ಕೃಷಿ ಕೂಲಿ ಕಾರ್ಮಿಕರ ಮಗ ಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆಗೆ ಪ್ರಥಮ

ವಿಜಯ ಸಿಂಧೂರ ಗದಗ

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ಕೃಷಿ ಕೂಲಿ ಕಾರ್ಮಿಕ ದಂಪತಿಗಳಾದ ಈರಪ್ಪ-ಲಿಲಿತಾ ಸೋಬಗಿನ ಇವರ ಮಗ ಪ್ರವೀಣಕುಮಾರ ಸೊಬಗಿನ ತಂದೆ,ತಾಯಿಯ ಜೋತೆಗೆ ಶಾಲೆಯ ಬಿಡುವಿನ ಸಮಯದಲ್ಲಿ ಕೃಷಿ ಕೂಲಿ ಮಾಡುತ್ತಾ ಪ್ರವೀಣ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಪ್ರವೀಣಕುಮಾರ ಬಡತನದ ನಡುವೆಯೂ ಯಾವುದೇ ಟ್ಯೂಷನ್ ಇಲ್ಲದೆ ತಾನೇ ಮನೆಯಲ್ಲಿ ಓದಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಟಾಪರ್ ಆಗಿ ೬೨೫ಕ್ಕೆ ೬೨೨ ಅಂಕಗಳನ್ನು ಪಡೆದು ಓದಿದ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿರುವನು.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸುಕ್ಷೇತ್ರ ಇಟಗಿ ಗ್ರಾಮದ ಆದರ್ಶ ಶಾಲೆಯಲ್ಲಿ ಆರನೇ ತರಗತಿಯಿಂದ ಪ್ರವೇಶ ಪಡೆದು ಉತ್ತಮ ವಿದ್ಯಾರ್ಥಿಯಾಗಿ ಸಾಧನೆ ಮಾಡಿದ್ದಾನೆ.ಈ ವಿದ್ಯಾರ್ಥಿ ಎಲ್ಲಾ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿದ್ದ ತಂದೆ-ತಾಯಿಗೆ ಆಸರೆಯಾಗುವ ಮೂಲಕ ಶಾಲೆಯಲ್ಲೂ ಓದಿನಲ್ಲಿ ಮುಂದಿದ್ದ ಇದರಿಂದಲೇ ಇಂತಹ ಅದ್ಬುತ ಸಾಧನೆ ಮಾಡಲು ಸಾಧ್ಯವಾಗಿದೆ.ಇವರನ ಸಾಧನೆ ನಮಗೂ ಗೌರವ ತಂದಿದೆ ಎಂದು ಆದರ್ಶ ಶಾಲೆಯ ಮುಖ್ಯೋಪಾಧ್ಯಾಯನಿ ಡಾಲಾಯತ್ ತಿಳಿಸಿದರು.

ವಿದ್ಯಾರ್ಥಿ ಪ್ರವೀಣಕುಮಾರ ಸೊಬಗಿನ ಮಾತನಾಡಿ, ಜಿಲ್ಲೆಗೆ ಟಾಪರ್ ಆಗುತ್ತೇನೆಂದು ನಿರೀಕ್ಷೆ ಇರಲಿಲ್ಲ, ಪ್ರಾರಂಭದ ಹಂತದಿಂದಲೂ ಹೆಚ್ಚುವರಿ ಶ್ರಮ ಹಾಕಿ ಏನು ಓದುತ್ತಿರಲಿಲ್ಲ. ನಂತರದ ದಿನಗಳಲ್ಲಿ ಶಾಲಾ ಶಿಕ್ಷಕರು ಪ್ರತಿವಾರ ಮನೆಗೆ ಬಂದು ಪೋಷಕರೊಂದಿಗೆ ಮಾತನಾಡಿದರು. ಬಳಿಕ ನಾನು ಸಹ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತೆಂದು ಈ ಫಲಿತಾಂಶಕ್ಕಾಗಿ ಶಾಲಾ ಮುಖ್ಯ ಶಿಕ್ಷಕರು, ಆಡಳಿತ ವರ್ಗ ಹಾಗೂ ತಂದೆ ತಾಯಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಹೇಳಿದನು

ವಿದ್ಯಾರ್ಥಿ ತಂದೆ,ತಾಯಿ ಕೇವಲ ಅರ್ಧ ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಅಷ್ಟೇ ಭೂಮಿಯಿಂದ ಜೀವನ ನಿ ಕಷ್ಟ ಹೀಗಾಗಿ ನೆರೆ ಹೊರೆಯ ರೈತರ ಜಮೀನುಗಳಲ್ಲಿ ಕೃಷಿ ಕೂಲಿ ಮಾಡುವ ಮೂಲಕ ಮೂರು ಮಕ್ಕಳನ್ನು ಓದಿಸುತ್ತಿದ್ದು,ಪ್ರವೀಣ ಒಂದನೇ ಮಗ,ಇನ್ನಿಬ್ಬರು ಸ್ಥಳೀಯ ಸರಕಾರಿ ಶಾಲೆಯಲ್ಲಿ ವ್ಯಾಸಂಗವನ್ನು ಕೃಷಿ ಕೆಲಸ ಮಾಡುತ್ತ ಕಷ್ಟಪಟ್ಟು ಮಗನನ್ನು ಓದಿಸಿದರು. ತಾವು ಇದುವರೆಗೂ ಮಗನಿಗೆ ಚೆನ್ನಾಗಿ ಓದು ಎಂದೂ ಒತ್ತಡ ಹೇರುತ್ತಿರಲಿಲ್ಲ. ರಾತ್ರಿ ಹೆಚ್ಚು ಸಮಯದವರೆಗೂ ಓದಿದರೆ ಆರೋಗ್ಯ ಹಾಳಾಗುತ್ತದೆ. ನಿದ್ದಯೂ ಮಾಡಬೇಕು. ಓದುವ ಸಮಯದಲ್ಲಿ ಮಾತ್ರ ಓದು ಎಂದು ಹೇಳುತ್ತಿದ್ದೆ. ಇದೀಗ ಮಗನ ಸಾಧನೆ ನಮಗೆ ಅಪಾರ ಸಂತೋಷ ನೀಡಿದೆ ಎಂದು ತಿಳಿಸಿದರು.

ವಿದ್ಯಾರ್ಥಿಯ ತಾಯಿ ಲಲಿತಾ ಕೂಡಾ ಕೃಷಿ ಕೂಲಿ ಮಾಡಿದರೂ ಒಬ್ಬ ಒಳ್ಳೆಯ ಗೃಹಿಣಿಯಾಗಿದ್ದು ತಾವು ಮಗನಿಗೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ನೀಡಿದ್ದೇವೆಯೇ ಹೊರತು ಹೆಚ್ಚುವರಿಯಾಗಿ ನಾವೇನು ಮಾಡಲು ಸಾಧ್ಯವಾಗಿಲ್ಲ, ಅವನ ಈ ಫಲಿತಾಂಶಕ್ಕೆ, ಎಲ್ಲಾ ಪ್ರವೀಣನ ಶ್ರಮವೇ ಆಗಿದೆ. ನಮ್ಮ ಮಗ ನಮ್ಮ ಹೆಮ್ಮೆ ಎಂದು ತಿಳಿಸಿದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!