ನರಗುಂದ: ಸರಕಾರಿ ಸೌಲಭ್ಯ ಪಡೆಯಲು ಕಾರ್ಮಿಕರ ಕಾರ್ಡ ಅವಶ್ಯ. ಮೂರು ವರ್ಷಕ್ಕೊಮ್ಮೆ ಕಾರ್ಡ ರಿನಿವಲ್ ಆಗಿದ್ದರೆ ಮಾತ್ರ, ಪಿಂಚಣಿ, ಕಿಟ್, ಸುರಕ್ಷತಾ ಕಿಟ್ ಸೇರಿದಂತೆ ಹಲವಾರು ಸರಕಾರಿ ಸೌಲಭ್ಯಗಳು ಸಿಗಲಿವೆ ಎಂದು ಕರುನಾಡು ಕಾರ್ಮಿಕರ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಗೌಡ ಅವರು ಹೇಳಿದರು.

ಪಟ್ಟಣದ ಶ್ರೀ ಸಿದ್ಧರಾಮೇಶ್ವರ ನಗರದಲ್ಲಿ ಶನಿವಾರ ಕರುನಾಡ ಕಾರ್ಮಿಕರ ವೇದಿಕೆ ವತಿಯಿಂದ ನೂತನ ಕಛೇರಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿರು
ನೊಂದ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಕಾರ್ಮಿಕರ ಕಚೇರಿಗಳಿವೆ. ಕಾರ್ಮಿಕರು ತಾವು ಮಾಡುವ ಕೆಲಸಕ್ಕೆ ಸಂಭಂದಿಸಿದ ಕಾರ್ಡಗಳನ್ನು ಹೊಂದಿರಬೇಕು. ಬೇರೆ ಬೇರೆ ಕಾರ್ಡಗಳಿಗೆ ಬೇರೆ ರೀತಿ ಸೌಲಭ್ಯ ಸಿಗಲಿವೆ. ಮಕ್ಕಳನ್ನು ಶಾಲೆಗೆ ಕಳಿಸದೇ ಕೇವಲ ಕೆಲಸಕ್ಕೆ ಕಳಿಸಬಾರದು ಎಂದರು

ನಿಜವಾಗಿ ಕಾರ್ಮಿಕರ ಕಾರ್ಡ ಹೊಂದಿದವರಿಗೆ ಮಾತ್ರ ಕರುನಾಡು ಸಂಘಟನೆ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಲಿದೆ. ಪಿಂಚಣಿ, ಮದುವೆ ಸಹಾಯಧನ, ಅಂತ್ಯಕ್ರಿಯೆಗೆ ಸಹಾಯಧನ ಸರಕಾರದಿಂದ ಸಿಗಲಿದೆ ಎಂದರು.
ಪೂಜ್ಯಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದುಡಿಯುವ ವರ್ಗಕ್ಕೆ ಗೌರವ ಸಿಗಬೇಕೆನ್ನುವುದು 12ನೇ ಶತಮಾನದಿಂದ ಪ್ರಯತ್ನ ನಡೆದಿದೆ. ಸೌಲಭ್ಯಗಳು ನಿಜವಾದ ಕಾರ್ಮಿಕರಿಗೆ ಸಿಗಬೇಕಾಗಿದೆ. ಪ್ರಾಮಾಣಿಕ ಕೆಲಸದ ಹಿಂದೆ ಭಗವಂತ ಇದ್ದಾನೆ. ಕಾರ್ಮಿಕರು ದುಷ್ಚಟದಿಂದ ದೂರವಿರಬೇಕು ಎಂದರು.

ಕಷ್ಟಪಟ್ಟು ದುಡಿದ ಕಾರ್ಮಿಕರು ಕುಟುಂಬದೊಂದಿಗೆ ಸುಂದರವಾದ ಜೀವನ ನಡೆಸಲಿ. ಕಾರ್ಮಿಕರ ಉದ್ಧಾರಕ್ಕೆ ಒಳ್ಳೆಯ ಶಿಬಿರಗಳನ್ನು ಏರ್ಪಡಿಸಿ, ಕಾರ್ಮಿಕರ ಕುಟುಂಬಗಳು ಚೆನ್ನಾಗಿರಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀಗೌಡ ಮಾತನಾಡಿ, ದೇಶಕ್ಕೆ ರೈತ, ಸೈನಿಕ ಎಷ್ಟು ಮುಖ್ಯವೋ, ಕಾರ್ಮಿಕನು ಅಷ್ಟೇ ಮುಖ್ಯ. ಸರಕಾರದ ಸೌಲಭ್ಯ ಪಡೆಯಲು ಸಂಘಟನೆ ಮತ್ತು ಹೋರಾಟ ಅನಿವಾರ್ಯ. ನೊಂದ ಕಾರ್ಮಿಕರ ಜೊತೆ ಈ ಸಂಘಟನೆ ಸದಾ ಇರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಹಲವಾರು ಕಾರ್ಮಿಕರುಗಳಿಗೆ ಸುರಕ್ಷತಾ ಕಿಟ್ ಹಾಗೂ ಸಾಮಗ್ರಿ ಕಿಟ್ಟಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅವಿನಾಶ, ಯಾಸೀನ ಮುಲ್ತಾನಿ, ಅಭಿಯಂತರರಾದ ಎಸ್ ಎ ಕಾಳಗಿ, ಸಂಜು ನಲವಡೆ, ರಾಕೇಶ ಹಬೀಬ, ಜಿಲ್ಲಾಧ್ಯಕ್ಷ ಶಂಕರ ಸುರೇಬಾನ, ಮಾರುತಿ ವಡ್ಡರ, ರೆಹಮಾನಸಾಬ ಎಲಿಗಾರ, ಭರತ ಕಟ್ಟಿಮನಿ, ಗಂಗಮ್ಮ ಸಂಗಳಮಠ, ಮಂಜು ವಡ್ಡರ, ರವಿಚಂದ್ರ ವಡ್ಡರ, ನಾಗೇಶ ವಡ್ಡರ, ಕಾರ್ಮಿಕ ನಿರೀಕ್ಷಕಿ ಪೂಜಾ ಶಿಂಧೆ, ಬಸವರಾಜ ವಡ್ಡರ, ಇತರರಿದ್ದರು.
