ಫಕೀರಪ್ಪ ಭ. ಮಾದರ ಅವರಿಗೆ ‘ಬಸವ ರತ್ನ’ ಪ್ರಶಸ್ತಿ ಗೌರವ

ವಿಜಯ ಸಿಂಧೂರ

ಬದಾಮಿ:ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಶ್ರೀ ಫಕೀರಪ್ಪ ಭ. ಮಾದರ ಅವರು ರಾಜ್ಯ ಮಟ್ಟದ ಪ್ರತಿಷ್ಠಿತ ಬಸವ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಹೊಳೆಆಲೂರಿನ ಎಸ್.ಎಸ್. ಆಡಿನ ಜನ ಸೇವಾ ಸಂಸ್ಥೆಯು ನೀಡುವ ಈ ಪ್ರಶಸ್ತಿಗೆ ಶ್ರೀ ಫಕೀರಪ್ಪ ಅವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ.

ಬರುವ ಮೇ 24, 2026ರ ಭಾನುವಾರದಂದು ಬೆಳಿಗ್ಗೆ 10:00 ಗಂಟೆಗೆ ಬದಾಮಿ ನಗರದ ಸ್ಪರ್ಧಾಶಕ್ತಿ ಕೇಂದ್ರದ ಎಸ್.ಎಸ್.ಬಿ.ಎಂ. ಮಹಾವಿದ್ಯಾಲಯದ ಸಭಾ ಭವನದಲ್ಲಿ (ಕೋರ್ಟ್ ಎದುರುಗಡೆ) ಆಯೋಜಿಸಲಾಗಿರುವ ಬಸವ ಕಾವ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶೋಭಾ ಎಸ್. ಆಡಿನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಅಭಿಮಾನಿ ಬಳಗದವರು ಶ್ರೀ ಫಕೀರಪ್ಪ ಭ. ಮಾದರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ: ಕನಕಪ್ಪ ಕೊತಬಾಳ ಬದಾಮಿ

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!