ಜಿಟಿಟಿಸಿಯಲ್ಲಿ ಸ್ಪೋಕನ್ ಇಂಗ್ಲೀಷ ಬೇಸಿಗೆ ಶಿಬಿರ

ವಿಜಯ ಸಿಂಧೂರ ನರಗುಂದ

ತಾಂತ್ರಿಕ ಕೌಶಲ್ಯ ತರಬೇತಿಗಳಿಗೆ ಹೆಸರಾದ ನರಗುಂದದ ಜಿಟಿಟಿಸಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಉಚಿತವಾಗಿ 10 ದಿನಗಳ ಸ್ಪೋಕನ್ ಇಂಗ್ಲೀಷ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ.

ಈ ಶಿಬಿರವು ವಿದ್ಯಾರ್ಥಿಗಳ ಇಂಗ್ಲೀಷ್ ಮಾತನಾಡುವ ಕೌಶಲ್ಯವನ್ನು ವೃದ್ಧಿಸಿ, ಅವರ ಆತ್ಮ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ. 6ನೇ ತರಗತಿಯಿಂದ 10ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ತರಬೇತಿ ಪಡೆಯಲು ಅರ್ಹರಿರುತ್ತಾರೆ. ಈಗಾಗಲೇ ಮೊದಲನೇ ಬ್ಯಾಚ್ ಪ್ರಾರಂಭವಾಗಿದ್ದು, ಎರಡನೇ ಬ್ಯಾಚ್ ಏಪ್ರಿಲ್ 28 ರಿಂದ ಪ್ರಾರಂಭವಾಗುತ್ತದೆ. ಜಿಟಿಟಿಸಿ ನರಗುಂದ ಕೇಂದ್ರದಲ್ಲಿ ಉನ್ನತ ತಂತ್ರಜ್ಞಾನ ಮತ್ತು ತರಬೇತಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ದಿನಾಂಕ 27.04.2026 ರ ಒಳಗಾಗಿ ಖುದ್ದಾಗಿ ಜಿಟಿಟಿಸಿಗೆ ಭೇಟಿ ನೀಡಿ ಪ್ರವೇಶ ಪಡೆಯಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಜಿಟಿಟಿಸಿ, ಅರ್ಬಾನ್ ಗ್ರಾಮ, ಅಳಗವಾಡಿ ರಸ್ತೆ, ನರಗುಂದ, ದೂರವಾಣಿ 8088536896 ಸಂಪರ್ಕಿಸಬೇಕು ಎಂದು ಪ್ರಾಂಶುಪಾಲ ಮಾರುತಿ ಭಜಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!