ಪುರಸಭೆಯ ಮುಖ್ಯ ಅಧಿಕಾರಿಗಳಿಂದ ಸಾರ್ವಜನಿಕರಲ್ಲಿ ವಿನಂತಿ

ವಿಜಯ ಸಿಂಧೂರ, ಲಕ್ಷ್ಮೇಶ್ವರ

ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಯಾಗುವ ಮೇವುಂಡಿ ಜಾಕ್‌ವೆಲ್‌ನಿಂದ ಸೂರಣಗಿ ಜಲಶುದ್ಧೀಕರಣ ಘಟಕದವರೆಗೆ ಇರುವ ನೀರು ಸರಬರಾಜು ಪೈಪ್‌ಲೈನ್‌ನಲ್ಲಿ ಸೋರಿಕೆ ಉಂಟಾಗಿರುವುದರಿಂದ, ಅಮೃತ್ 2.0 ಯೋಜನೆಯಡಿ ದುರಸ್ತಿ ಕಾಮಗಾರಿ ನಡೆಯುತ್ತಿದೆ.

ಈ ಕಾಮಗಾರಿಯಿಂದ ನೀರು ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ದಯವಿಟ್ಟು 3 ರಿಂದ 4 ದಿನಗಳ ಕಾಲ ಸಹಕರಿಸಬೇಕೆಂದು.ಲಕ್ಷ್ಮೇಶ್ವರ ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರು ಪ್ರಕಟಣೆ ಮೂಲಕ ಪಟ್ಟಣದ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ .

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!