಸರಿನಲ್ಲಿ ಸಿ.ಬಿ.ಎಸ್.ಸಿ ಶಾಲೆ ಕಾರ್ಯಾರಂಭ ಮಾಡಲಿದ್ದು, ೧ ರಿಂದ ೯ನೇ ತಗರತಿಯವಗೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ತರಗತಿಗಳು ಆರಂಭವಾಗಲಿದೆ ಎಂದರು

ಸೆಂಟ್ರಲ್ ಬೊರ್ಡ ಆಫ್ ಸೆಕೆಂಡರಿ ಎಜುಕೇಶನ್(ಸಿ.ಬಿ.ಎಸ್.ಸಿ) ಶಾಲೆ ಮಂಜೂರಾತಿಗೆ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದು,ಕೇಂದ್ರ ಸರಕಾರದಿಂದ ಹಲವಾರು ಆಯಾಮಗಳಲ್ಲಿ ವಿಕ್ಷಣೆ ಮಾಡಿದ್ದು,ಸಂಸ್ಥೆಯ ಆವರಣದಲ್ಲಿರುವ ನೂತನ ಸುಸಜ್ಜಿತ ಕಟ್ಟಡ,ವಿಜ್ಞಾನ,ತಂತ್ರಜ್ಞಾನ ವಿಭಾಗಗಳು,ವಿಶಾಲವಾದ ಆಟದ ಮೈದಾನ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳು ಇಲ್ಲಿವೆ ಎಂಬುದನ್ನು ಮನಗಂಡು,ಶಾಸಕ ಜಿ.ಎಸ್.ಪಾಟೀಲರು ಈ ಭಾಗದ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಮಹದಾಸೆಗೆ ಈ ಶಾಲೆ ಮಂಜೂರಾಗಿದ್ದು ಆಡಳಿತ ಮಂಡಳಿಗೆ ಸಂತಸ ತಂದಿದೆ ಎಂದರು

ರೋಣ ನಗರದಲ್ಲಿ ಇಲ್ಲಿಯವರೆಗೂ ಸಿ.ಬಿ.ಎಸ್.ಸಿ ಶಿಕ್ಷಣ ವ್ಯವಸ್ಥೆ ಇರಲಿಲ್ಲ,ಈ ಭಾಗದ ಬಡ,ಆರ್ಥಿಕವಾಗಿ ಹಿಂದುಳಿದ ಮತ್ತು ರೈತ ಕುಟುಂಬಗಳ ವಿದ್ಯಾರ್ಥಿಗಳೂ ಸಹ ಸಿ.ಬಿ.ಎಸ್.ಸಿ ಶಿಕ್ಷಣ ಪಡೆಯಬೇಕು.ಉಳ್ಳವರ ಮಕ್ಕಳಂತೆ ಉನ್ನತ ವ್ಯಾಸಂಗದ ಜೊತೆಗೆ ಅರ್ಹತೆಗೆ ತಕ್ಕ ಹುದ್ದೆಯನ್ನು ಹೊಂದಬೇಕು ಎಂಬ ನಿಟ್ಟಿನಲ್ಲಿ ಶಾಸಕ ಜಿ.ಎಸ್.ಪಾಟೀಲರ ಸತತ ಪರಿಶ್ರಮಕ್ಕೆ ಸಿಕ್ಕ ಫಲವಾಗಿದೆ ಎಂದು ಹೇಳಿದರು

oppo_2

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮಿಥುನ್ ಪಾಟೀಲ ಮಾತನಾಡಿ,ಇದು ಇಂದು,ನಿನ್ನೆಯ ಕನಸಲ್ಲ ಶಾಸಕರಾದ ಜಿ.ಎಸ್.ಪಾಟೀಲರ ನಿರಂತರ ಹೋರಾಟ ಬಡ ಮಕ್ಕಳ ಬಗ್ಗೆ ಕಾಳಜಿಗೆ ದೊರೆತ ಕಿರೀಟ. ಕಳೇದ ೩೦ ವರ್ಷಗಳ ಹಿಂದೆ ತೆರೆದಿರುವ ಶಿಕ್ಷಣ ಸಂಸ್ಥೆ ಇಂದು ನರ್ಸರಿಯಿಂದ ಹಿಡಿದು ವೈದ್ಯರಾಗುವತನ ಕಟ್ಟಿ ಬೆಳೆಸಿದ್ದು,ಈ ಭಾಗದ ಮಕ್ಕಳೂ ಅದರಲ್ಲೂ ರೋಣ ನಗರದಲ್ಲಿ ಇಲ್ಲಿಯವರೆಗೂ ಸಿ.ಬಿ.ಎಸ್.ಸಿ ಶಾಲೆ ಇರಲಿಲ್ಲ ಅದನ್ನು ತೆರೆಯಬೇಕು ಎನ್ನುವುದು ಸಂಸ್ಥೆಯ ಎಲ್ಲಾ ವ್ಯವಸ್ಥೆ ಹಾಗೂ ಗುಣಮಟ್ಟದ ಸೌಲಭ್ಯಗಳಿಗೆ ಕೇಂದ್ರ ಸರಕಾರದಿಂದ ಸಿ.ಬಿ.ಎಸ್.ಸಿ ಶಾಲೆ ಮಂಜೂರಾಗಿರುವುದು ಸಂಸ್ಥೆಗಷ್ಟೇ ಅಲ್ಲ,ಈ ಭಾಗದ ಶಿಕ್ಷಣ ಪ್ರೇಮಿಗಳಲ್ಲೂ ಸಂಸತ ಮೂಡಿಸಿದೆ ಎಂದರು

ಆಯುರ್ವೆದಿಕ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಐಬಿ.ಕೊಟ್ಟೂರಶೆಟ್ಟರ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಗೆ ಪ್ರಸಕ್ತ ಸಾಲಿನಿಂದಲೇ ಶಾಲೆ ಆರಂಭಕ್ಕೆ ಕೇಂದ್ರದಿAದ ಮಂಜೂರಾತಿ ಆದೇಶ ಬಂದಿದೆ.ಕಳೇದ ವರ್ಷವೇ ಮಂಜೂರಾತಿಗೆ ಅರ್ಜಿ ಸಲ್ಲಿಸಲಾಗಿತ್ತು.ಸಿ.ಬಿ.ಎಸ್.ಸಿ ಶಾಲೆ ಮಂಜೂರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕೇಂದ್ರದ ತಂಡ ಅನೇಕ ಬಾರಿ ಸಂಸ್ಥೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸದ್ಯ ಹಸಿರು ನಿಶಾನೆ ತೋರಿಸಿದ್ದು, ಕೇಲವ ೮ ತಿಂಗಳಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು,ಇಲ್ಲಿ ಮಕ್ಕಳಿಗೆ ಕಲಿಕೆಗೆ ಸಂಬAಧಪಟ್ಟ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗಿದೆ.ನುರಿತ ಮತ್ತು ಅನುಭವಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು

ಈ ಸಮಯದಲ್ಲಿ ಪ್ರಾಚಾರ್ಯ ಎಸ್.ಎಚ್.ಸಂಗೋಟಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು,ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!