ವಿಭೂತಿಹಳ್ಳಿಯ ಸರಕಾರಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯು ಶೇ 100 ರಷ್ಟು ಫಲಿತಾಂಶ

ವಿಜಯ ಸಿಂಧೂರ ನ್ಯೂಸ್

ಅಲಮೇಲ: ಸ್ಥಳೀಯ ತಾಲೂಕಿನ ವಿಭೂತಿಹಳ್ಳಿಯ ಸರಕಾರಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ದಾಖಲಿಸಿ ಅಭೂತಪೂರ್ವ ಸಾಧನೆ ಮಾಡಿದೆ.

ಶಾಲೆಯ ಒಟ್ಟು 24 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ (Distinction) ಉತ್ತೀರ್ಣರಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

ಪದ್ಮಾವತಿ ತಳಕೇರಿ: 625ಕ್ಕೆ 608 ಅಂಕಗಳನ್ನು (ಶೇ. 97.28) ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಪೂಜಾ ನೈಕೋಡಿ: 606 ಅಂಕ (ಶೇ. 97.00) ಪಡೆದು ದ್ವಿತೀಯ ಸ್ಥಾನ.ಭಾಗ್ಯಲಕ್ಷ್ಮಿ ಬಂಡಗಾರ: 602 ಅಂಕ (ಶೇ. 96.32) ಪಡೆದು ತೃತೀಯ ಸ್ಥಾನ.ವೇದಾಂತಿ ಹಿಕ್ಕನಗುತ್ತಿ: 600 ಅಂಕ (ಶೇ. 96.00) ಗಳಿಸಿ ಶ್ಲಾಘನೀಯ ಸಾಧನೆ ಮಾಡಿದ್ದಾರೆ.

ವಿಷಯವಾರು ನೂರಕ್ಕೆ ನೂರು ಅಂಕಗಳು:

ಹಿಂದಿ: 10 ವಿದ್ಯಾರ್ಥಿನಿಯರು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.

ಕನ್ನಡ: ಇಬ್ಬರು ವಿದ್ಯಾರ್ಥಿನಿಯರು 100ಕ್ಕೆ 100 ಅಂಕ ಪಡೆದಿದ್ದಾರೆ.

ಸಮಾಜ ವಿಜ್ಞಾನ: ಇಬ್ಬರು ವಿದ್ಯಾರ್ಥಿನಿಯರು 100ಕ್ಕೆ 100 ಅಂಕಗಳನ್ನು ಸಾಧಿಸಿದ್ದಾರೆ.

ವಿದ್ಯಾರ್ಥಿನಿಯರ ಈ ಅಮೋಘ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ ಪ್ರಭಾಕರ್ ಪಾಟೀಲ್, ಹಿಂದಿ ಶಿಕ್ಷಕರಾದ ಬಸವರಾಜ ಭೂತಿ, ಕನ್ನಡ ಶಿಕ್ಷಕ ಧರೆಪ್ಪ ಬಿರಾದಾರ್, ಗಣಿತ ಶಿಕ್ಷಕಿ ಶ್ರೀಮತಿ ಎಸ್.ಎ. ಶೇಖ, ವಿಜ್ಞಾನ ಶಿಕ್ಷಕ ಎಂ.ಎ. ಫಿರ್ಜಾದೆ, ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ರೂಪಾದೇವಿ, ಆಂಗ್ಲ ಭಾಷೆ ಶಿಕ್ಷಕಿ ಶ್ರೀಮತಿ ಸವಿತಾ ಆಸಂಗಿಹಾಳ, ದೈಹಿಕ ಶಿಕ್ಷಕ ಈಶ್ವರಪ್ಪ ಬಿರಾದಾರ್, ಗಣಕಯಂತ್ರ ಶಿಕ್ಷಕ ಶ್ರೀನಾಥ ನೈಕೋಡಿ, ಶುಶ್ರೂಷಾಧಿಕಾರಿ ಶ್ರೀಮತಿ ಸುನಿತಾ ಗೇರ್ಡೇ, ಚಿತ್ರಕಲಾ ಶಿಕ್ಷಕಿ ಶ್ರೀಮತಿ ಜ್ಯೋತಿ ದುರ್ಗಾ, ಸಂಗೀತ ಶಿಕ್ಷಕ ಶ್ರೀ ರೇಣುಕಾಚಾರ್ಯ, ನಿಲಯ ಪಾಲಕಿ ಮಾಲತಿ ತಡಲಗಿ ಹಾಗೂ ಪ್ರಥಮ ದರ್ಜೆ ಸಹಾಯಕಿ ಗಂಗುಬಾಯಿ ಲಾವಟೆ ಸೇರಿದಂತೆ ಶಾಲೆಯ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ಸಾಧಕ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!