ವಿಜಯ ಸಿಂಧೂರ ನ್ಯೂಸ್ ಸಿಂಧಗಿ
ಇಂದು ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ ಅಂಗವಾಗಿ ಜಿಲ್ಲಾ ಪಂಚಾಯತ್ ವಿಜಯಪುರ ವತಿಯಿಂದ ವನಶ್ರೀ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಿಧ ವಿಭಾಗಗಳಲ್ಲಿ ಅತ್ತ್ಯುತ್ತಮ ಸಾಧನೆ ಮಾಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇವರಿಗೆ ಸನ್ಮಾನಿಸಲಾಯಿತು.

ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮ ಪಂಚಾಯತ್ ಸಂತೋಷ ತಳಗೇರಿ, ಸುಂಗಟಾಣ ಗ್ರಾಮ ಪಂಚಾಯತ್ ನ ಲಾಳೆಮಶ್ಯಕ ಕುರುಬತಹಳ್ಳಿ, ಬ್ಯಾಕೋಡ ಗ್ರಾಮ ಪಂಚಾಯತ್ ನ ಮಡಿವಾಳಪ್ಪ ಕೊಂಡಗೂಳಿ ಹಾಗೂ ಮಡಿವಾಳಪ್ಪ ಪೂಜಾರಿ, ಚಾಂದಕವಟೆ ಗ್ರಾಮ ಪಂಚಾಯತ್ ನ ಮಲಕಪ್ಪ ಬಂಟನೂರ ಬಿಲ್ ಕಲೆಕ್ಟರ್ ಗಳಿಗೆ ತೆರಿಗೆ ವಸೂಲಾತಿಯಲ್ಲಿ ಶೇಖಡ ನೂರರಷ್ಟು ಪ್ರಗತಿ ಸಾಧಿಸಿದ್ದಕ್ಕೆ ಶ್ರೀ ರಿಷಿ ಆನಂದ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀ ಪ್ರಕಾಶ ವಡ್ಡರ ಮಾನ್ಯ ಉಪ ಕಾರ್ಯದರ್ಶಿಗಳು ಸನ್ಮಾನಿಸಿ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರ ವಿತರಿಸಿದರು.

ವಿಶೇವಾಗಿ ಜಿಲ್ಲೆಯಲ್ಲಿಯೇ ಸಾರ್ವಜನಿಕರ ಕುಂದುಕೊರತೆಗಳ ಮತ್ತು ಪರಿಹಾರ ವಿಭಾಗದಲ್ಲಿ ಸಿಂದಗಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ರಾಮು ಜಿ ಅಗ್ನಿ ಇವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
