ವಿಜಯ ಸಿಂಧೂರ, ನರಗುಂದ
ಪಟ್ಟಣದ ಶ್ರೀ ಸಿದ್ದರಾಮೇಶ್ವರ ನಗರದ ವಡ್ಡರ ಓಣಿಯಲ್ಲಿ ಏಪ್ರಿಲ್ 25 ಶನಿವಾರ ಬೆಳಿಗ್ಗೆ 11-30 ಕ್ಕೆ ಕರುನಾಡು ಕಾರ್ಮಿಕರ ವೇದಿಕೆ (ರಿ) ನರಗುಂದ ಘಟಕ, ಕೂಲಿ ಕಾರ್ಮಿಕರ ರೈತ ಹಾಗೂ ಶೋಷಿತರ ಕನ್ನಡಪರ ಸಂಘಟನೆ ವತಿಯಿಂದ ನೂತನ ಕಛೇರಿ ಉದ್ಘಾಟನಾ ಸಮಾರಂಭ ನೆರವೇರಲಿದೆ.
ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕರುನಾಡು ಕಾರ್ಮಿಕರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷ ಚಂದ್ರಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕರುನಾಡು ಕಾರ್ಮಿಕರ ವೇದಿಕೆ ಮಹಿಳಾ ಅಧ್ಯಕ್ಷೆ ಲಕ್ಷ್ಮೀಗೌಡ, ಯಾಸಿನ್ ಮುಲ್ತಾನಿ, ಕಾರ್ಮಿಕ ಜಿಲ್ಲಾಧಿಕಾರಿ ಶ್ರೀಶೈಲ ಸೋಮನಕಟ್ಟಿ, ಸಿಪಿಐ ಮಂಜುನಾಥ ನಡುವಿನಮನಿ, ಅಸಿಸ್ಟಂಟ್ ಲೇಬರ್ ಕಮಿಶನರ್ ಸಚೀನ್, ತಹಶೀಲ್ದಾರ ಶ್ರೀಶೈಲ ತಳವಾರ, ಕಾರ್ಮಿಕ ನಿರೀಕ್ಷಕಿ ಪೂಜಾ ಶಿಂಧೆ, ಎಸ್. ಎಸ್. ಕಾಳಗಿ, ರಾಕೇಶ ಹಬೀಬ, ಸಂಜೀವ ನಲವಡೆ, ಜಿಲ್ಲಾಧ್ಯಕ್ಷ ಶಂಕರ ಸುರೇಬಾನ, ಭರತರಾಜ ಕಟ್ಟಿಮನಿ, ಮಾರುತಿ ಕಟ್ಟಿಮನಿ, ಜ್ಯೋತಿ ಹಡಪದ ಇರುವರೆಂದು ತಾಲೂಕಾಧ್ಯಕ್ಷ ರೆಹಮಾನಸಾಬ ಎಲಿಗಾರ ತಿಳಿಸಿರುತ್ತಾರೆ.
